ಚಿರಂಜೀವಿಗೆ ರಾಖಿ ಕಟ್ಟಿದ ಕೀರ್ತಿ ... 'ಭೋಲಾ ಶಂಕರ್​'ನ ರಕ್ಷಾ ಬಂಧನ

Bhola Shankar - Final
Published on

ಹೈದರಾಬಾದ್​: ಚಿರಂಜೀವಿ ಅಭಿನಯದ ‘ಆಚಾರ್ಯ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಕಳೆದ ಎರಡು ವರ್ಷಗಳಿಂದ ಇದೇ ಚಿತ್ರದ ಗುಂಗಿನಲ್ಲಿದ್ದ ಚಿರಂಜೀವಿ, ಇದೀಗ ಅದರಿಂದ ಹೊರಬಂದು ಇನ್ನೆರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಸಜ್ಜಾಗಿದ್ದಾರೆ. ಈ ಪೈಕಿ ಅವರು 'ಭೋಲಾ ಶಂಕರ್​' ಎಂಬ ಚಿತ್ರದಲ್ಲಿ ನಟಿಸುತ್ತಿದ್ದು, ಅದು ತಮಿಳಿನ 'ವೇದಲಾಂ'ನ ರೀಮೇಕ್​ ಆಗಿದೆ.

ಇದನ್ನೂ ಓದಿ:

'ಭೋಲಾ ಶಂಕರ್​' ಚಿತ್ರದಲ್ಲಿ ಚಿರಂಜೀವಿ ಅವರ ಸಹೋದರಿಯ ಪಾತ್ರದಲ್ಲಿ ಕೀರ್ತಿ ಸುರೇಶ್ ನಟಿಸುತ್ತಿದ್ದಾರೆ. ಭಾನುವಾರ ರಕ್ಷಾ ಬಂಧನದ ಅಂಗವಾಗಿ, ವಿಶೇಷ ಟೀಸರ್​ವೊಂದು ಬಿಡುಗಡೆ ಮಾಡಲಾಗಿದೆ. ಚಿರಂಜೀವಿ ಅವರಿಗೆ ಕೀರ್ತಿ ರಾಖಿ ಕಟ್ಟುವ ಟೀಸರ್​ ಆಗಿದ್ದು, ಈ ಮೂಲಕ ಇದೊಂದು ಬರೀ ಆಕ್ಷನ್​ ಚಿತ್ರವಷ್ಟೇ ಅಲ್ಲ, ಅಣ್ಣ-ತಂಗಿ ಬಾಂಧವ್ಯವೂ ಇದೆ ಎಂದು ತೋರಿಸಲಾಗಿದೆ.

ಇದಕ್ಕೂ ಮುನ್ನ, ಭಾನುವಾರ ರಕ್ಷಾ ಬಂಧನದ ಜತೆಗೆ ಚಿರಂಜೀವಿ ಅವರ ಹುಟ್ಟುಹಬ್ಬವಾಗಿದ್ದು, ಟಾಲಿವುಡ್​ ನಟ ಮಹೇಶ್​ ಬಾಬು ಈ ಚಿತ್ರದ ಟೈಟಲ್​ ಟೀಸರ್​ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.

ಇದನ್ನೂ ಓದಿ:

ಈ ಚಿತ್ರವನ್ನು ಮೆಹರ್ ರಮೇಶ್ ನಿರ್ದೇಶಿಸುತ್ತಿದ್ದಾರೆ. ರಮೇಶ್​ ಈ ಹಿಂದೆ ಕನ್ನಡದಲ್ಲಿ ಪುನೀತ್​ ರಾಜಕುಮಾರ್​ ಅಭಿನಯದ 'ವೀರ ಕನ್ನಡಿಗ' ಮತ್ತು 'ಅಜಯ್​' ಚಿತ್ರಗಳನ್ನು ನಿರ್ದೇಶಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net