ಬಿಗ್​ಬಾಸ್​ ಮನೆಯಲ್ಲಿ ಹಾಡಿನಲ್ಲೇ ಮೋಡಿ ಮಾಡ್ತಾರಾ ಧಾರವಾಡದ ಯುವ ಗಾಯಕ ವಿಶ್ವಾ?

bb vishwa
Published on

ಬೆಂಗಳೂರು: ಬಿಗ್​ಬಾಸ್​ ಸೀಸನ್​ 8 ಆರಂಭವಾಗಿದೆ. ಅವರು ಹೋಗುತ್ತಾರೆ, ಇವರು ಮನೆಯೊಳಗೆ ಇರುತ್ತಾರೆ ಎನ್ನುವ ಎಲ್ಲ ಕುತೂಹಲಗಳಿಗೆ ಅಂತೂ ಬ್ರೇಕ್​ ಬಿದ್ದಿದೆ. ಈ ಬಾರಿ ಧಾರವಾಡದ ಯುವ ಗಾಯಕ ವಿಶ್ವ ಕೂಡ ಬಿಗ್​ಬಾಸ್​ ಮನೆಗೆ ಎಂಟರ್​ ಆಗಿದ್ದಾರೆ.

ಹಾಡು ಕರ್ನಾಟಕ ರಿಯಾಲಿಟಿ ಶೋನಲ್ಲಿ ತನ್ನ ಅದ್ಭುತ ಕಂಠಸಿರಿಯಿಂದ ಎಲ್ಲರ ಮನಸ್ಸು ಸೂರೆಗೊಂಡಿದ್ದ ಗಾಯಕ ವಿಶ್ವನಾಥ ಹಾವೇರಿ. ಕಲರ್ಸ್​ ಕನ್ನಡದಲ್ಲಿ ಮೂಡಿಬಂದಿದ್ದ ಈ ರಿಯಾಲಿಟಿ ಶೋನಲ್ಲಿ ವಿಶ್ವನ ಪ್ರತಿಭೆಯನ್ನು ಕರ್ನಾಟಕದ ಜನತೆ ಮೆಚ್ಚಿತ್ತು.

ಇದೀಗ ವಿಶ್ವ ಬಿಗ್​ಬಾಸ್​ 8ರ ನಾಲ್ಕನೇ ಸ್ಪರ್ಧಿಯಾಗಿ ಎಂಟ್ರಿ ಪಡೆದುಕೊಂಡಿದ್ದಾರೆ. ಈ ಹಿಂದಿನ ಸೀಸನ್​ಗಳಲ್ಲೂ ಅನೇಕ ಗಾಯಕರು ಬಿಗ್​ಬಾಸ್​ ಮನೆಯೊಳಗೆ ಹೋಗಿ ತಮ್ಮ ಹಾಡುಗಳಿಂದಲೇ ಮೋಡಿ ಮಾಡಿದ್ದರು. ಅದೇ ರೀತಿ ವಿಶ್ವಾ ಕೂಡ ಹಾಡಿನ ಮೋಡಿ ಮಾಡುತ್ತಾರಾ ಎನ್ನುವುದನ್ನು ಕಾದು ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net