ಗಳಗಳನೇ ಅತ್ತ ಪ್ರಶಾಂತ್ ಸಂಬರಗಿ​: ಬಿಗ್​ಬಾಸ್​ ಮನೆಯಲ್ಲಿ ಅವರಿಗೆ ಕಾಡಿದ್ದೇನು?

Sambaragi 1
Published on

ಬೆಂಗಳೂರು: ನೇರ ಮಾತುಗಳಿಂದಲೇ ಸದಾ ಸುದ್ದಿಯಾಗುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ಬಿಗ್​ಬಾಸ್​ ಮನೆಯೊಳಗೆ ಭಾವನಾತ್ಮಕವಾಗಿ ತುಂಬಾ ಪ್ರಬಲ ಸ್ಪರ್ಧಿ ಎನಿಸಿಕೊಂಡಿದ್ದಾರೆ. ಆದರೆ, ಇತ್ತೀಚಿನ ಎಪಿಸೋಡ್​ ಒಂದರಲ್ಲಿ ಪ್ರಶಾಂತ್​ ತುಂಬಾ ಭಾವುಕರಾದರು.

ಕನ್ಫೆಸ್ಸನ್​ ರೂಮ್​ ಒಳಗೆ ಬಿಗ್​ಬಾಸ್​ ಜತೆ ಸಂಭಾಷಣೆ ನಡೆಸುವಾಗ ಪ್ರಶಾಂತ್​ ತಮ್ಮ ಆಳವಾದ ಭಾವನೆಗಳನ್ನು ಹೊರಗಡೆವಿದರು. ತಮ್ಮ ಕುಟುಂಬ ಸದಸ್ಯರನ್ನು ನೆನೆದು ತುಂಬಾ ಭಾವುಕರಾದರು.

ಪ್ರಸ್ತುತ ತಮ್ಮ ಆರೋಗ್ಯ ಸ್ಥಿತಿಯ ಬಗ್ಗೆ ಮಾತನಾಡುವಾಗ ಪ್ರಶಾಂತ್ ಅವರು ತಮ್ಮ ಹೆಂಡತಿಯನ್ನು ನೆನಪಿಸಿಕೊಂಡರು. ಅವರ ಪತ್ನಿ ಆಯುರ್ವೇದಿಕ್​ ಡಾಕ್ಟರ್​ ಎಂದು ಉಲ್ಲೇಖಿಸಿದ ಪ್ರಶಾಂತ್​, ಗಂಟಲು ಸೋಂಕಿಗೂ ಔಷಧಿಗಳನ್ನು ಪಡೆಯುವವರೆಗೂ ನಿಜವಾಗಿಯೂ ತನ್ನ ಹೆಂಡತಿ ಅಥವಾ ಕುಟುಂಬದ ಸದಸ್ಯರನ್ನು ಮಿಸ್​ ಮಾಡಿಕೊಂಡೆ ಅನಿಸಲಿಲ್ಲ ಎಂದರು.

ತಮ್ಮ ಆರೋಗ್ಯದ ಕಾಳಜಿ ವಹಿಸುತ್ತಿದ್ದ ಪತ್ನಿಯನ್ನು ನೆನೆದು ಪ್ರಶಾಂತ್​ ಕಣ್ಣೀರಿಟ್ಟರು. ಇದೇ ವೇಳೆ ಬಿಗ್​ಬಾಸ್​ ಮನೆಯೊಳಗೆ ಓರ್ವ ಸ್ಪರ್ಧಿಯಾಗಿ ತಮ್ಮ ಪಯಣದ ಬಗ್ಗೆ ಮಾತನಾಡಿದರು. ಬಿಗ್​ಬಾಸ್​ ಮನೆ ಅಚ್ಚರಿಗಳಿಂದ ತುಂಬಿದೆ. ಜೀವಮಾನದಲ್ಲಿ ಅನುಭವಿಸಲು ಒಮ್ಮೆ ಮಾತ್ರ ಸಿಗುವ ಅವಕಾಶ ಎಂದರು.

ಉದ್ಯಮಿ ಮತ್ತು ಕನ್ನಡ ಚಲನಚಿತ್ರೋದ್ಯಮದ ಗಮನಾರ್ಹ ವ್ಯಕ್ತಿಯಾಗಿರುವ ಪ್ರಶಾಂತ್ ಬಿಗ್ ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿಗಳಲ್ಲಿ ಒಬ್ಬರು. ಇದುವರೆಗೂ ವಿವಾದಾತ್ಮಕ ಸ್ಪರ್ಧಿ ಎಂದೇ ಪ್ರಶಾಂತ್​ ಗುರುತಿಸಿಕೊಂಡಿದ್ದಾರೆ. ಸ್ಯಾಂಡಲ್​ವುಡ್​ ಡ್ರಗ್ಸ್​ ಪ್ರಕರಣದಲ್ಲಿ ಇತ್ತೀಚೆಗಷ್ಟೇ ಭಾರಿ ಸುದ್ದಿ ಮಾಡಿದ್ದರು. (ಏಜೆನ್ಸೀಸ್​)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net