ಹುಬ್ಬಳ್ಳಿ: ಚನ್ನಮ್ಮ ವೃತ್ತದಲ್ಲಿರುವ ಕಿತ್ತೂರು ರಾಣಿ ಚನ್ನಮ್ಮನ ಪುತ್ಥಳಿಯನ್ನು ಹೆಜ್ಜೇನುಗಳು ಮುತ್ತಿಕೊಂಡಿವೆ. ಮುಖ, ತಲೆಯ ಭಾಗ ಸಂಪೂರ್ಣವಾಗಿ ಜೇನುನೊಣಗಳಿಂದಲೇ ತುಂಬಿಹೋಗಿದೆ.
ರಾಣಿ ಚನ್ನಮ್ಮನ ಮುಖಕ್ಕೆ ಏನನ್ನೋ ಹೊದೆಸಿ ಇಟ್ಟಂತೆ ಭಾಸವಾಗುತ್ತಿದ್ದು, ಆಕರ್ಷಕವಾಗಿಯೂ ಕಾಣಿಸುತ್ತಿದೆ. ಆದರೆ ಇಲ್ಲಿ ಈ ಪರಿ ಹೆಜ್ಜೇನು ಕಟ್ಟಿಕೊಂಡಿದ್ದು ಯಾವಾಗ ಎಂಬುದು ಗೊತ್ತಿಲ್ಲ. ಒಟ್ಟಿನಲ್ಲಿ ರಾಣಿ ಚನ್ನಮ್ಮನ ಮುಖವೇ ಕಾಣದಂತಾಗಿದೆ.
ಅದೆಷ್ಟು ಜನರನ್ನು ಆಕರ್ಷಿಸುತ್ತಿದೆ ಎಂದರೆ ಎಲ್ಲರೂ ಫೋಟೋ ತೆಗೆದುಕೊಳ್ಳುತ್ತಿದ್ದಾರೆ. ಕೆಲವರಂತೂ ವಾಹನ ನಿಲ್ಲಿಸಿ, ಸಮೀಪ ಹೋಗಿ ನಿಂತು ಸೆಲ್ಫಿ ತೆಗೆಯಲೂ ಪ್ರಯತ್ನಿಸುತ್ತಿದ್ದಾರೆ. ಆದರೆ ಅಲ್ಲಿಂದ ಜೇನು ನೊಣಗಳನ್ನು ಓಡಿಸುವುದು ಒಂದು ಸವಾಲೂ ಆಗಿದೆ.

ಗುರು ಭಾಂಡಗೆ ಅವರ ಕ್ಯಾಮರಾದಲ್ಲಿ ಸೆರೆಯಾದ ಫೋಟೋಗಳು ಇವು..: