‘ಬಿಗ್ ಬಿ’ ಮೊದಲ ಫೋಟೋಶೂಟ್ ... ಸ್ಟಾರೂ ಇಲ್ಲದ, ಸ್ಟೈಲೂ ಇಲ್ಲದ ಈ ಫೋಟೋ ತೆಗೆದಿದ್ದು ಯಾವಾಗ ಗೊತ್ತಾ?

Amitabh Bachchan Final
Published on

‘ಬಿಗ್ ಬಿ’ ತಮ್ಮ 50 ಪ್ಲಸ್ ವರ್ಷಗಳ ಚಿತ್ರಜೀವನದಲ್ಲಿ ಅನೇಕ ಫೋಟೋಶೂಟ್‌ಗಳಲ್ಲಿ ಭಾಗಿಯಾಗಿದ್ದಾರೆ. ಇದೀಗ ಮೊದಲ ಬಾರಿಗೆ ಅವರು ತಮ್ಮ ಮೊದಲ ಫೋಟೋಶೂಟ್‌ನಲ್ಲಿ ತೆಗೆದ ಫೋಟೋವೊಂದನ್ನು ಅವರು ತಮ್ಮ ಇನ್‌ಸ್ಟಾಗ್ರಾಂ ಅಕೌಂಟ್‌ನಲ್ಲಿ ಹಂಚಿಕೊಂಡಿದ್ದಾರೆ.

ಅಂದಹಾಗೆ, ಈ ಫೋಟೋ ತೆಗೆದಿದ್ದು ಯಾವಾಗ ಗೊತ್ತಾ? 1969ರಲ್ಲಿ. ಅದೇ ವರ್ಷ ಅಮಿತಾಭ್ ಚಿತ್ರರರಂಗಕ್ಕೆ ಕಾಲಿಟ್ಟಿದ್ದು. ‘ಸಾಥ್ ಹಿಂದುಸ್ಥಾನಿ’ ಎಂಬ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು ಅಮಿತಾಭ್ ಬಚ್ಚನ್. ಆ ಸಂದರ್ಭದಲ್ಲಿ ‘ಸ್ಟಾರ್ ಆ್ಯಂಡ್ ಸ್ಟೈಲ್’ ಎಂಬ ಜನಪ್ರಿಯ ಸಿನಿಮಾ ಮ್ಯಾಗಜಿನ್‌ಗೆ ತೆಗೆದ ಫೋಟೋ ಇದು. ಈ ೆಟೋ ಹಂಚಿಕೊಂಡಿರುವ ‘ಬಿಗ್ ಬಿ’, ‘ಇದರಲ್ಲಿ ಸ್ಟಾರೂ ಇಲ್ಲ, ಸ್ಟೈಲೂ ಇಲ್ಲ’ ಎಂದು ತಮ್ಮನ್ನು ತಾವೇ ಕಿಚಾಯಿಸಿಕೊಂಡಿದ್ದಾರೆ.

‘ಸಾಥ್ ಹಿಂದುಸ್ಥಾನಿ’ ಚಿತ್ರದಿಂದ ಪ್ರಾರಂಭವಾದ ಅಮಿತಾಭ್ ಅವರ ಸಿನಿಜರ್ನಿ, 51 ವರ್ಷಗಳಾದರೂ ನಿರಂತರವಾಗಿ ಮುಂದುವರೆದಿದೆ. ಇವತ್ತಿಗೂ ಬಾಲಿವುಡ್‌ನಲ್ಲಿ ಅತೀ ಹೆಚ್ಚು ಚಿತ್ರಗಳಲ್ಲಿ ಯಾರಾದರೂ ನಟಿಸುತ್ತಿದ್ದಾರೆ ಎಂದರೆ ಅವರೇ. ಕಳೆದ ವರ್ಷ ‘ಬದ್ಲಾ’ ಎಂಬ ಚಿತ್ರದಲ್ಲಿ ನಟಿಸಿದ ಅವರು, ‘ಗುಲಾಬೋ ಸೀತಾಬೋ’, ‘ಝುಂಡ್’, ‘ಚೆಹ್ರೆ’, ‘ಬ್ರಹ್ಮಾಸ್ತ್ರ’ ಮುಂತಾದ ಚಿತ್ರಗಳಲ್ಲಿ ನಟಿಸುವ ಮೂಲಕ, ಬಾಲಿವುಡ್‌ನ ಬ್ಯುಸಿ ಸ್ಟಾರ್ ಎಂದನಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net