

ಬೆಂಗಳೂರು: ಕರೊನಾ ಬಿಕ್ಕಟ್ಟಿನ ನಡುವೆ ನಟ ಭುವನ್ ಪೊನ್ನಣ್ಣ ಮತ್ತು ನಟಿ ಹರ್ಷಿಕಾ ಪೂಣಚ್ಚ ಕಳೆದ ಒಂದು ತಿಂಗಳಿನಿಂದ ಒಂದಲ್ಲ ಒಂದು ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಆಹಾರ ವಿತರಣೆಯಿಂದ ಹಿಡಿದು, ಆಕ್ಸಿಜನ್ ಸಹ ಒದಗಿಸಿದ್ದಾರೆ. ಆಂಬುಲೆನ್ಸ್ ಸೇವೆಯನ್ನೂ ನೀಡಿದ್ದಾರೆ. ಇದೀಗ ಉತ್ತರ ಕರ್ನಾಟಕ ಭಾಗದ ಕೆಲ ಹಳ್ಳಿಗಳಿಗೂ ತೆರಳಿ ಅಲ್ಲಿನ ಜನರಿಗೆ ಆತ್ಮಸ್ಥೆ$ರ್ಯ ತುಂಬಿ ಬಂದಿದ್ದಾರೆ.
"ಹುಷಾರ್' ಅಭಿಯಾನ ಆರಂಭಿಸಿರುವ ಭುವನ್ ಮತ್ತು ಹರ್ಷಿಕಾ ಅವರ ತಂಡ, ಮೊದಲಿಗೆ ಆಯ್ದುಕೊಂಡಿದ್ದು, ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಸವಸುದ್ದಿ ಗ್ರಾಮವನ್ನು. ಈ ಕುಗ್ರಾಮದಲ್ಲಿ ಕೋವಿಡ್ನಿಂದಲೇ 80 ಜನ ತೀರಿಕೊಂಡಿದ್ದಾರೆ. ಹಾಗಾಗಿ ಅಲ್ಲಿನ ಜನರಿಗೆ ಧೈರ್ಯ ತುಂಬುವ ಉದ್ದೇಶಕ್ಕೆ ಆ ಹಳ್ಳಿಗೆ ತೆರಳಿ ಒಂದಷ್ಟು ಹೊತ್ತು ಅವರೊಂದಿಗೆ ಕಳೆದು ಬಂದಿದ್ದಾರೆ. ಈ ಬಗ್ಗೆ ಮಾಹಿತಿ ನೀಡುವ ಹರ್ಷಿಕಾ, "ಸವಸುದ್ದಿ ಗ್ರಾಮದಲ್ಲಿ ತುಂಬ ಸಮಸ್ಯೆಗಳಿವೆ. ಸರಿಯಾದ ಮನೆಯೂ ಅಲ್ಲಿನವರಿಗಿಲ್ಲ. ಹಾಗಾಗಿ ನಮ್ಮ ಕೈಲಾದಷ್ಟು ಸೇವೆ ಮಾಡಿದ್ದೇವೆ. ಹುಷಾರ್ ಅಭಿಯಾನದ ಮೂಲಕ ಜನರಿಗೆ ಮಾಸ್ಕ್ ಎಷ್ಟು ಮಹತ್ವದ್ದು ಎಂಬುದನ್ನು ಅರಿವು ಮೂಡಿಸಿದ್ದೇವೆ. ಭುವನಂ ೌಂಡೇಷನ್ ವತಿಯಿಂದ ಅಲ್ಲಿನ ಕುಟುಂಬಗಳಿಗೆ ದಿನಸಿ ವಿತರಣೆ ಮಾಡಿದ್ದೇವೆ. ಕೋವಿಡ್ನಿಂದ ಮಡಿದ ಕುಟುಂಬಗಳಿಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದೇವೆ. ಅದೇ ರೀತಿ ಕಲಬುರಗಿಯ ಸೇಡಂ, ಬಾಗಲಕೋಟೆಯ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದೇವೆ' ಎನ್ನುತ್ತಾರೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಮಗಳಿಗೆ ತೆರಳುವ ಯೋಜನೆಯನ್ನೂ ಈ ಜೋಡಿ ಹಾಕಿಕೊಂಡಿದೆ.
ಮಗುವಿಗೆ ಹರ್ಷಿಕಾ ಹೆಸರು
ಇದೆಲ್ಲ ಒಂದೆಡೆಯಾದರೆ, ಸವಸುದ್ದಿ ಗ್ರಾಮದ ಲಕ್ಷ$್ಮಣ ಎಂಬುವವರ ಮನೆಗೆ ಹೆಣ್ಣು ಮಗುವಿನ ಆಗಮನವಾಗಿದ್ದು, ಆ ಮಗುವಿಗೆ ಹರ್ಷಿಕಾ ಎಂದು ನಾಮಕರಣ ಮಾಡಿದ್ದಾರೆ. ಅದರ ೋಟೋವನ್ನು ಹರ್ಷಿಕಾ ಅವರಿಗೂ ಕಳುಹಿಸಿಕೊಟ್ಟಿದ್ದಾರೆ.