ಅನುಷ್ಕಾ ಶೆಟ್ಟಿ ನಟನೆಯ 'ಮಿಸ್ ಶೆಟ್ಟಿ ಮಿಸೆಸ್​ ಪೋಲಿಶೆಟ್ಟಿ' ಬಿಡುಗಡೆ ಯಾವಾಗ?; ಇಲ್ಲಿದೆ ಮಾಹಿತಿ

anushka shetty
Published on

ಆಂಧ್ರಪ್ರದೇಶ: ಟಾಲಿವುಡ್ ಚಿತ್ರರಂಗದ ಬ್ಯೂಟಿ ಕ್ವೀನ್, ಮಂಗಳೂರಿನ ಚೆಲುವೆ ನಟಿ ಅನುಷ್ಕಾ ಶೆಟ್ಟಿ (Anushka Shetty) ನಟನೆಯ 'ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' (Miss Shetty Mr Polishetty) ಚಿತ್ರದ ಬಿಡುಗಡೆ ದಿನಾಂಕದ ಕುರಿತು ಇದೀಗ ಚಿತ್ರತಂಡ ಹೊಸ ಅಪ್ಡೇಟ್​​ ನೀಡಿದೆ.

ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಮತ್ತು ಯುವ ನಟ ನವೀನ್ ಪೋಲಿಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮಹೇಶ್ ಬಾಬು ಬರೆದು ನಿರ್ದೇಶಿಸಿರುವ ಈ ಚಿತ್ರದ ಟೀಸರ್ ಮತ್ತು ಬಿಡುಗಡೆಗೊಂಡ ಎರಡು ಹಾಡುಗಳು ಸಿನಿಪ್ರೇಕ್ಷಕರ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ತಮ್ಮ ಚಿತ್ರದ ಪ್ರಚಾರ ಕೆಲಸವನ್ನು ನಟ ನವೀನ್ ಪೋಲಿಶೆಟ್ಟಿ ಉತ್ಸಾಹದಿಂದ ಮಾಡುತ್ತಿದ್ದು, ಈ ಸಿನಿಮಾ ಯಶಸ್ಸಿನತ್ತ ಸಾಗಲಿ ಎಂದು ಆಶಯ ವ್ಯಕ್ತಪಡಿಸಿದ್ದಾರೆ. ಇಲ್ಲಿಯವರೆಗೂ ಸಿನಿಮಾದ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸದ ನಿರ್ಮಾಪಕರು (Producer) ಇದೀಗ ರಿಲೀಸ್​ ಡೇಟ್​​ ಅನ್ನು ನಾಳೆ ಮಧ್ಯಾಹ್ನ 1:35ಕ್ಕೆ ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಈ ಚಿತ್ರದ ಪೋಸ್ಟರ್​​, ಟೀಸರ್​​ ಚಿತ್ರರಸಿಕರಲ್ಲಿ ಸಾಕಷ್ಟು ಕುತೂಹಲವನ್ನು ಕೆರಳಿಸಿದ್ದು, ಅನುಷ್ಕಾ ಶೆಟ್ಟಿ ಬಾಣಸಿಗ (Chef) ಪಾತ್ರದಲ್ಲಿ ನಟಿಸಿದರೆ, ನವೀನ್ ಪೋಲಿಶೆಟ್ಟಿ ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇವರಿಬ್ಬರ ಜೋಡಿ ಪರದೆಯ ಮೇಲೆ ಹೇಗೆ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಚಿತ್ರಕ್ಕೆ ಮದನ್ ಸಂಗೀತ ಸಂಯೋಜನೆ ಮಾಡಿದ್ದು, ಯುವಿ ಕ್ರಿಯೇಷನ್ಸ್ ಅಡಿಯಲ್ಲಿ ವಂಶಿ ಮತ್ತು ಪ್ರಮೋದ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ ದಕ್ಷಿಣ ಭಾರತದ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net