ಅವಳಿಗೆ ಟ್ರೋಲ್ ಆಗಿ ಫೇಮಸ್ ಆಗೋ ಆಸೆ: ‘ಬಿಗ್​ಬಾಸ್' ಮನೆಯಲ್ಲಿ ವಿವಾದಿತ ಸ್ಪರ್ಧಿ ಬಗ್ಗೆ ಗುಸುಗುಸು...!

sonu srinivas gowda
Published on

ಬಿಗ್​​ಬಾಸ್ ಕನ್ನಡ ಒಟಿಟಿ ಸದ್ಯ ಸಖತ್ ಯಶಸ್ವಿಯಾಗಿ ಪ್ರಸಾರ ಕಾಣುತ್ತಿದೆ. ಈಗಾಗಲೇ ಗೆಲುವಿಗಾಗಿ ನಾನಾ ತರಹದ ದಾರಿಗಳನ್ನು ಸ್ಪರ್ಧಿಗಳು ಹಿಡಿದಾಗಿದೆ. ಇನ್ನೊಂದೆಡೆ ಕಿರಣ್ ಯೋಗೇಶ್ವರಿ ಅವರು ಮೊದಲ ಎಲಿಮಿನೇಶನ್ ಆಗಿ ಮನೆಯಿಂದ ಹೊರಬಂದಿದ್ದಾರೆ. ಇವೆಲ್ಲದರ ಮಧ್ಯೆ ಮನೆಯೊಳಗಿರುವ ಸ್ಪರ್ಧಿಯೊಬ್ಬರ ಬಗ್ಗೆ ಮತ್ತೋರ್ವ ಸ್ಪರ್ಧಿ ಉದಯ್ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸೋನು ಶ್ರೀನಿವಾಸ್ ಗೌಡ ಎಂದರೆ ಕರ್ನಾಟಕದಲ್ಲಿ ಪ್ರತಿಯೊಬ್ಬರಿಗೂ ತಿಳಿದಿರುವ ಹೆಸರು. ಟ್ರೋಲ್ ನಿಂದಲೇ ಹೆಸರು ಗಳಿಸಿರುವ ಸೋನು ಬಗ್ಗೆ ಉದಯ್ ಸೂರ್ಯ ಹೇಳಿಕೆಯೊಂದನ್ನು ನೀಡಿದ್ದಾರೆ.

ಅವಳು ಫೇಮಸ್ ಆಗಿದ್ದೇ ಟ್ರೋಲ್ ನಿಂದ. ಆಕೆಗೆ ನೆಗೆಟಿವ್ ಕಮೆಂಟ್ ಬಂದರೂ ಪರವಾಗಿಲ್ಲ. ಅದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಫೇಮಸ್ ಆದ್ರೆ ಸಾಕು ಎಂಬ ಆಸೆಯಿದೆ. ಒಳ್ಳೆಯದ್ದೋ ಕೆಟ್ಟದ್ದೋ ಗೊತ್ತಿಲ್ಲ ಎಂದು ಹೇಳಿದ್ದಾರೆ. ಇದಕ್ಕೆ ಅವರ ಜತೆ ಕುಳಿತಿದ್ದ ಇನ್ನೂ ಕೆಲವರು ದನಿಗೂಡಿಸಿದ್ದಾರೆ.

ಈ ಹಿಂದೆ ಸೋಮಣ್ಣ ಮಾಚಿಮಾಡ ಅವರು ಸೋನು ಗೌಡಗೆ ಪ್ರಶ್ನೆಯನ್ನು ಕೇಳಿದ್ದರು, ನಿಮ್ಮ ಜೀವನದ ಕೆಲ ವಿಷಯಗಳನ್ನು ಮುಕ್ತವಾಗಿ ಹೀಗೆ ಹೇಳಿಕೊಂಡರೆ ನಿಮ್ಮ ಭವಿಷ್ಯಕ್ಕೆ ಸಮಸ್ಯೆಯಾಗುವುದಿಲ್ಲವೇ? ಎಂದು. ಅದಕ್ಕೆ ಪ್ರತಿಕ್ರಿಯೆ ನೀಡಿದ್ದ ಸೋನು, ನಾನು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net