Bigg Boss ಮನೆಯಿಂದ ಲಕ್ಷ್ಮಿ ಔಟ್​​; 'ವೇಸ್ಟ್​​ ಪೀಸ್'​ ಕಾರ್ಡ್​ ಪಡೆದು ಹೊಸ ಆಟ ಶುರು ಮಾಡಿದ ಕುಮಾರಿ

Bigg Boss ಮನೆಯಿಂದ ಲಕ್ಷ್ಮಿ ಔಟ್​​; 'ವೇಸ್ಟ್​​ ಪೀಸ್'​ ಕಾರ್ಡ್​ ಪಡೆದು ಹೊಸ ಆಟ ಶುರು ಮಾಡಿದ ಕುಮಾರಿ
Published on: 
  • ವೈಲ್ಡ್​ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿಕೊಟ್ಟ ಎರಡನೇ ವಾರಕ್ಕೆ ಲಕ್ಷ್ಮಿ ಔಟ್.

  • ಇತ್ತ ಬಿಗ್​ಬಾಸ್ ಮನೆಯಲ್ಲಿ​ ಎಂದಿನಂತೆ ನಾಮಿನೇಶನ್​​​​, ಚಟುವಟಿಕೆ ಶುರು.

  • ಕುಮಾರಿಗೆ 'ವೇಸ್ಟ್ ಪೀಸ್' ಹ್ಯಾಶ್‌ಟ್ಯಾಗ್ ಕಾರ್ಡ್ ಕೊಟ್ಟ ಮನೆಯ ಕ್ಯಾಪ್ಟನ್​ ಸೌಂದರ್ಯಾ.

  • ಸೌಂದರ್ಯಾ ಮತ್ತು ಕುಮಾರಿ ನಡುವೆ ಶುರುವಾಯ್ತು ಮಾತಿನ ಜಟಾಪಟಿ.

ಬಿಗ್ ಬಾಸ್ ಮನೆಗೆ ಕಾಲಿಟ್ಟು ಎರಡೇ ವಾರದಲ್ಲಿ ಲಕ್ಷ್ಮಿ ಎವಿಕ್ಟ್ ಆಗಿದ್ದಾರೆ. ಮಂಜು ಮತ್ತು ಸಂಗೀತಾ ಅನಿರೀಕ್ಷಿತವಾಗಿ ಮನೆಯಿಂದ ಹೊರಬಂದ ಹಿನ್ನೆಲೆಯಲ್ಲಿ ಕುಮಾರಿ ಮತ್ತು ಲಕ್ಷ್ಮಿ ವೈಲ್ಡ್ ಕಾರ್ಡ್ ಮೂಲಕ ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ವೀಕ್ಷಕರ ವೋಟ್ ಆಧಾರದ ಮೇಲೆ ಲಕ್ಷ್ಮಿ ಮನೆಯಿಂದ ಹೊರಬಂದಿದ್ದಾರೆ. ಇತ್ತ ಮನೆಯಲ್ಲಿ ಎಂದಿನಂತೆ ಆಟ ರಂಗೇರಿದ್ದು, ಸೌಂದರ್ಯಾ ಮತ್ತು ಕುಮಾರಿ ನಡುವೆ ಮಾತಿನ ಜಟಾಪಟಿ ಜೋರಾಗಿದೆ.

ಲಕ್ಷ್ಮಿ ಎಲಿಮಿನೇಟ್​

ಬಿಗ್​ಬಾಸ್ ಮನೆಗೆ ಲಕ್ಷ್ಮಿ ವೈಲ್ಡ್​ ಕಾರ್ಡ್​ ಎಂಟ್ರಿ. ಈ ಬಾರಿ ವಿಶೇಷವಾಗಿ ನಡೆದ ಅಗ್ನಿ ಪರೀಕ್ಷೆಯಲ್ಲಿ ಭಾಗಿಯಾಗಿದ್ದರು. ಮಂಜು ಬಳಸಿದ ಮಾತಿಗಾಗಿ ಅವರಿಗೆ ರೆಡ್ ಕಾರ್ಡ್ ಕೊಟ್ಟು ಹೊರ ಕಳುಹಿಸಲಾಗಿತ್ತು. ಇನ್ನು ಸಂಗೀತಾ ಅವರು ಅನಾರೋಗ್ಯದ ಕಾರಣಕ್ಕೆ ಹೊರಗೆ ಬಂದಿದ್ದರು. ಇವರಿಬ್ಬರ ಸ್ಥಾನವನ್ನು ತುಂಬಲು ಎಂಟ್ರಿಯಾಗಿದ್ದೇ ಕುಮಾರಿ ಮತ್ತು ಲಕ್ಷ್ಮಿ . ಲಕ್ಷ್ಮಿ ಮನೆಯೊಳಗೆ ಎಂಟ್ರಿಯಾಗುತ್ತಲೇ ತಮ್ಮ ಆಟವನ್ನು ಆಡಿದ್ದಾರೆ. ಸ್ಟ್ಯಾಂಡ್​ ತೆಗೆದುಕೊಂಡಿದ್ದಾರೆ. ಆದರೆ, ಆಟದ ನಿಯಮ ಅರ್ಥವಾಗದೇ ಎಡವಿದ್ದು ಇದೆ. ಅಲ್ಲದೇ ಅವರಿಗೆ ಜನರ ಪರಿಚಯ ಇಲ್ಲದ ಕಾರಣ ಅವರಿಗಷ್ಟು ವೋಟ್​ ಸಿಕ್ಕಿಲ್ಲದಿರಬಹುದು ಎನ್ನುವುದು ಜನರ ಅಭಿಪ್ರಾಯವಾಗಿದೆ.

ಎವಿಕ್ಷನ್ ಪ್ರಕ್ರಿಯೆ ಹೇಗಿತ್ತು?

ಸೌಂದರ್ಯಾ, ಆಸಿಯಾ, ತಾಂಡವ್​ ಮತ್ತು ಕುಮಾರಿ, ಸೋನಿಕಾ, ಲಕ್ಷ್ಮಿ ಪೈಕಿ ಮೊದಲು ತಾಂಡವ್, ಆಸಿಯಾ ಸೌಂದರ್ಯಾ ಸೇಪ್​ ಆದರು. ಉಳಿದಿದ್ದ ಲಕ್ಷ್ಮಿ, ಕುಮಾರಿ, ಸೋನಿಕಾ ಅವರನ್ನು ಆಕ್ಟಿವಿಟಿ ರೂಮ್​ನಲ್ಲಿ ಇಡಲಾಗಿತ್ತು. ಮೂವರ ಮುಂದೆ ಒಂದು ಹಳೆಯ ಫೋನ್ ಇತ್ತು.ಎವಿಕ್ಷನ್ ಅಥವಾ ಸೇಫ್ ಆಗುವ ಸಂದೇಶವನ್ನು ಕಾಲ್ ಮೂಲಕ ಹೇಳಲಾಗುತ್ತದೆ ಎಂದು ಸುದೀಪ್​ ಹೇಳಿದರು. ಅದರಂತೆ ಎರಡನೇ ಕರೆ ಸ್ವೀಕರಿಸಿದ ಲಕ್ಷ್ಮಿಗೆ ಶಾಕ್​ ಕಾದಿತ್ತು. ಸ್ವಾರಿ ಲಕ್ಷ್ಮಿ ನೀವು ಎಲಿಮಿನೇಟ್ ಆಗಿದ್ದೀರಿ ಎಂದರು.

ಕುಮಾರಿ ಸೌಂದರ್ಯಾ ಮಧ್ಯೆ ಮಾತಿನ ಜಟಾಪಟಿ

ಮೋಸಗಾರ, ಬಕೆಟ್, ವೇಸ್ಟ್​ ಪೀಸ್ ಸೇರಿದಂತೆ ಹಲವು ಟ್ರೆಂಡಿಂಗ್​ನಲ್ಲಿರುವ ಹ್ಯಾಶ್​ಟ್ಯಾಗ್ ಮನೆಯ ಕ್ಯಾಪ್ಟನ್​ ಸೌಂದರ್ಯಾ ಮುಂದೆ ಇದೆ ಅದನ್ನು ಅವರು ಇತರ ಸಹ ಸ್ಪರ್ಧಿಗಳಿಗೆ ನೀಡಬೇಕು. ಮೋಸಗಾರ ಎನ್ನುವ ಪಟ್ಟವನ್ನು ಗಗನ್​ಗೆ ಕೊಟ್ಟ ಅವರು, ಕುಮಾರಿಗೆ ವೇಸ್ಟ್ ಪೀಸ್ ಎನ್ನುವ ಕಾರ್ಡ್ ಕೊಟ್ಟರು. ಮನೆಗೆ ಕಾಂಟ್ರಿಬ್ಯೂಷನ್ ಕಡಿಮೆ ಇದೆ. ದಿನವಿಡೀ ಬೀನ್​​ ಬ್ಯಾಗ್ ಹಾಕಿಕೊಂಡು ಚಿಲ್ ಮಾಡುತ್ತಿರುತ್ತಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತ್ಯುತ್ತರವಾಗಿ ಕುಮಾರಿ, "ನೀನೇ ವೇಸ್ಟ್ ಪೀಸ್, ನಿನಗೆ ನಾನು ಕೊಟ್ಟಿದ್ದೇನೆ, ಈ ಮನೆಯಲ್ಲಿ ವ್ಯಕ್ತಿತ್ವ ತೋರಿಸುತ್ತದೆ ಆದರೆ ಎಲ್ಲರಿಗೂ ತೋರಿಸೋಕಾಗಲ್ಲ, ಇದ್ದರೆಲ್ಲ ತೋರಿಸ್ತೀನಿ" ಎಂದು ತಿರುಗೇಟು ನೀಡಿದ್ದಾರೆ. ಕುಮಾರಿ ಸಿಂಪಥಿ ಕಾರ್ಡ್​ ವರ್ಕ್ ಆಗ್ತಿಲ್ವ ಎಂದು ಸೌಂದರ್ಯಾ ಗುಡುಗಿದ್ದಾರೆ. ಈ ವಾದ-ವಿವಾದವು ಎಲ್ಲಿಗೆ ಮುಟ್ಟುತ್ತದೆ ಎನ್ನುವುದನ್ನು ಇಂದಿನ ಎಪಿಸೋಡ್​ನಲ್ಲಿ ಕಾದು ನೋಡಬೇಕಾಗಿದೆ, (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net