ಸೌಂದರ್ಯ-ತಾಂಡವ್​ಗೆ ಈ ಬಾರಿಯ ಕಿಚ್ಚನ ಚಪ್ಪಾಳೆ?; ಇಬ್ಬರ ಆಟಕ್ಕೆ ಮನಸೋತ ವೀಕ್ಷಕರು ಹೇಳಿದ್ದು ಹೀಗೆ..BBK13

ಬಿಗ್​ಬಾಸ್ ಸ್ಪರ್ಧಿಗಳು ಸೌಂದರ್ಯ, ತಾಂಡವ್
ಬಿಗ್​ಬಾಸ್ ಸ್ಪರ್ಧಿಗಳು ಸೌಂದರ್ಯ, ತಾಂಡವ್
Published on: 
  • ವೈಮನಸ್ಸು ಬದಿಗಿಟ್ಟು ತಂಡಕ್ಕಾಗಿ ಒಂದಾದ ತಾಂಡವ್​ ರಾಮ್​-ಸೌಂದರ್ಯ.

  • ಕದಿಯಲು ಮಾಸ್ಟರ್​ ಪ್ಲ್ಯಾನ್​​, ರಕ್ಷಕರನ್ನೇ ಮಣಿಸಿದ ಲೂಟಿಕೋರರು.

  • ತಾಂಡವ್​ ರಾಮ್​-ಸೌಂದರ್ಯ ಆಟಕ್ಕೆ ಮನಸೋತ ವೀಕ್ಷಕರು.

Biggboss Kannada: ಆಟವಾಡುವಾಗ ಸರಿಯಾಗಿ ಅರ್ಥ ಮಾಡಿಕೊಳ್ಳದೇ ತಪ್ಪು ಮಾಡುತ್ತಿದ್ದ ಬಿಗ್​ಬಾಸ್ ಮನೆಯಲ್ಲಿ ಈ ವಾರ ಕುತೂಹಲ, ಕೌತುಕ ಕ್ಷಣಗಳು ಹುಟ್ಟಿಕೊಳ್ಳುವಂತೆ ಮಾಡಿದ್ದು ಲೂಟಿಕೋರರು ಮತ್ತು ರಕ್ಷಕರ ಟಾಸ್ಕ್​​. ಈ ಮಧ್ಯೆ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿರುವುದು ಸೌಂದರ್ಯ ಹಾಗೂ ತಾಂಡವ್​ ಆಟದ ಬಗ್ಗೆ. ಅವರಿಬ್ಬರಿಗೆ ಈ ಬಾರಿ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ವೀಕ್ಷಕರು ಬಯಸಿದ್ದಾರೆ.

ಬಿಗ್​ಬಾಸ್​​ ಕನ್ನಡ 13 ಶುರುವಾಗಿ 46 ದಿನ ಕಳೆದಿದೆ. ಇಲ್ಲಿಯವರೆಗೂ ಯಾವುದೇ ಎಂಟರ್ಟೈನ್​ಮೆಂಟ್ ಸಿಕ್ಕಿಲ್ಲ. ಬರಿ ಗದ್ದಲ, ಬೋರಿಂಗ್​ ಎನ್ನುತ್ತಿದ್ದ ವೀಕ್ಷಕರಿಗೆ ಈ ವಾರದ ಟಾಸ್ಕ್​​​ ಹಬ್ಬದೂಟವಾಗಿತ್ತು. ಲೂಟಿಕೋರರು ಮತ್ತು ರಕ್ಷಕರು ಎನ್ನುವ ಪರಿಕಲ್ಪನೆಯಲ್ಲಿ ಚಟುವಟಿಕೆ ಮಾಡಲಾಗಿತ್ತು. ನಾಮಿನೇಟ್​ ಆದ ಸೌಂದರ್ಯ, ಸೋನಿಕಾ, ತಾಂಡವ್, ಲಕ್ಷ್ಮಿ, ಆಸಿಯಾ ಹಾಗೂ ತಾಂಡವ್​​​ ಲೂಟಿಕೋರರು. ಇನ್ನೂ ಪ್ರಶಾಂತ್​​, ಯಶಸ್​​, ಕುಮಾರಿ, ಗಾನವಿ, ಕಿರಣ್​​ ಶಾಸ್ತ್ರಿ, ಜಗದೀಶ್​​​​​​​ ರಕ್ಷಕರು. ಗಗನ್ ಉಸ್ತುವಾರಿಯಾಗಿದ್ದರು.

ಲೂಟಿಕೋರರು ವರ್ಸಸ್ ರಕ್ಷಕರು

ಈ ಆಟದ ನಿಯಮದಂತೆ ಮ್ಯೂಸಿಯಂನಲ್ಲಿ ಇರಿಸಲಾಗಿರುವ ಅಮೂಲ್ಯ ಅಮೂಲ್ಯವಾದ ವಸ್ತುಗಳನ್ನು ಕದ್ದು ನಕಲಿಯನ್ನು ಇಡಬೇಕಾಗಿರುವುದು ಲೂಟಿಕೋರರ ಕರ್ತವ್ಯವಾಗಿತ್ತು. ಕಳ್ಳತನವಾಗದಂತೆ ತಡೆಯುವುದು ಕಾವಲುಗಾರರ ಜವಾಬ್ದಾರಿ. ಈ ಟಾಸ್ಕ್​​​ನಲ್ಲಿ ರಕ್ಷಕರು ಸೋತಿದ್ದಾರೆ. 24 ಇಂಟೂ 7 ಲೈವ್​ನಲ್ಲಿ ಕಂಡ ವೀಕ್ಷಕರು, ಎಕ್ಸ್​ನಲ್ಲಿ ಲೂಟಿಕೋರರು ವಿನ್ ಆದ ಬಗ್ಗೆ ಹಾಗೂ ಲಕ್ಷುರಿ ಬಜೆಟ್ ಪಡೆದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ಜಗಳವನ್ನೇ ಅಸ್ತ್ರ ಮಾಡಿಕೊಂಡ ಸೌಂದರ್ಯ ತಾಂಡವ್

ಸದ್ಯ ರಿಲೀಸ್ ಆದ ವಿಡಿಯೋದಲ್ಲಿ ಗಾನವಿ ಮತ್ತು ಕಿರಣ್​ ಜಗಳವಾಡುತ್ತಿದ್ದ ಕ್ಷಣವನ್ನು ಗುರಿಮಾಡಿಕೊಂಡ ಸೌಂದರ್ಯ ಮತ್ತು ತಾಂಡವ್​ ಮ್ಯೂಸಿಯಂನಲ್ಲಿದ್ದ ವಜ್ರ ಹಾಗೂ ಕಿರೀಟವನ್ನು ಕದ್ದು ಕುಕ್ಕರ್ ಕೂಗಿಸುತ್ತಿರುವಂತೆ ನಾಟಕವಾಡುತ್ತಾ ರಿಪ್ಲೇಸ್ ಮಾಡಿದ ಕ್ಷಣಗಳು ಸಖತ್​ ಎಂಟರ್ಟೈನ್​ ಆಗಿ ಕಂಡವು.

ತಾಂಡವ್​-ಸೌಂದರ್ಯಗೆ ಮೆಚ್ಚುಗೆ

ಆಸಿಯಾ-ಲಕ್ಷ್ಮಿ ಚೆನ್ನಾಗಿ ಟಾಸ್ಕ್​ ಆಡಿದ್ದಾರೆ ಆದರೆ, ತಾಂಡವ್​-ಸೌಂದರ್ಯ ಆಟವಾಡಿದ ಪರಿ ಮಾತ್ರ ಸಖತ್​​. ಈವಾರದ ಎಪಿಸೋಡ್​ನ್ನು ನೀವಿಬ್ಬರು ಸಾಕಷ್ಟು ರೂಲ್ ಮಾಡಿದ್ದೀರಾ ಎಂದು ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಸೌಂದರ್ಯ ಶೆಟ್ಟಿ ನಾಮಿನೇಟ್ ಮಾಡಿದಾಗ ಮಾಡಿದ ನೃತ್ಯ, ಕೀಟಲೆ ಆ ನಂತರ ಕಾವಲುಗಾರರನ್ನು ಗುರಿಯಾಗಿಸಿಕೊಂಡು ಮಾಡಿದ ತರಲೆಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿದೆ. ಜೊತೆಗೆ ತಾಂಡವ್​ ಮತ್ತು ಸೌಂದರ್ಯ ಮಧ್ಯೆ ಭಿನ್ನಭಿಪ್ರಾಯವಿದ್ದರೂ ಸಹ ಅದನ್ನೆಲ್ಲ ಬದಿಗಿಟ್ಟು ಕದಿಯಲು ಮಾಡಿದ ಮಾಸ್ಟರ್​ ಪ್ಲ್ಯಾನ್​ ಬಗ್ಗೆ ನೆಟ್ಟಿಗರು ಕೊಂಡಾಡುತ್ತಿದ್ದಾರೆ.

ನೆಟ್ಟಿಗರು ಏನಂದ್ರು?

ಈಗ ಅದು ಅಧಿಕೃತ & ಅಂತಿಮವಾಗಿ, ಮೊದಲ ಬಾರಿಗೆ, ಐಷಾರಾಮಿ ವಸ್ತುಗಳಿಗೆ ಅರ್ಹತೆ ಪಡೆದಿದೆ. ತಾಂಡವ್ & ಸೌಂದರ್ಯ ಶೆಟ್ಟಿ ಚೆನ್ನಾಗಿ ಆಡಿದರು, ಧನುಷ್ ಅದ್ಭುತವಾಗಿ ಆಡಿದರು, ಆದರೆ ತಂಡದ ಸಮನ್ವಯವು ಕಾಣೆಯಾಗಿತ್ತು ಎಂದು ಎಕ್ಸ್​ ಬಳಕೆದಾರರೊಬ್ಬರು ಹೇಳಿದ್ದಾರೆ. ಸೌಂದರ್ಯ ಮತ್ತು ತಾಂಡವ್​ ಪ್ಲ್ಯಾನ್​ ಸಖತ್​ ಆಗಿತ್ತು. ಇಡೀ ತಂಡ ಅಮೂಲ್ಯವಾದ ವಸ್ತುಗಳನ್ನು ಚಾತುರ್ಯದಿಂದ ಕದ್ದಿದ್ದಾರೆ.

ಕಿಚ್ಚನ ಚಪ್ಪಾಳೆ ಸಿಗುತ್ತಾ?

ಇನ್ನೂ ಕ್ಯಾಪ್ಟನ್ಸಿ ಟಾಸ್ಕ್​​, ಕಳಪೆ-ಉತ್ತಮ ಪ್ರದರ್ಶನ ಚಟುವಟಿಕೆಗಳು ಇರುವ ಕಾರಣ ಅದೆಲ್ಲ ಪರಿಗಣನೆಗೆ ತೆಗೆದುಕೊಂಡು ಸ್ಪರ್ಧಿಗಳ ವ್ಯಕ್ತಿತ್ವದ ಮೇರೆಗೆ ಕಿಚ್ಚನ ಚಪ್ಪಾಳೆ ಸಿಗುವ ಕಾರಣ ಈ ಚಟುವಟಿಕೆಗಳಲ್ಲಿ ತಾಂಡವ್ ಸೌಂದರ್ಯ ಆಟ ಹೇಗಿರುತ್ತದೆ ಎಂದು ನೋಡಬೇಕಾಗುತ್ತದೆ. ಹೀಗಾಗಿ ಇಬ್ಬರಿಗೂ ಕಿಚ್ಚನ ಚಪ್ಪಾಳೆ ಸಿಗುತ್ತಾ ಎನ್ನುವುದು ಡೌಟು, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net