ಭಜರಂಗಿ ಲೋಕಿ ಸಖತ್ ಸ್ಟೈಲಿಷ್

NB 5
Published on

ಬೆಂಗಳೂರು: ನಾಯಕ, ನಾಯಕಿಯರು ಆಗಾಗ ಸ್ಟೈಲಿಷ್ ಲುಕ್​ನಲ್ಲಿ ಫೋಟೋಶೂಟ್​ಗೆ ಮುಖ ಒಡ್ಡುವುದು ಸಹಜ. ತೆರೆ ಮೇಲೆ ಅಬ್ಬರಿಸುವ ವಿಲನ್​ಗಳು ಫೋಟೋಶೂಟ್ ಮಾಡಿಸುವುದು ತುಂಬ ವಿರಳ. ಆದರೆ, ಕನ್ನಡದ ಖಡಕ್ ವಿಲನ್ ಎಂದೇ ಹೆಸರುವಾಸಿಯಾಗಿರುವ ಸೌರವ್ ಲೋಕಿ ಬಾಲಿವುಡ್ ಸ್ಟೈಲ್​ನಲ್ಲಿ ಫೋಟೋಶೂಟ್ ಮಾಡಿಸಿ ಗಮನ ಸೆಳೆದಿದ್ದಾರೆ.

ಶಿವರಾಜ್​ಕುಮಾರ್ ನಟನೆಯ ‘ಭಜರಂಗಿ’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ರಾ ಲುಕ್​ನಲ್ಲಿ ವಿಲನ್ ಆಗಿ ಮಿಂಚಿದ್ದ ಲೋಕಿ, ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ಲುಕ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ‘ರಥಾವರ’ ಚಿತ್ರದಲ್ಲಿ ಮಂಗಳಮುಖಿಯ ಪಾತ್ರ ಅವರಿಗೆ ಸಿಕ್ಕಾಪಟ್ಟೆ ಖ್ಯಾತಿ ತಂದುಕೊಟ್ಟಿತ್ತು. ಈಗ ಆ ಖಳನ ಲುಕ್ ಬದಿಗಿಟ್ಟು, ಕೊಂಚ ಸ್ಟೈಲಿಶ್ ಆಗಿದ್ದಾರೆ. ‘ಬಾಲಿವುಡ್​ನಲ್ಲಿ ಖಳ ನಟರಾಗಿ ಕಾಣಿಸಿಕೊಳ್ಳುವವರು ಸ್ಟೈಲಿಷ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ನಾವು ಯಾಕೆ ಈ ರೀತಿ ಮಾಡಿಸಬಾರದು ಎಂದು ನನಗೆ ಅನಿಸುತ್ತಿತ್ತು. ಆ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿಯವರ ಪರ್ಸನಲ್ ಡಿಸೈನರ್ ಪವಿತ್ರಾ ಎಸ್ ಗೌಡ ‘ದಮಯಂತಿ’ ಚಿತ್ರದಲ್ಲಿ ನನ್ನ ಲುಕ್ ನೋಡಿ, ‘ನಿಮ್ಮನ್ನು ಸ್ಟೈಲ್ ಐಕಾನ್ ರೀತಿ ಫೋಟೋಶೂಟ್ ಮಾಡಿಸುತ್ತೇನೆ..’ ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ಮೂರೇ ದಿನದಲ್ಲಿ ಕಾಸ್ಟ್ಯೂಮ್ ವಿನ್ಯಾಸ ಮಾಡಿ ಫೋಟೋಶೂಟ್ ಮಾಡಿಸಿದರು. ನನಗೂ ಚೇಂಜ್​ಓವರ್ ಸಿಕ್ಕಂತಾಯಿತು’ ಎನ್ನುತ್ತಾರೆ ಲೋಕಿ. ಫೋಟೋದ ಜತೆಗೆ ವಿಡಿಯೋ ಮಾಡಲಾಗಿದ್ದು, ಎಲ್ಲರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ.

‘ರಗಡ್ ವಿಲನ್ ಆಗಿದ್ದ ನೀವು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುತ್ತಿದ್ದೀರಿ’ ಎಂಬ ಮಾತುಗಳನ್ನು ಕೇಳುತ್ತಿದ್ದಾರಂತೆ. ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಬಿಡುಗಡೆ ಯಾದ ‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಮುಖ್ಯ ಖಳನಾಗಿ ಲೋಕಿ ನಟಿಸಿದ್ದರು. ಇನ್ನು ಹಲವು ಸಿನಿಮಾಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆವರಾಜ್​ಕುಮಾರ್ ನಟನೆಯ ‘ಭಜರಂಗಿ’ ಸಿನಿಮಾದಲ್ಲಿ ಸಿಕ್ಕಾಪಟ್ಟೆ ರಾ ಲುಕ್​ನಲ್ಲಿ ವಿಲನ್ ಆಗಿ ಮಿಂಚಿದ್ದ ಲೋಕಿ, ಅಂದಿನಿಂದ ಇಂದಿನವರೆಗೂ ಬೇರೆ ಬೇರೆ ಲುಕ್ ಇರುವ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅದರಲ್ಲೂ ‘ರಥಾವರ’ ಚಿತ್ರದಲ್ಲಿ ಮಂಗಳಮುಖಿಯ ಪಾತ್ರ ಅವರಿಗೆ ಸಿಕ್ಕಾಪಟ್ಟೆ ಖ್ಯಾತಿ ತಂದುಕೊಟ್ಟಿತ್ತು. ಈಗ ಆ ಖಳನ ಲುಕ್ ಬದಿಗಿಟ್ಟು, ಕೊಂಚ ಸ್ಟೈಲಿಶ್ ಆಗಿದ್ದಾರೆ. ‘ಬಾಲಿವುಡ್​ನಲ್ಲಿ ಖಳ ನಟರಾಗಿ ಕಾಣಿಸಿಕೊಳ್ಳುವವರು ಸ್ಟೈಲಿಷ್ ಆಗಿ ಫೋಟೋಶೂಟ್ ಮಾಡಿಸುತ್ತಾರೆ. ನಾವು ಯಾಕೆ ಈ ರೀತಿ ಮಾಡಿಸಬಾರದು ಎಂದು ನನಗೆ ಅನಿಸುತ್ತಿತ್ತು. ಆ ಸಮಯದಲ್ಲಿ ರಾಧಿಕಾ ಕುಮಾರಸ್ವಾಮಿಯವರ ಪರ್ಸನಲ್ ಡಿಸೈನರ್ ಪವಿತ್ರಾ ಎಸ್ ಗೌಡ ‘ದಮಯಂತಿ’ ಚಿತ್ರದಲ್ಲಿ ನನ್ನ ಲುಕ್ ನೋಡಿ, ‘ನಿಮ್ಮನ್ನು ಸ್ಟೈಲ್ ಐಕಾನ್ ರೀತಿ ಫೋಟೋಶೂಟ್ ಮಾಡಿಸುತ್ತೇನೆ..’ ಎಂದು ಹೇಳಿದ್ದರು. ಅದಕ್ಕೆ ತಕ್ಕಂತೆ ಮೂರೇ ದಿನದಲ್ಲಿ ಕಾಸ್ಟ್ಯೂಮ್ ವಿನ್ಯಾಸ ಮಾಡಿ ಫೋಟೋಶೂಟ್ ಮಾಡಿಸಿದರು. ನನಗೂ ಚೇಂಜ್​ಓವರ್ ಸಿಕ್ಕಂತಾಯಿತು’ ಎನ್ನುತ್ತಾರೆ ಲೋಕಿ. ಫೋಟೋದ ಜತೆಗೆ ವಿಡಿಯೋ ಮಾಡಲಾಗಿದ್ದು, ಎಲ್ಲರಿಂದ ಮೆಚ್ಚುಗೆ ಸಹ ವ್ಯಕ್ತವಾಗುತ್ತಿದೆ. ‘ರಗಡ್ ವಿಲನ್ ಆಗಿದ್ದ ನೀವು ಸಿಕ್ಕಾಪಟ್ಟೆ ಸ್ಟೈಲಿಶ್ ಆಗಿ ಕಾಣುತ್ತಿದ್ದೀರಿ’ ಎಂಬ ಮಾತುಗಳನ್ನು ಕೇಳುತ್ತಿದ್ದಾರಂತೆ. ಸಿನಿಮಾ ವಿಚಾರಕ್ಕೆ ಬಂದರೆ, ಇತ್ತೀಚೆಗೆ ಬಿಡುಗಡೆ ಯಾದ ‘ಕಾಣದಂತೆ ಮಾಯವಾದನು’ ಚಿತ್ರದಲ್ಲಿ ಮುಖ್ಯ ಖಳನಾಗಿ ಲೋಕಿ ನಟಿಸಿದ್ದರು. ಇನ್ನು ಹಲವು ಸಿನಿಮಾಗಳಲ್ಲಿಯೂ ಅವರು ತೊಡಗಿಸಿಕೊಂಡಿದ್ದಾರೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net