

ಬಿಗ್ಬಾಸ್ ಸೀಸನ್ 11ರ ಶೋನಿಂದ ಎಲಿಮಿನೇಟ್ ಆಗಿರುವ ಸ್ಪರ್ಧಿ ಜಗದೀಶ್, ‘ಐ ಮಿಸ್ ಬಿಗ್ಬಾಸ್’ ಎನ್ನುತ್ತಿದ್ದಾರೆ. ಬಿಗ್ ಬಾಸ್ ಕಾರ್ಯಕ್ರಮ ವ್ಯಕ್ತಿಯ ಜೀವನವನ್ನೇ ತೋರಿಸುವ ಕನ್ನಡಿ ಆಗಿದೆ. ಅಲ್ಲಿ ನನ್ನ ನಿಜ ಮುಖ ನೋಡಿದಾಗ ನನಗೇ ಆಶ್ಚರ್ಯ ಆಯ್ತು. ನನ್ನಲ್ಲಿ ಅಡಗಿದ ಕೋಪ, ಪ್ರತಿಭೆ ಎಲ್ಲವೂ ಅರ್ಥವಾಗಿದೆ. ನಿಜವಾಗಿಯೂ ನಾವು ಅದೃಷ್ಟವಂತರು ಎಂದು ಜಗದೀಶ್ ಅವರದ್ದು ಎನ್ನಲಾದ ವಾಯ್ಸ್ ನೋಟ್ನಲ್ಲಿದೆ.
ಹಂಸ ಹೇಗೆ ಹಂಸ ಆಗ್ತಾರೆ? ಛತ್ರಿ ಹಿಡಿದುಕೊಂಡು ರೋಮ್ಯಾನ್ಸ್ ಮಾಡೋವಾಗ ಏನೂ ಅನಿಸಲೇ ಇಲ್ವೇ? ಕ್ರಶ್ ಆಫ್ ಕರ್ನಾಟಕ ಆದ್ಮೇಲೆ ಜಗದೀಶ್ ಅವರ ಜೊತೆಗೆ ಮನೆ ಮಂದಿ ಚೆನ್ನಾಗಿಯೇ ಮಾತನಾಡಲೇ ಇಲ್ಲ. ಆದರೆ, ಹಂಸ ಅವರು ಜಗದೀಶ್ ಅವರಿಗೆ ಮೋಸ ಮಾಡಿದ್ರು ಅನ್ನೋದನ್ನ ಸುದೀಪ್ ತುಂಬಾನೆ ಚೆನ್ನಾಗಿಯೇ ಜನರಿಗೆ ತಿಳಿಯೋ ಹಾಗೆ ವೀಕೆಂಡ್ ಎಪಿಸೋಡ್ನಲ್ಲಿ ಹೇಳಿದ್ರು.
ಜಗದೀಶ್ ಹಾಗು ಹಂಸ ರೊಮ್ಯಾನ್ಸ್ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಲಿದೆ. ಜತೆಗೆ ಇವರಿಬ್ಬರ ನಡುವೆ ಪ್ರೀತಿ ಹುಟ್ಟಿದ್ದು ನಿಜವೇ ಅನ್ನೋ ಚರ್ಚೆಯನ್ನೂ ಜನ ಮಾಡುತ್ತಿದ್ದಾರೆ.ಅಂತೆಯೇ ಜಗದೀಶ್ ಒಂದು ಪ್ರಶ್ನೆಯನ್ನ ಕೇಳಲಾಗಿದೆ. ಆ ಪ್ರಶ್ನೆ ಏನು ಅಂದ್ರೆ...ಹಂಸ ಅವರ ಪತಿ ನೀವು ಹೊರಗಡೆ ಸಿಕ್ಕಿದ್ರೆ ಹೊಡೆಯಲೇಬೇಕೆಂದು ಮಚ್ಚು ಹಿಡಿದುಕೊಂಡು ಓಡಾಡ್ತಿದ್ದಾರೆ ನಿಮಗದು ಗೊತ್ತೇ ಎಂದು..?!
ಇದಕ್ಕೆ ಬಿಗ್ಬಾಸ್ ಜಗದೀಶ್ ನಗುತ್ತಲೇ ಉತ್ತರಿಸಿದ್ದಾರೆ. ಅಯ್ಯೋ ಹಂಸ ಅವರ ಪತಿ ನನ್ನನ್ನ ಹೊಡೆಯೋಕೆಲ್ಲ ಬರಬೇಡಿ ತಮಾಷೆಯಾಗಿ ತೆಗೆದುಕೊಳ್ಳಿ ಮಚ್ಚು ಗಿಚ್ಚು ಎಲ್ಲ ಬೇಡಾ ಸ್ವಾಮಿ ಎಂದು ಜಗದೀಶ್ ಮುಗುಳ್ನಕ್ಕಿದ್ದಾರೆ.
ಸದ್ಯ ಜಗದೀಶ್ ಅವರ ಈ ರೀತಿ ನೀಡಿದ ಉತ್ತರ ಎಲ್ಲೆಡೆ ವೈರಲ್ ಆಗುತ್ತಲಿದ್ದು, ಜಗದೀಶ್ ಅವರನ್ನ ಹಂಸ ಅವರ ಪತಿ ಹೇಗೆ ಸುಮ್ನೆ ಬಿಟ್ಟಿದ್ದಾರೋ ಎಂದು ಹಲವರು ಕಾಮೆಂಟ್ ಮಾಡ ತೊಡಗಿದ್ದಾರೆ. ಇನ್ನೂ ಹಲವರು ಹಂಸ ಮತ್ತು ಜಗದೀಶ್ ನಡುವಿನ ರೊಮ್ಯಾನ್ಸ್ ಫನ್ನಿಯಾಗಿತ್ತು ಎಂದಿದ್ದಾರೆ.