ಮಹೇಶ್​ ಬಾಬುಗೆ ಜೋಡಿಯಾಗ್ತಾರಾ ಬಾಲಿವುಡ್​ ಬ್ಯೂಟಿ ಶ್ರದ್ಧಾ ಕಪೂರ್​?; ಕೀರ್ತಿ ಸುರೇಶ್​ಗೆ ಸಿಗ್ಲಿಲ್ವಾ ಚಾನ್ಸ್​?

ಶ್ರದ್ಧಾಅಅ
Published on

‘ಸಾಹೋ‘ ಸಿನಿಮಾ ಮೂಲಕ ಬಾಲಿವುಡ್​ ನಟಿ ಶ್ರದ್ಧಾ ಕಪೂರ್ ಟಾಲಿವುಡ್​ ಸಿನಿಮಾ ಇಂಡಸ್ಟ್ರಿಗೆ ಬಂದಿದ್ದರು. ಬಹುಭಾಷೆಯಲ್ಲಿ ತೆರೆಕಂಡ ಆ ಚಿತ್ರಕ್ಕೆ ಹೇಳಿಕೊಳ್ಳುವ ಯಶಸ್ಸು ಸಿಗದಿದ್ದರೂ, ಗಳಿಕೆ ವಿಚಾರದಲ್ಲಿ ಒಳ್ಳೇ ಕಮಾಯಿ ಮಾಡಿತು. ಶ್ರದ್ಧಾಗೂ ಸೌತ್​ ಇಂಡಿಯನ್​ ಸಿನಿಮಾ ಇಂಡಸ್ಟ್ರಿಯನ್ನು ಪರಿಚಯಿಸಿತು. ಇದೀಗ ಇದೇ ನಟಿ ಮತ್ತೊಮ್ಮೆ ಸೌತ್​ ಕಡೆ ಮುಖಮಾಡಿದ್ದಾರೆ. ಅಂದರೆ, ಮತ್ತೊಂದು ತೆಲುಗು ಚಿತ್ರಕ್ಕೆ ಅವರನ್ನು ಕರೆತರುವ ಲೆಕ್ಕಾಚಾರದಲ್ಲಿದ್ದಾರೆ ಟಾಲಿವುಡ್​ ನಿರ್ದೇಶಕರು. ಈ ಮೊದಲು ಈ ಚಿತ್ರಕ್ಕೆ ಕೀರ್ತಿ ಸುರೇಶ್​ ನಾಯಕಿ ಎನ್ನಲಾಗುತ್ತಿತ್ತು.
ಹೌದು, ಪ್ರಿನ್ಸ್​ ಮಹೇಶ್ ಬಾಬು ಮತ್ತು ‘ಗೀತ ಗೋವಿಂದಂ’ ಚಿತ್ರದ ನಿರ್ದೇಶಕ ಪರಸುರಾಮ್​ ಕಾಂಬಿನೇಷನ್​ನಲ್ಲಿ ಹೊಸ ಸಿನಿಮಾ ಸಿದ್ಧವಾಗುತ್ತಿದ್ದು, ಆ ಸಿನಿಮಾಕ್ಕೆ ಶ್ರದ್ಧಾ ಅವರನ್ನು ಕರೆತರುವ ವಿಚಾರ ನಿರ್ದೇಶಕರದ್ದು. ವಿಶೇಷ ಏನೆಂದರೆ, ಈ ಸಿನಿಮಾ ಸಹ ಪ್ಯಾನ್​ ಇಂಡಿಯಾ ಲೆವೆಲ್​ನಲ್ಲಿ ಬಿಡುಗಡೆ ಆಗಲಿದೆಯಂತೆ. ತೆಲುಗಿನ ಜತೆಗೆ ಕನ್ನಡ, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಗೆ ಡಬ್​ ಆಗಿ ತೆರೆಕಾಣಲಿದೆಯಂತೆ. ಅಷ್ಟೇ ಅಲ್ಲ ಅಂದುಕೊಂಡಂತೆ ನಡೆದರೆ, ಮಹೇಶ್​ ಬಾಬು ಅವರ ಮೊದಲ ಬಹುಭಾಷಾ ಸಿನಿಮಾ ಇದಾಗಿರಲಿದೆ. ಈ ಚಿತ್ರಕ್ಕೆ ಮೈತ್ರಿ ಮೂವಿ ಮೇಕರ್ಸ್​ ಬಂಡವಾಳ ಹೂಡಲಿದೆ. (ಏಜೆನ್ಸೀಸ್)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net