ಭಾರ್ಗವನಿಂದ ರಕ್ತದಾನ; ಹೀಗೊಂದು ಹೊಸ ಪ್ರಚಾರ ತಂತ್ರ...

Bhargava
Published on

ಬೆಂಗಳೂರು: ‘ಕಡಲ ತೀರದ ಭಾರ್ಗವ’ ಕಳೆದ ವರ್ಷವೇ ಬಿಡುಗಡೆ ಆಗಬೇಕಿದ್ದ ಸಿನಿಮಾ. ಇದೀಗ ತೆರೆಗೆ ಬರಲು ಹೊಸ ರೀತಿಯಲ್ಲಿ ತಯಾರಿ ಮಾಡಿಕೊಳ್ಳುತ್ತಿದೆ. ಪ್ರಚಾರ ಕಣಕ್ಕೂ ಇಳಿದು ರಕ್ತದಾನದ ಮೂಲಕ ಸಾಮಾಜಿಕ ಕಳಕಳಿಯ ಕೆಲಸಕ್ಕೆ ಮುಂದಾಗಿದೆ. ಪನ್ನಗ ಸೋಮಶೇಖರ್ ನಿರ್ದೇಶನದಲ್ಲಿ ತಯಾರಾಗಿರುವ ‘ ಕಡಲತೀರದ ಭಾರ್ಗವ’ ಚಿತ್ರವನ್ನು ನಿರ್ಮಾಣ ಮಾಡುವುದರ ಜತೆಗೆ ಹೀರೋ ಆಗಿಯೂ ನಟಿಸಿದ್ದಾರೆ ವರುಣ್ ರಾಜು ಮತ್ತು ಭರತ್ ಗೌಡ. ‘ಬಿಗ್​ಬಾಸ್’ ಖ್ಯಾತಿಯ ನಟಿ ಮತ್ತು ಗಾಯಕಿ ಶ್ರುತಿ ಪ್ರಕಾಶ್ ನಾಯಕಿಯಾಗಿದ್ದಾರೆ.

ಇತ್ತೀಚೆಗೆ ಇದೇ ಚಿತ್ರತಂಡ ‘ಬ್ಲೀಡ್ ಆರ್​ಸಿಬಿ’ ಅವರ ಸಹಯೋಗದೊಂದಿಗೆ ಜೆ.ಪಿ ನಗರದ ಪುಟ್ಟೇನಹಳ್ಳಿ ಸರ್ಕಾರಿ ಶಾಲೆಯ ಮೈದಾನದಲ್ಲಿ ರಕ್ತದಾನ ಶಿಬಿರ ಆಯೋಜಿಸಿತ್ತು. ಸಂಗೀತ ನಿರ್ದೇಶಕ ರಘು ದೀಕ್ಷಿತ್, ಗಾಯಕ ಅಲೋಕ್, ಬಾಮಾ ಹರೀಶ್, ಬೃಂದಾ ಆಚಾರ್ಯ, ದಿಶಾ ಪೂವಯ್ಯ ಇತರರು ಆಗಮಿಸಿ ಚಾಲನೆ ನೀಡಿದ್ದಾರೆ. ಜೂನ್​ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ತಂಡದ ಉದ್ದೇಶ. ಅನಿಲ್ ಸಿ. ಜೆ. ಸಂಗೀತ ನಿರ್ದೇಶನ, ಕೀರ್ತನ್ ಪೂಜಾರ್ ಛಾಯಾಗ್ರಹಣ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net