ಸುಶಾಂತ್​ ನೀನಿಲ್ಲದೆ 20 ದಿನಗಳಾದವು; ಭಾವುಕ ಪತ್ರ ಬರೆದ ಭೂಮಿಕಾ ಚಾವ್ಲಾ

bhumika
Published on

ಸುಶಾಂತ್​ ಸಿಂಗ್​ ಇಲ್ಲವಾಗಿ 20 ದಿನಗಳಾದವು. ಅವರ ಸಾವಿನ ನೋವಿನಿಂದ ಅವರ ಕುಟುಂಬ ಇನ್ನೂ ಹೊರಬಂದಿಲ್ಲ. ಬಾಲಿವುಡ್​ ಮಂದಿಗೂ ದೊಡ್ಡ ಶಾಕ್​ ನೀಡಿತ್ತು ಅವರ ಆತ್ಮಹತ್ಯೆ ಸುದ್ದಿ. ಅಲ್ಲಿಂದ ಇಲ್ಲಿಯವರೆಗೂ ಏನೆಲ್ಲ ಬೆಳವಣಿಗೆಗಳಾದವು ಎಂಬುದನ್ನು ನೀವು ಈಗಾಗಲೇ ಕೇಳಿದ್ದೀರಿ, ನೋಡಿದ್ದೀರಿ, ಓದಿದ್ದೀರಿ. ಇದೀಗ ಸುಶಾಂತ್ ಸಾವಿನ ಬೆನ್ನಲ್ಲೇ ಅವರ ನೆನಪಲ್ಲೇ ನಟಿ ಭೂಮಿಕಾ ಚಾವ್ಲಾ ಭಾವುಕ ಪತ್ರದ ಮೂಲಕ ಗುಡ್​ಬೈ ಹೇಳಿದ್ದಾರೆ.

‘ಇಂದಿಗೆ 20 ದಿನಗಳಾದವು ನೀನಿಲ್ಲದೆ. ಈಗ ಮೇಲೆದ್ದು ನಿನ್ನ ಬಗ್ಗೆ ವಿಚಾರಿಸುತ್ತಿದ್ದೇನೆ. ಈಗಲೂ ನನಗೆ ನಂಬಲಾಗುತ್ತಿಲ್ಲ. ಏನಿದು ಅಂತ. ಒಂದೇ ಒಂದು ಸಲ ನಿನ್ನ ಜೊತೆ ಸ್ಕ್ರೀನ್​ ಶೇರ್ ಮಾಡಿಕೊಂಡಿದ್ದೇನೆ. ಅದು ಖಿನ್ನತೆಯಾ ಅಥವಾ ಅದು ನಿನ್ನ ವೈಯಕ್ತಿಕವಾ.. ನೀನು ನನ್ನ ಬಳಿ ಮಾತನಾಡಬೇಕಿತ್ತು. ಅದು ವೃತ್ತಿಪರತೆ ಆಗಿದ್ರೆ ಪರವಾಗಿಲ್ಲ. ನೀನು ಈಗಾಗಲೇ ಒಳ್ಳೊಳ್ಳೆ ಸಿನಿಮಾ ಮಾಡಿದ್ದೀಯಾ. ನಿನ್ನ ಮಾತಿಗೆ ನಾನು ಒಪ್ಪುತ್ತೇನೆ. ಸಿನಿಮಾರಂಗದಲ್ಲಿ ಬದುಕು ಕಟ್ಟಿಕೊಳ್ಳುವುದು ಅಷ್ಟು ಸುಲಭ ಅಲ್ಲ ಎಂದು. ನಾನು ಹೊರಗಿನವಳು ಅಥವಾ ಒಳಗಿನವಳೆಂದು ಈ ಮಾತನ್ನು ಹೇಳುತ್ತಿಲ್ಲ. ಏನಿದು ಅಂತ..‘ ಹೀಗೆ ಹೇಳಿಕೊಂಡ ಭೂಮಿಕಾ, ತಾವೂ ಸಿನಿಮಾರಂಗದಲ್ಲಿ ಅನುಭವಿಸಿದ ಒಂದಷ್ಟು ಕಥೆಗಳನ್ನೂ ಹೇಳಿಕೊಂಡಿದ್ದಾರೆ.

ಅಂದಹಾಗೆ, ಎಂ.ಎಸ್​. ಧೋನಿ; ದಿ ಅನ್​ಟೋಲ್ಡ್ ಸ್ಟೋರಿ ಸಿನಿಮಾದಲ್ಲಿ ಸುಶಾಂತ್​ಗೆ ಅಕ್ಕನ ಪಾತ್ರದಲ್ಲಿ ಭೂಮಿಕಾ ನಟಿಸಿದ್ದರು. ಸಿನಿಮಾದಲ್ಲಿ ಸಣ್ಣದಾಗಿ ಬರುವ ಆ ಪಾತ್ರ, ನೋಡುಗರಿಗೆ ಇಷ್ಟವಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net