

ಮುಂಬೈ: ಅಕ್ಷಯ್ ಕುಮಾರ್ ಅಭಿನಯದ 'ಬೆಲ್ ಬಾಟಂ' ಚಿತ್ರವು ಆಗಸ್ಟ್ 19ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ. ಅದಕ್ಕೂ ಮುನ್ನ, ಮಂಗಳವಾರ ಸಂಜೆ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಯೂಟ್ಯೂಬ್ನ ಪೂಜಾ ಎಂಟರ್ಟೈನ್ಮೆಂಟ್ ಚಾನಲ್ನಲ್ಲಿ ಈ ಟ್ರೇಲರ್ ಬಿಡುಗಡೆಯಾಗಿದೆ.
1984ರಲ್ಲಿ ನಡೆದ ಇಂಡಿಯನ್ ಏರ್ಲೈನ್ಸ್ ಪ್ಲೇನ್ ಹೈಜಾಕ್ ಪ್ರಕರಣವನ್ನು ಈ ಚಿತ್ರ ಆಧರಿಸಿದ್ದು, ಚಿತ್ರದಲ್ಲಿ ಅಕ್ಷಯ್ ಕುಮಾರ್ ರಾ ಏಜೆಂಟ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರಕ್ಕೂ 'ಬೆಲ್ ಬಾಟಂ'ಗೂ ಏನು ಸಂಬಂಧ ಎಂಬ ಪ್ರಶ್ನೆ ಬರಬಹುದು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಅವರ ಕೋಡ್ ನೇಮ್ 'ಬೆಲ್ ಬಾಟಂ' ಎಂದಾಗಿದ್ದು, ಈ ಪ್ರಕರಣವನ್ನು ಭಾರತೀಯರು ಹೇಗೆ ಬೇಧಿಸುತ್ತಾರೆ ಎಂದು ತೋರಿಸಲಾಗಿದೆ.
‘ಬೆಲ್ ಬಾಟಂ’ ಚಿತ್ರವನ್ನು ರಂಜಿತ್ ತಿವಾರಿ ನಿರ್ದೇಶಿಸಿದ್ದು, ಪೂಜಾ ಎಂಟರ್ಟೈನ್ಮೆಂಟ್ ಸಂಸ್ಥೆಯಡಿ ವಾಶು ಭಾಗ್ನಾನಿ ಮತ್ತು ಜಾಕಿ ಭಾಗ್ನಾನಿ ಚಿತ್ರವನ್ನು ನಿರ್ಮಿಸಿದ್ದಾರೆ. ಇದೊಂದು ರೆಟ್ರೋ ಥ್ರಿಲ್ಲರ್ ಕಥೆಯಾಗಿದ್ದು ಅಕ್ಷಯ್ ಕುಮಾರ್ ಜತೆಗೆ ವಾಣಿ ಕಪೂರ್, ಲಾರಾ ದತ್ತ, ಹ್ಯೂಮಾ ಖುರೇಷಿ ಸೇರಿ ಹಲವರು ನಟಿಸಿದ್ದಾರೆ.
Bell