

ಬೆಂಗಳೂರು: ಬಹು ನಿರೀಕ್ಷೆಯ ಬಿಗ್ಬಾಸ್ ಸೀಸನ್ 8ಕ್ಕೆ ಇಂದು ಆರಂಭವಾಗಿದೆ. ಶುಭಾ ಪೂಂಜಾ, ಶಂಕರ್ ಅಶ್ವಥ್, ವೈಷ್ಣವಿಯಂತಹ ಸೆಲೆಬ್ರಿಟಗಳು ಮನೆಯೊಳಗೆ ಗ್ರ್ಯಾಂಡ್ ಎಂಟ್ರಿ ತೆಗೆದುಕೊಂಡಿದ್ದಾರೆ. ಎಲ್ಲರಿಗೂ ಹಿರಿಯರಾಗಿ ಪೋಷಕ ನಟ ಶಂಕರ್ ಅಶ್ವಥ್ ಸೇರಿಕೊಂಡಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವಂತೆ ಶಂಕರ್ ಅಶ್ವಥ್ ಅವರು ಕನ್ನಡದ ಚಾಮಯ್ಯ ಮೇಷ್ಟ್ರು ಎಂದೇ ಪ್ರಸಿದ್ಧಿ ಪಡೆದಿದ್ದ ನಟ ಅಶ್ವಥ್ ನಾರಾಯಣ್ ಅವರ ಮಗ. ಹಲವಾರು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ಜನರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾದವರು.
ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿರುವ ಶಂಕರ್ ಅವರಿಗೆ. ನಟಿಸಲು ಸಿನಿಮಾಗಳಲ್ಲಿ ಅವಕಾಶ ಸಿಗದ ಹಿನ್ನೆಲೆಯಲ್ಲಿ ಕ್ಯಾಬ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದಾರೆ. ಇದೀಗ ಅವರು ಬಿಗ್ಬಾಸ್ ಮನೆಯ ಮೂರನೇ ಸ್ಪರ್ಧಿಯಾಗಿ ಮನೆಯೊಳಗೆ ಹೋಗಿದ್ದು, ಕಿರಿಯ ಸ್ಪರ್ಧಿಗಳಿಗೆ ಅಪ್ಪನಂತೆ ಪಾಠ ಮಾಡುತ್ತಾರೋ ಅಥವಾ ಆಟವಾಡುತ್ತಾರೋ ಎನ್ನುವುದನ್ನು ಕಾದು ನೋಡಬೇಕು.