ಹೊಡಿ ಬದಲು ಬಿಡಿ; ಬದಲಾಯ್ತು ಬಿರಾದಾರ್ ಚಿತ್ರದ ಹೆಸರು

Biradar
Published on

ಬೆಂಗಳೂರು: ಹಿರಿಯ ನಟ ವೈಜನಾಥ ಬಿರಾದಾರ್ ಅಭಿನಯದಲ್ಲಿ ‘ನೈಂಟಿ ಹೊಡಿ ಮನೀಗ್ ನಡಿ’ ಎಂಬ ಚಿತ್ರ ಸದ್ದಿಲ್ಲದೆ ನಿರ್ವಣವಾಗುತ್ತಿದೆ ಎಂಬುದು ಕಳೆದ ವರ್ಷದ ಸುದ್ದಿ. ಈಗ ಆ ಚಿತ್ರವು ಸದ್ದಿಲ್ಲದೆ ಸೆನ್ಸಾರ್ ಆಗಿದೆ. ಸೆನ್ಸಾರ್ ಮಂಡಳಿಯ ಸೂಚನೆಯ ಮೇರೆಗೆ ಚಿತ್ರದ ಹೆಸರು ಸಹ ಬದಲಾಗಿದೆ.

‘90 ಹೊಡಿ ಮನೀಗ್ ನಡಿ ಎಂದರೆ ಜನರನ್ನು ನೇರವಾಗಿ ಕುಡಿತಕ್ಕೆ ಪ್ರಚೋದನೆ ಮಾಡಿದಂತಾಗುವು ದರಿಂದ ಹೆಸರನ್ನು ಬದಲಾಯಿಸಿ ಎಂದು ಸೆನ್ಸಾರ್ ಮಂಡಳಿಯು ಚಿತ್ರತಂಡದವರಿಗೆ ಸೂಚಿಸಿತಂತೆ. ಕೊನೆಗೆ ಅನಿವಾರ್ಯವಾಗಿ ಚಿತ್ರತಂಡದವರು, ‘90 ಬಿಡಿ ಮನೀಗ್ ನಡಿ’ ಎಂದು ಹೆಸರು ಬದಲಾಯಿಸಿದ್ದಾರೆ. ಹೆಸರಿನಲ್ಲಿ ಕೊಂಚ ಬದಲಾವಣೆಯಾದರೂ ‘90’ ಎಂಬುದು ಕಾಮನ್ ಆಗಿ ಇರಲಿದೆಯಂತೆ. ಕಾಮಿಡಿ, ಕ್ರೖೆಮ್ ಥ್ರಿಲ್ಲರ್ ಶೈಲಿಯ ಈ ಚಿತ್ರವನ್ನು ಉಮೇಶ್ ಬಾದರದಿನ್ನಿ ಮತ್ತು ನಾಗರಾಜ್ ಅರೆಹೊಳೆ ಜಂಟಿಯಾಗಿ ನಿರ್ದೇಶನ ಮಾಡಿದರೆ, ರತ್ನಮಾಲಾ ಬಾದರದಿನ್ನಿ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಬಿರಾದಾರ್ ಅಭಿನಯದ 500ನೇ ಚಿತ್ರವಾಗಿದ್ದು, ಅವರ ಜತೆಗೆ ನೀತಾ ಮೈಂರ್ದಗಿ, ಪ್ರೀತು ಪೂಜಾ, ಧರ್ಮ, ಕರಿಸುಬ್ಬು, ಪ್ರಶಾಂತ್ ಸಿದ್ದಿ ಮುಂತಾದವರು ನಟಿಸಿದ್ದಾರೆ. ಕಿರಣ್ ಶಂಕರ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ಉತ್ತರ ಕರ್ನಾಟಕದ ಭಾಗದ ಸೊಗಡಿನಲ್ಲೇ ಚಿತ್ರ ಮೂಡಿಬಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net