ಗ್ರ್ಯಾಮಿ ಅವಾರ್ಡ್ ದಾಖಲೆ ಮೆರೆದ ಬಿಲ್ಲೀ

BILLI
Published on

ಲಾಸ್ ಏಂಜಲೀಸ್​ನಲ್ಲಿ ನಡೆದ 62ನೇ ಗ್ರ್ಯಾಮಿ ಅವಾರ್ಡ್ ಪ್ರಶಸ್ತಿ ಪ್ರದಾನ ಸಮಾರಂಭಲ್ಲಿ 18 ವರ್ಷದ ಯುವತಿ, ಅಮೆರಿಕನ್ ಸಂಗೀತಗಾರ್ತಿ ಬಿಲ್ಲೀ ಎಲ್ಲಿಷ್ ಐದು ಗ್ರ್ಯಾಮಿ ಅವಾರ್ಡ್ ಪಡೆಯುವ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.

ಮಾತ್ರವಲ್ಲ, 10 ವರ್ಷದ ಹಿಂದಿನ ದಾಖಲೆಯನ್ನೂ ಮುರಿದಿದ್ದಾರೆ. ಬೆಸ್ಟ್ ಆಲ್ಬಮ್ ಆಫ್ ದ ಈಯರ್ (ಬ್ಯಾಡ್ ಗೈ), ರೆಕಾರ್ಡ್ ಆಫ್ ದ ಈಯರ್, ಸಾಂಗ್ ಆಫ್ ದ ಈಯರ್, ಬೆಸ್ಟ್ ವೋಕಲ್ ಆಲ್ಬಮ್ ಬೆಸ್ಟ್ ನ್ಯೂ ಆರ್ಟಿಸ್ಟ್ ಮೂಲಕ ಈಕೆ ಐದು ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದ್ದಾರೆ.

‘ಬೆಸ್ಟ್ ಆಲ್ಬಮ್ ಆಫ್ ದ ಈಯರ್’ ನಾಮಿನೇಷನ್​ನಲ್ಲಿ ಅರಿಯಾನಾ ಗ್ರಾ್ಯಂಡೆ, ಬಾನ್ ಐವರ್, ಲಾನಾ ಡೆಲ್ ರೆ, ಎಚ್.ಇ.ಆರ್., ಲಿಲ್ ನಾಸ್ ಎಕ್ಸ್, ಲಿಜ್ಜೊ ಮತ್ತು ವ್ಯಾಂಪೈರ್ ಅವರಿದ್ದರೂ ಬಿಲ್ಲೀ ಎಲ್ಲಿಷ್ ಈ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಒಂದರ ಹಿಂದೆ ಒಂದರಂತೆ ಪ್ರಶಸ್ತಿ ಬಂದ ಕಾರಣ, ಇನ್ನೊಂದು ಪ್ರಶಸ್ತಿ ಘೋಷಣೆ ವೇಳೆ ‘ದಯವಿಟ್ಟು ಇದು ನಾನಾಗಿರದಿರಲಿ..’ ಎಂದು ಇವರು ಪ್ರಾರ್ಥಿಸಿಕೊಂಡಿದ್ದು ಕೂಡ ಗಮನ ಸೆಳೆದಿದೆ.

ಅಲ್ಲದೆ, ಅರಿಯಾನಾ ಗ್ರಾ್ಯಂಡೆ ವಿಜೇತರಾಗಬೇಕಿತ್ತು ಎನ್ನುವ ಮೂಲಕ ಔದಾರ್ಯ ಮೆರೆದಿದ್ದಾರೆ. ‘ಬೆಸ್ಟ್ ಆಲ್ಬಮ್ ಆಫ್ ದ ಈಯರ್’ ಪಡೆದ ಅತಿ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆ ಮೂಲಕ ಬಿಲ್ಲೀ 10 ವರ್ಷಗಳ ಹಿಂದಿನ ದಾಖಲೆ ಮುರಿದು ಇತಿಹಾಸ ಸೃಷ್ಟಿಸಿದ್ದಾರೆ. 2010ರಲ್ಲಿ 20ರ ವಯಸ್ಸಿನ ಟೇಯ್ಲರ್ ಸ್ವಿಫ್ಟ್ ಈ ದಾಖಲೆ ಮಾಡಿದ್ದರು.

ಇನ್ನು ಒಂದೇ ವರ್ಷದಲ್ಲಿ ನಾಲ್ಕು ಜನರಲ್ ಫೀಲ್ಡ್ ಕೆಟಗರಿಯ ಪ್ರಶಸ್ತಿ ಪಡೆದ ಎರಡನೇ ವ್ಯಕ್ತಿ ಎಂಬ ದಾಖಲೆಗೂ ಬಿಲ್ಲೀ ಪಾತ್ರರಾಗಿದ್ದಾರೆ. 1981ರಲ್ಲಿ ಒಂದೇ ವರ್ಷದಲ್ಲಿ ಕ್ರಿಸ್ಟೋಫರ್ ಕ್ರಾಸ್ ನಾಲ್ಕೂ ಪ್ರಶಸ್ತಿಗಳನ್ನು ಗಳಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net