

ಬೆಂಗಳೂರು: ಕನ್ನಡದ ಅತ್ಯಂತ ಪ್ರಸಿದ್ಧ ರಿಯಾಲಿಟಿ ಶೋ ಬಿಗ್ಬಾಸ್ನ ಸೀಸನ್ 8 ಇಂದಿನಿಂದ ಆರಂಭವಾಗಿದೆ. ಅಯ್ಯೋ ಈ ಬಾರಿ ಸೆಲೆಬ್ರಿಟಿಗಳನ್ನು ಮಾತ್ರ ಆಯ್ಕೆ ಮಾಡಿದ್ದಾರೆ.. ಇಲ್ಲವೆಂದಿದ್ದರೆ ನಾನೂ ಹೋಗೋದಕ್ಕೆ ಟ್ರೈ ಮಾಡ್ತಿದ್ದೆ ಎನ್ನುವ ಬೇಜಾರಲ್ಲಿದ್ದೀರಾ? ಚಿಂತೆ ಬೇಡ.. ಇಲ್ಲಿದೆ ನೋಡಿ ಅವಕಾಶ..
ಹೌದು. ಅಂತದ್ದೊಂದು ಅವಕಾಶವನ್ನು ಕಲರ್ ಕನ್ನಡ ವಾಹಿನಿ ಮಾಡಿಕೊಟ್ಟಿದೆ. ನೀವು ಕುಳಿತ ಜಾಗಕ್ಕೇ ಬಿಗ್ಬಾಸ್ ಮನೆ ಬರಲಿದೆ. ತಂತ್ರಜ್ಞಾನದ ಮೂಲಕ ಅದಕ್ಕೆ ಅವಕಾಶ ಮಾಡಿಕೊಡಲಾಗಿದೆ..
ಪೂರ್ತಿ ಬಿಗ್ಬಾಸ್ ಮನೆಯ 3ಡಿ ನೋಟವನ್ನು ಕಲರ್ಸ್ ಕನ್ನಡ ತಯಾರಿಸಿದೆ. ಅದನ್ನು ನಿಮ್ಮೆಲ್ಲರಿಗಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಬಿಗ್ಬಾಸ್ ಮನೆ ಹೇಗಿದೆ? ನೀವು ಮನೆಯ ಒಳಗೆ ಹೋಗುತ್ತಿದ್ದರೆ ಯಾವ ರೀತಿಯ ಅನುಭವ ಆಗುತ್ತದೆ ಎನ್ನುವುದನ್ನು ನೀವು ಈ ಕೆಳಗಿನ ಲಿಂಕ್ಗೆ ಹೋಗಿ ತಿಳಿದುಕೊಳ್ಳಬೇಡಿ.
ಈ ಬಾರಿ ಬಿಗ್ಬಾಸ್ ಅವಕಾಶ ತಪ್ಪಿದರೆ ಏನಂತೆ? ಮುಂದಿನ ಸೀಸನ್ಗಳಲ್ಲಿ ಕಾಮನ್ ಪೀಪಲ್ಗೂ ಎಂಟ್ರಿ ಕೊಟ್ಟಾಗ ನಿಮ್ಮ ಟ್ಯಾಲೆಂಟ್ ತೋರಿಸಿ ನೀವು ಎಂಟ್ರಿ ಪಡೆಯಬಹುದು.