

ಬಿಗ್ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಯಾರು?.
ಯಶಸ್ ಮತ್ತು ಗಾನವಿ ಮಧ್ಯೆ ಕ್ಯಾಪ್ಟನ್ಸಿ ರೇಸ್ಗಾಗಿ ಭಾರೀ ಪೈಪೋಟಿ.
ತಾಳ್ಮೆ-ಬ್ಯಾಲೆನ್ಸ್ ಬೇಡುವ ಆಟವನ್ನು ಗೆದ್ದಿದ್ದು ಯಾರು?
Bigg Boss Kannada: ಬಿಗ್ಬಾಸ್ ಮನೆಯು ಈ ವಾರ ಭಾವನಾತ್ಮಕ ವಾರವಾಗಿ ಕೂಡಿತ್ತು. ಮನೆಯಿಂದ ಬಂದ ಪ್ರೀತಿ ಪಾತ್ರರ ಪತ್ರ ಪಡೆದುಕೊಳ್ಳಲು ಸ್ಪರ್ಧಿಗಳು ತಿಣುಕಾಡಿದ್ದರು. ಅದರಂತೆ, ಯಶಸ್, ಗಗನ್, ಗಾನವಿ, ಜಗದೀಶ್, ಪ್ರಶಾಂತ್ ಹಾಗೂ ಧನುಷ್, ಸೌಂದರ್ಯ ಪತ್ರ ಪಡೆದುಕೊಂಡರು. ಇದೇ ಸಂತಸದಲ್ಲಿದ್ದ ಸ್ಪರ್ಧಿಗಳಿಗೆ ಬಿಗ್ಬಾಸ್ ಮತ್ತೊಂದು ಸಿಹಿಸುದ್ದಿ ಕೊಟ್ಟಿತ್ತು. ಅದುವೇ ಕ್ಯಾಪ್ಟನ್ಸಿ ಟಾಸ್ಕ್ ಬಗ್ಗೆ.
ಹೌದು, ಮನೆಯಿಂದ ಪತ್ರ ಪಡೆದ ಎಂಟು ಜನರ ಪೈಕಿ, ನಾಲ್ವರು ಮಾತ್ರ ಕ್ಯಾಪ್ಟನ್ಸಿ ಟಾಸ್ಕ್ ಆಡಬೇಕಾಗಿತ್ತು. ಅದರಲ್ಲಿ ಯಾರು ಕ್ಯಾಪ್ಟನ್ಸಿ ರೇಸ್ನಲ್ಲಿ ಉಳಿದುಕೊಳ್ಳಬೇಕು ಎನ್ನುವ ಆಯ್ಕೆಯನ್ನು ಸೋನಿಕಾ, ತಾಂಡವ್ ಹಾಗೂ ಆಸಿಯಾ ಮಾಡಬೇಕಾಗಿತ್ತು. ಮನೆ ಪತ್ರ ಸಿಗದೇ ಬೇಸರದಲ್ಲಿದ್ದ ಮೂವರು ಇದೇ ಅವಕಾಶ ಬಳಸಿಕೊಂಡು, ಗೇಮ್ ಪ್ಲಾನ್ ಎಕ್ಸಿಕ್ಯೂಟ್ ಮಾಡಿದರು.
ಮೂವರು ತಮ್ಮ ನಿರ್ಧಾರದಂತೆ ಕ್ಯಾಪ್ಟನ್ಸಿ ಟಾಸ್ಕ್ಗೆ ಗಾನವಿ, ಪ್ರಶಾಂತ್ ಹಾಗೂ ಯಶಸ್, ಧನುಷ್ರನ್ನು ಆಯ್ಕೆ ಮಾಡಿದರು. ಸೌಂದರ್ಯ, ಕಿರಣ್ ಹಾಗೂ ಜಗದೀಶ್ರನ್ನು ಹೊರಗಿಟ್ಟು ಭಾರಿ ಗಲಾಟೆಗೆ ಕಾರಣರಾದರು. ಮೊದಲನೇ ಸುತ್ತಿನಲ್ಲಿ ಗಾನವಿ ಗೆದ್ದು ಧನುಷ್ರನ್ನು ಹೊರಗಿಟ್ಟರು. ಪ್ರಶಾಂತ್ ಸಹ ಆಟದಿಂದ ಹೊರಗುಳಿದರು. ಈಗ ಯಶಸ್ ಮತ್ತು ಗಾನವಿ ಮಧ್ಯೆ ತೀವ್ರ ಪೈಪೋಟಿ ಏರಿದ್ದು ಯಾರು ಬಿಗ್ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಎನ್ನುವುದನ್ನು ಕಾದು ನೋಡಬೇಕಾಗಿದೆ.
ಗಾರ್ಡನ್ ಏರಿಯಾದಲ್ಲಿ ಸೀಸಾ ಆರೇಂಜ್ ಮಾಡಲಾಗಿತ್ತು. ಟಾಸ್ಕ್ಗೆ ಆಯ್ಕೆಯಾದ ಇಬ್ಬರು ಅದರ ಮೇಲೆ ಹತ್ತು ಬ್ಯಾಲೆನ್ಸ್ ಮಾಡುತ್ತ ಅದು ಕೆಳಕ್ಕೆ ತಾಕದಂತೆ ಒಂದು ಕಡೆ ಇರುವ ಬಿಲ್ಲೆಯನ್ನು ಮತ್ತೊಂದು ಕಡೆ ವರ್ಗಾಯಿಸಬೇಕು. ಆನಂತರ ಬಿಗ್ಬಾಸ್ ಕೊಟ್ಟ ಆಕಾರದ ಚಿತ್ರದಂತೆ ಜೋಡಿಸಬೇಕು. ಯಾರು ಬ್ಯಾಲೆನ್ಸ್ ಮಾಡುತ್ತಾ, ತಾಳ್ಮೆಯಿಂದ, ಬುದ್ಧಿವಂತಿಕೆ ಬಳಸಿ ಟಾಸ್ಕ್ ಗೆಲ್ಲುತ್ತಾರೆ ಎನ್ನುವುದನ್ನು ಕಾದುನೋಡಬೇಕಾಗಿದೆ, (ಏಜೆನ್ಸೀಸ್).