

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿರುವ ‘ಬಿಗ್ಬಾಸ್ ಕನ್ನಡ ಸೀಸನ್ 7’ರ ಅಂತಿಮ ಸುತ್ತಿಗೆ ಶೈನ್ ಶೆಟ್ಟಿ, ವಾಸುಕಿ ವೈಭವ್ ಮತ್ತು ಕುರಿ ಪ್ರತಾಪ್ ತಲುಪಿದ್ದು, ಭಾನುವಾರದ ಎಪಿಸೋಡ್ ವಿಜೇತರನ್ನು ನಿರ್ಣಯಿಸಲಿದೆ.
ನೂರಕ್ಕೂ ಅಧಿಕ ದಿನಗಳಿಂದ ನಡೆಯುತ್ತಿರುವ ಹಣಾಹಣಿಯಲ್ಲಿ ಶನಿವಾರ (ಫೆ.1)ರವರೆಗೂ ಬಿಗ್ಬಾಸ್ ಮನೆಯಲ್ಲಿ ಶೈನ್ ಶೆಟ್ಟಿ, ವಾಸುಕಿ ವೈಭವ್, ಕುರಿ ಪ್ರತಾಪ್, ದೀಪಿಕಾ ದಾಸ್, ಭೂಮಿ ಶೆಟ್ಟಿ ಅವರಿದ್ದರು. ಆ ಪೈಕಿ ದೀಪಿಕಾ ಮತ್ತು ಭೂಮಿ ಬಿಗ್ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.
ಈಗ ಉಳಿದಿರುವ ಮೂವರಲ್ಲಿ ಗೆಲ್ಲುವರು ಯಾರು ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ. ವಿಜೇತ ಸ್ಪರ್ಧಿಗೆ 61 ಲಕ್ಷ ರೂ. ಬಹುಮಾನ ಸಿಗಲಿದೆ. ‘ಬಿಗ್ಬಾಸ್ ಸೀಸನ್ 7’ರ ಸ್ಪರ್ಧೆ 18 ಅಭ್ಯರ್ಥಿಗಳಿಂದ ಆರಂಭವಾಗಿತ್ತು.