

ಬಿಗ್ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಾಡ್ರನ್ ಮಹಾಕವಿ ಮಂಜ, ಆದರೆ ಸ್ಪರ್ಧಿ ಅಲ್ಲ
ಕಸದೊಂದಿಗೆ ಬಿಗ್ಬಾಸ್ಗೆ ಎಂಟ್ರಿ ಕೊಟ್ಟ ಮಂಜ, ಗಾರ್ಡನ್ ಏರಿಯಾ ಸೇರಿದಂತೆ ಎಲ್ಲವೂ ಕಸಮಯ
ಮಾನವೀಯತೆ ದೃಷ್ಟಿಯಿಂದ ಮತ್ತೆ ಬಿಗ್ಬಾಸ್ನಲ್ಲಿ ಸ್ಪರ್ಧಿಸಲು ಮಂಜನಿಗೆ ಛಾನ್ಸ್ ಕೊಟ್ಟಿದ್ದೇವೆ ಎಂದು ಸುದೀಪ್
Bigg Boss Kannada: ‘ಬಿಗ್ ಬಾಸ್ ಕನ್ನಡ ಸೀಸನ್ 13’ಕ್ಕೆ ಮತ್ತೆ ಮಾಡ್ರನ್ ಮಹಾಕವಿ ಮಂಜ ರೀ ಎಂಟ್ರಿಕೊಟ್ಟಿದ್ದಾರೆ. ಮಂಜ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ಮೇಲೆ ನಾಲಿಗೆ ಹರಿಬಿಟ್ಟು, ಅಶ್ಲೀಲ ಮಾತನ್ನಾಡಿ, ಮನೆಯ ನಿಯಮ ಉಲ್ಲಂಘಿಸಿದ ಪರಿಣಾಮವಾಗಿ ಅವರನ್ನು ಹೊರ ಕಳುಹಿಸಲಾಗಿತ್ತು. ಆದರೆ, ಈಗ 2ನೇ ಅವಕಾಶ ನೀಡಲಾಗಿದೆ.
ಸದ್ಯ ರಿಲೀಸ್ ಆಗಿರುವ ಪ್ರೊಮೋ ಪ್ರಕಾರ ಮಂಜ ಕಸದೊಂದಿಗೆ ಬಿಗ್ಬಾಸ್ ಮನೆಗೆ ಬೆಳ್ಳಂಬೆಳಿಗ್ಗೆ ಎಂಟ್ರಿ ಕೊಟ್ಟಿದ್ದಾರೆ. ಮನೆಯ ತುಂಬಾ ಒಣ ಬತ್ತದ ರಾಶಿ, ಕಾಟನ್, ಒಗೆಯುವ ಬಟ್ಟೆಯನ್ನು ಹರಡಿದ್ದಾರೆ. ಸ್ವಿಮ್ಮಿಂಗ್ ಪೂಲ್ನಲ್ಲಿ ಸ್ಪಂಜ್ ಹಾಕಿ ಅದ್ವಾನ ಮಾಡಿದ್ದಾರೆ. ಇದರೊಂದಿಗೆ ರಿಮೆಂಬರ್ ರಿಮೆಂಬರ್ ರಿಮೆಂಬರ್ ದ ನೇಮ್. ಮಾಡ್ರನ್ ಮಹಾಕವಿ ಮಂಜ. ಈ ಮಂಜನ ಎದೆಯಲ್ಲಿ ನಂಜೇ ಇಲ್ಲ. ದೀಪಾವಳಿ ಪಕೋಡ ಆಗುತ್ತೆ ಗೋಲಿ ಸೋಡ ಎಂದು ಹೇಳುತ್ತಾ...ಎಂಟ್ರಿಯಾಗಿದ್ದಾರೆ. ಮನೆಯ ಕಸ ಕಂಡು ಮತ್ತೊಂದು ಕಡೆ ಬಿಗ್ಬಾಸ್ ಮನೆ ಮಂದಿ ಶಾಕ್ ಆಗಿರುವುದು ಕಂಡು ಬಂದಿದೆ.
ಬಿಗ್ಬಾಸ್ ಮನೆಯಿಂದ ಅಚಾನಕ್ಕಾಗಿ ತೆರಳಿದ ಮಂಜ, ಇಷ್ಟು ದಿನ ಹೊರಗಿದ್ದುಕೊಂಡು, ಶೋ ವೀಕ್ಷಿಸಿದ್ದಾರೆ. ಜನರ ಪ್ರತಿಕ್ರಿಯೆಯನ್ನು ಕಣ್ಣಾರೆ ಕಂಡಿದ್ದಾರೆ. ಜನರು ಯಾರನ್ನು ಮೆಚ್ಚಿಕೊಳ್ಳುತ್ತಿದ್ದಾರೆ ಎನ್ನುವುದು ಗೊತ್ತಿದೆ. ಹಾಗಾಗಿ ಅವರನ್ನು ಸ್ಪರ್ಧಿ ಎಂದು ಪರಿಗಣಿಸಲ್ಲ. ಹಾಗಾಗಿ ಅವರಿಗೆ ಕಪ್ ಗೆಲ್ಲುವ ಅವಕಾಶವೂ ಇರೋದಿಲ್ಲ. ಕೆಲವು ದಿನಗಳ ಕಾಲ ಮಾತ್ರ ಅವರು ಮನೆಯಲ್ಲಿ ಇರುತ್ತಾರೆ ಎನ್ನುವ ಮಾಹಿತಿ ಇದೆ.
ಮಂಜ ಈಗಾಗಲೇ ಬೇರೆ ದೃಷ್ಟಿಯಿಂದ ಮನೆಯಿಂದ ಹೊರಗೆ ಹೋಗಿದ್ದಾರೆ. ಜೀವನ ಪೂರ್ತಿ ಕೆಟ್ಟ ಹೆಸರಿನಿಂದ ಇರುವುದು ಬೇಡ. ಬದಲಾಗಲು ಅವಕಾಶ ಕೊಡಬೇಕು ಎನ್ನುವ ಮಾನವೀಯತೆಯ ದೃಷ್ಟಿಯಿಂದ ಮತ್ತೆ ಅವರನ್ನು ಒಳಕ್ಕೆ ಕಳುಹಿಸಲಾಗುತ್ತಿದೆ. ಆದರೆ, ಮಂಜ ಸ್ಪರ್ಧಿ ಅಲ್ಲ ಎನ್ನುವ ಬಗ್ಗೆ ಇತರ ಸ್ಪರ್ಧಿಗಳಿಗೆ ಮಾಹಿತಿ ಇರೋದಿಲ್ಲ. ಮತ್ತೆ ತಪ್ಪು ಮಾಡಬೇಡಿ ಮಂಜ ಎಂದು ಸುದೀಪ್ ಅವರು ವಾರ್ನಿಂಗ್ ಕೊಟ್ಟಿದ್ದಾರೆ.ಮಂಜ ಮತ್ತದೇ ಹಳೆ ಚಾಳಿಯನ್ನು ಮುಂದುವರೆಸಿದರೆ ಖಂಡಿತ ಅವರನ್ನು ಮನೆಯಿಂದ ಮತ್ತೆ ಹೊರಗೆ ಕಳುಹಿಸಲಾಗುತ್ತದೆ ಎನ್ನುವ ಮಾತುಗಳು ಇದೆ.
ಪ್ರೊಮೋಗೆ ರಿಪ್ಲೈ ಮಾಡುತ್ತಿರುವ ನೆಟ್ಟಿಗರು, ಮಂಜ ಬಂದ ಕಸ, ತಲೆನೋವು ತಂದ ಎಂದಿದ್ದಾರೆ. ದೀಪಾವಳಿ ಅಂದ್ರೆ ಇದೆ. ಒಂದು ನಕಾರಾತ್ಮಕತೆ ಬೇಕು ಎಂದಿದ್ದಾರೆ. ಈ ಮೂಲಕ ಮಂಜನನ್ನು ನೆಗೆಟಿವ್ ಎನರ್ಜಿಗೆ ಹೋಲಿಕೆ ಮಾಡಲಾಗಿದೆ. ಬರ್ತಾನೆ ನೋಡು, ಶುರುವಾಯ್ತು ಹಾವಳಿ, ಎದುರಾಳಿಗಳ ಎದೆಯಲ್ಲಿ ನಡುಕದ ಸುಳಿ ಎಂದಿದ್ದಾರೆ, ಏಜೆನ್ಸೀಸ್