ಬಿಗ್​ಬಾಸ್​ ಮನೆಯಲ್ಲಿ ಊಟ ತಿಂಡಿ ಬಿಟ್ಟು ಪ್ರತಿಭಟನೆ ಆರಂಭಿಸಿದ ಪ್ರಶಾಂತ್​! ಅಷ್ಟಕ್ಕೂ ಆಗಿದ್ದೇನು ಗೊತ್ತಾ?

bb
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ಅದ್ಭುತವಾಗಿ ಮೂಡಿ ಬರುತ್ತಿದೆ. ಅರವಿಂದ್​, ಮಂಜು ಪಾವಗಡ ಮತ್ತು ಪ್ರಶಾಂತ್​ ಸಂಬರಗಿ ಹೆಚ್ಚು ಗಮನ ಸೆಳೆಯುತ್ತಿದ್ದಾರೆ. ಆದರೆ ಈ ಮಧ್ಯೆ ಮನೆಯಲ್ಲಿ ಒಂದು ಕಿರಿಕ್​ ಆಗಿದ್ದು, ಪ್ರಶಾಂತ್​ ಸಂಬರಗಿ ಊಟ ತಿಂಡಿ ಮಾಡಲ್ಲ ಎಂದು ಹಠ ಹಿಡಿದಿದ್ದಾರೆ.

ಬಿಗ್​ಬಾಸ್​ ಕ್ಯಾಪ್ಟನ್ಸಿ ಟಾಸ್ಕ್‌ಗೆ ಸ್ಟರ್ಧಿಗಳನ್ನು ಆಯ್ಕೆ ಮಾಡಲು ಟಾಸ್ಕ್​ ಒಂದನ್ನು ಕೊಟ್ಟಿದ್ದರು. ರೈಲೊಂದರಲ್ಲಿ ಮೂರು ಬೋಗಿಗಳನ್ನು ಮಾಡಿ, ಮೊದಲನೇ ಬೋಗಿಯಲ್ಲಿರುವವರನ್ನು ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಯ್ಕೆ ಮಾಡಿದ್ದರೆ, ಮೂರನೇ ಬೋಗಿಯಲ್ಲಿದ್ದವರನ್ನು ನೇರವಾಗಿ ನಾಮಿನೇಷನ್​ ಮಾಡಲಾಗಿದೆ. ಸ್ಪರ್ಧಿಗಳ ಬೋಗಿ ಬದಲಾಯಿಸಿಕೊಳ್ಳಲು ಆಗಾಗ ಟಾಸ್ಕ್​ಗಳನ್ನು ನೀಡಲಾಗಿತ್ತು. ಆ ರೀತಿ ನೀಡಲಾದ ಕೊನೆಯ ಟಾಸ್ಕ್​ನಲ್ಲಿ ಪ್ರಶಾಂತ್​, ಅರವಿಂದ್​ ಹಾಗೂ ಪ್ರಿಯಾಂಕಾ ಭಾಗವಹಿಸಿದ್ದರು.

ಟಾಸ್ಕ್​ನಲ್ಲಿ ಕೈ ಕಾಲು ಕಟ್ಟಿ ಕವಚಿ ಮಲಗಿದ್ದ ಸ್ಪರ್ಧಿಗಳು ಹಾಗೆಯೇ ತೆವಳುತ್ತ ಚೆಂಡೊಂದನ್ನು ಕೆಂಪು ಲೈನ್​ ಕ್ರಾಸ್​ ಮಾಡಿಸಬೇಕಿತ್ತು. ಆದರೆ ಇದರಲ್ಲಿ ಅರವಿಂದ್​ ತಮ್ಮ ಟ್ರ್ಯಾಕ್​ ಬಿಟ್ಟು ಹೊರಗೆ ಬಂದು ಕೆಂಪು ಲೈನ್​ ಬದಲು ಅದರ ಪಕ್ಕದಲ್ಲೇ ಮುಂದುವರಿದಿದ್ದ ಹಳದಿ ಲೈನನ್ನು ದಾಟಿದ್ದರು. ಪ್ರಶಾಂತ್​ ತಮ್ಮದೇ ಟ್ರ್ಯಾಕ್​ನಲ್ಲಿ ಲೈನ್​ ದಾಟಿದ್ದರು. ಮೊದಲಿಗೆ ಪ್ರಶಾಂತ್​ರನ್ನು ವಿನ್ನರ್​ ಎಂದು ಹೇಳಲಾಯಿತಾದರೂ ಅವರಿಗಿಂತ ಮೊದಲೇ ಅರವಿಂದ್​ ಇನ್ನೊಂದೆಡೆ ಇದ್ದ ಹಳದಿ ಗೆರೆ ದಾಟಿಸಿ, ಎಲ್ಲರಿಗಿಂತ ಮೊದಲು ಬಂದಿದ್ದರು ಎನ್ನುವುದನ್ನು ಪರಿಗಣಿಸಿ ಅವರನ್ನು ವಿನ್ನರ್​ ಎಂದು ಘೋಷಿಸಲಾಗಿತ್ತು. ಮೊದಲನೇ ಬೋಗಿಯಲ್ಲಿದ್ದ ಮಂಜು ವಿನ್ನರ್​ ಅನ್ನು ಘೋಷಿಸಿದ್ದರು. ಅದೇ ಕಾರಣಕ್ಕೆ ಪ್ರಶಾಂತ್​ ಬೇಸರ ವ್ಯಕ್ತಪಡಿಸಿದ್ದಾರೆ.

ಇಲ್ಲಿ ನನ್ನ ವಿರುದ್ಧ ಹುನ್ನಾರ ನಡೆಯುತ್ತಿದೆ. ನಿಯಮದ ಪ್ರಕಾರ ನಾನು ಮೊದಲು ಬಂದಿದ್ದು, ಆದರೆ ಅರವಿಂದ್​ಗೆ ಮಂಜು ವಿನ್ನರ್​ ಪಟ್ಟ ಕೊಟ್ಟಿದ್ದಾನೆ ಎಂದು ವಿರೋಧಿಸಿದ್ದಾರೆ. ಈ ಅನ್ಯಾಯವನ್ನು ಖಂಡಿಸಲು 36 ಗಂಟೆಗಳ ಕಾಲ ಊಟ ತಿಂಡಿ ಮಾಡದೆ ಪ್ರತಿಭಟನೆ ನಡೆಸುತ್ತೇನೆ ಎಂದು ಕ್ಯಾಮರ ಮುಂದೆ ಹೇಳಿದ್ದಾರೆ. ಬಿಗ್​ಬಾಸ್​ ಊಟ ಮಾಡಲು ಹೇಳುವ ತನಕ ಊಟ ಮಾಡುವುದಿಲ್ಲ ಎಂದು ಚಕ್ರವರ್ತಿ ಚಂದ್ರಚೂಡ್​ ಬಳಿ ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net