ಮದುವೆ ಸಂಭ್ರಮಕ್ಕೆಂದು ಬಂದು ಸಾವಿಗೆ ಶರಣಾದ ನಟಿ: ವಾಟ್ಸ್​ಆ್ಯಪ್​ ಸ್ಟೇಟಸ್​ನಲ್ಲಿತ್ತು ನಿಗೂಢ ಬರಹ!

Amrita Pandey
Published on

ಮುಂಬೈ: ಭೋಜ್​ಪುರಿ ನಟಿ ಅಮೃತಾ ಪಾಂಡೆ ಬಿಹಾರದ ಭಗಲ್ಪುರದಲ್ಲಿರುವ ತನ್ನ ಅಪಾರ್ಟ್​ಮೆಂಟ್​ನಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಶನಿವಾರ (ಏಪ್ರಿಲ್​ 27) ನಡೆದಿದೆ.​ ಸೀಲಿಂಗ್​ ಫ್ಯಾನ್​ಗೆ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.

ಆಕೆಯ ಅಪಾರ್ಟ್‌ಮೆಂಟ್‌ನಿಂದ ಯಾವುದೇ ಸೂಸೈಡ್ ನೋಟ್ ಪತ್ತೆಯಾಗಿಲ್ಲ. ಆದರೆ, ಆಕೆಯ ಸಾವಿಗೂ ಗಂಟೆಗಳ ಮೊದಲು ತನ್ನ ವಾಟ್ಸ್​ಆ್ಯಪ್ ಸ್ಟೇಟಸ್​​ ಮೂಲಕ ನಿಗೂಢ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾಳೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.

ವರದಿಗಳ ಪ್ರಕಾರ, ಅಮೃತಾ ಮೂಲತಃ ತನ್ನ ಪತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದಳು. ಆದರೆ, ಇತ್ತೀಚೆಗೆ ಆಕೆ ಭಗಲ್ಪುರದಲ್ಲಿ ಮದುವೆ ನಿಮಿತ್ತ ತನ್ನ ಸಂಬಂಧಿಕರನ್ನು ಭೇಟಿ ಮಾಡಿದ್ದಳು. ಕೆಲವು ದಿನಗಳ ನಂತರ ಮನೆಗೆ ವಾಪಸ್​ ಆಗಲು ನಿರ್ಧರಿಸಿದಳು. ಶನಿವಾರ ತಡ ರಾತ್ರಿಯವರೆಗೂ ಎಚ್ಚರವಾಗಿದ್ದಳು. ವಾಟ್ಸ್​ಆ್ಯಪ್​ ಸ್ಟೇಟಸ್‌ನಲ್ಲಿ ನಿಗೂಢ ಬರಹವನ್ನು ಪೋಸ್ಟ್ ಮಾಡಿದ ಕೆಲವು ಗಂಟೆಗಳಲ್ಲಿ ತನ್ನ ಕೋಣೆಯಲ್ಲಿ ಶವವಾಗಿ ಪತ್ತೆಯಾದಳು ಎಂದು ಹೇಳಲಾಗಿದೆ.

ಪೊಲೀಸ್ ವರದಿಯ ಪ್ರಕಾರ, ಅಮೃತಾ ತನ್ನ ವಾಟ್ಸ್​ ಆ್ಯಪ್​ ಸ್ಟೇಟಸ್​ನಲ್ಲಿ "ಎರಡು ದೋಣಿಗಳಲ್ಲಿ ಆತನ ಜೀವನ ಏಕೆ, ನಾವು ಮತ್ತೊಂದು ದೋಣಿಯನ್ನು ಏರಿ ಅವರ ಪ್ರಯಾಣವನ್ನು ಸುಲಭಗೊಳಿಸಿದ್ದೇವೆ".ಎಂದು ಬರೆದುಕೊಂಡಿದ್ದಾಳೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆತ್ಮಹತ್ಯೆಗೆ ನಿಖರ ಕಾರಣವನ್ನು ತಿಳಿಯಲು ತನಿಖೆಯನ್ನು ಆರಂಭಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net