

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಲಾಕ್ಡೌನ್ ಹೊತ್ತಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ರಾ? ಇನ್ಸ್ಟಾಗ್ರಾಂನಲ್ಲಿ ಅವರು ಹಾಕಿದ ಫೋಟೋವೊಂದರಿಂದ ಹೀಗೊಂದು ಅನುಮಾನ ಇದೀಗ ಶುರುವಾಗಿದೆ. ಅದೆನೆಂದರೆ, ಬಾಲಿವುಡ್ ಬ್ಯೂಟಿ ದೀಪಿಕಾ ಪಡುಕೋಣೆ ಗರ್ಭಿಣಿಯಾಗಿದ್ದಾರಂತೆ!?
ಲಾಕ್ಡೌನ್ ಆಗಿರುವುದರಿಂದ ಬಗೆಬಗೆ ಅಡುಗೆ ಮಾಡಿ ಅದರ ಫೋಟೋ ಹಂಚಿಕೊಳ್ಳುತ್ತಿದ್ದ ದೀಪಿಕಾ, ಈಗಷ್ಟೇ ಹೋಳು ಮಾಡಿದ ಹಸಿ ಮಾವಿನಕಾಯಿಯೊಂದರ ಫೋಟೋವೊಂದನ್ನು ಇನ್ಸ್ಟಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೇ ಫೋಟೋ ಹಾಕಿದ್ದೇ ತಡ ಬಗೆಬಗೆ ಕಮೆಂಟ್ಗಳು ಸಂದಾಯವಾಗುತ್ತಿದ್ದು, ಅದರಲ್ಲಿ ‘ದೀಪಿಕಾ ಗರ್ಭಿಣಿ ಆದ್ರಾ?’ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಸದ್ಯ ಈ ಪೋಸ್ಟ್ ಹಲವು ಕಾರಣಗಳಿಂದ ಕುತೂಹಲ ಮೂಡಿಸಿದೆಯಾದರೂ, ಯಾವುದಕ್ಕೂ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಸಹಜವಾಗಿ ಗರ್ಭಿಣಿಯಾದವರು ಮಾವಿನ ಕಾಯಿ ತಿನ್ನುತ್ತ ತಮ್ಮ ಬಸುರಿ ಬಯಕೆಯನ್ನು ತೀರಿಸಿಕೊಳ್ಳುತ್ತಾರೆ. ಅದೇ ಆಸೆಯನ್ನು ದೀಪಿಕಾ ಸಹ ಈಡೇರಿಸಿಕೊಂಡರಾ? ಅಥವಾ ಮಾವಿನ ಕಾಯಿ ಸೀಸನ್ ಶುರುವಾಗಿರುವುದರಿಂದ ಅದರ ರುಚಿ ಸವಿಯಲು ತಿಂದಿರಿಬಹುದಾ ಎಂಬ ಪ್ರಶ್ನೆ ಸಹ ಅಭಿಮಾನಿ ವಲಯದಲ್ಲಿ ಮೂಡಿದೆ. (ಏಜೆನ್ಸೀಸ್)