BBK13: ಕಿರುತೆರೆ ಲೋಕದ ಅತಿದೊಡ್ಡ ರಿಯಾಲಿಟಿ ಶೋ ಬಿಗ್ಬಾಸ್ ಕನ್ನಡ ಸೀಸನ್ 13ರಲ್ಲಿ ಇದೀಗ ಟ್ವಿಸ್ಟ್ಗಳು, ಶಾಕಿಂಗ್ ಹೊಸ ಎಂಟ್ರಿಗಳು ಮತ್ತು ಎಲಿಮಿನೇಷನ್ಗಳೇ ಸಖತ್ ಸದ್ದು ಮಾಡುತ್ತಿವೆ. ಕಳೆದ ವಾರ, ಮಂಜು ಮನೆಯ ಮೂಲ ನಿಯಮವನ್ನು ಉಲ್ಲಂಘಿಸಿದ ಕಾರಣಕ್ಕೆ ಬಿಗ್ಬಾಸ್ ಮನೆಯಿಂದ ನೇರವಾಗಿ ಕಿಕ್ಔಟ್ ಆದರೆ, ಅನಾರೋಗ್ಯ ಸಮಸ್ಯೆಗಳಿಂದ ಸಂಗೀತಾ ಭಟ್ ಹೊರಬಂದರು. ಇವರ ಎಕ್ಸಿಟ್ ಬೆನ್ನಲ್ಲೇ ಅಗ್ನಿಪರೀಕ್ಷೆ ಸ್ಪರ್ಧಿಗಳಾದ ಲಕ್ಷ್ಮಿ ಮತ್ತು ಕುಮಾರಿ ಮನೆಯೊಳಗೆ ಪ್ರವೇಶಿಸಿದ್ದಾರೆ. ಹೀಗಿರುವಾಗಲೇ, ಮತ್ತೊಬ್ಬ ಸ್ಪರ್ಧಿ ಈ ವಾರ ಎಲಿಮಿನೇಟ್ ಆಗಿ ಕೆಲವರಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಹೊಸ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿಯೊಂದಿಗೆ ಈ ವಾರದ ಟಾಸ್ಕ್ಗಳನ್ನು ಆಡಿದ ಎರಡು ತಂಡಗಳ ಪೈಕಿ ಗಾನವಿ ತೋರಿದ ಆಟಕ್ಕೆ ಮನೆಯ ಸದಸ್ಯರು ಅಕ್ಷರಶಃ ಅಚ್ಚರಿಗೆ ಒಳಗಾದರು. ಆಟದ ವೈಖರಿ ಮತ್ತು ಸ್ಪರ್ಧಿಗಳು ತಾವೇ ಮಾಡಿಕೊಂಡ ಸಾಕಷ್ಟು ಮಿಸ್ಟೇಕ್ಗಳಿಗೆ ಎಂದಿನಂತೆ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ಪಂಚಾಯಿತಿಯಲ್ಲಿ ಕಿಚ್ಚನಿಂದ ಖಡಕ್ ಕ್ಲಾಸ್ ನಡೆಯಿತು. ಪದೇ ಪದೇ ಆಗುತ್ತಿರುವ ಅದದೇ ತಪ್ಪುಗಳನ್ನು ಬೇಸರದಿಂದ ಮನವರಿಕೆ ಮಾಡಿದ ಸುದೀಪ್ ಅವರು, ಕೆಲ ಸ್ಪರ್ಧಿಗಳಿಗೆ ತಮ್ಮ ಶೈಲಿಯಲ್ಲೇ ಕಿವಿ ಹಿಂಡಿದರು.
ಇನ್ನು, ಈ ವಾರ ಮನೆಯಿಂದ ಹೊರಹೋಗಲು ನೇರವಾಗಿ ನಾಮಿನೇಟ್ ಆದ ಗಾನವಿ ಗೌಡ, ಕಾವ್ಯ, ಸೋನಿಕಾ ಗೌಡ, ತಾಂಡವ್ ರಾಮ್, ಜಗದೀಶ ಮತ್ತು ಆಸಿಯಾ ಪೈಕಿ ಒಬ್ಬರು ಬಿಗ್ ಮನೆಗೆ ಗುಡ್ಬೈ ಹೇಳಿದ್ದಾರೆ. ಒಂದಷ್ಟು ಜನ ಅದಾಗಲೇ ಸೇವ್ ಆಗಿದ್ದರೆ, ಉಳಿದವರು ಮನೆಯಿಂದ ಹೊರಹೋಗಲು ಹಾಟ್ಸೀಟಿನಲ್ಲಿ ಕುಳಿತಿದ್ದಾರೆ. ಸಿನಿ ಮೂಲಗಳ ಪ್ರಕಾರ, ಇಂದು ದೊಡ್ಮನೆ ಆಟಕ್ಕೆ ವಿದಾಯ ಹೇಳಿದ ಸ್ಪರ್ಧಿ ಕಾವ್ಯ ಎನ್ನಲಾಗಿದೆ. ವೀಕ್ಷಕರಿಂದ ಕಡಿಮೆ ಮತಗಳನ್ನು ಪಡೆದ ಹಿನ್ನೆಲೆ ಎಲಿಮಿನೇಟ್ ಆಗಿ ಹೊರಬಂದಿದ್ದಾರೆ ಎಂದು ಹೇಳಲಾಗಿದೆ. ಅಷ್ಟಕ್ಕೂ, ಮನೆಯಿಂದ ಹೊರಬಂದಿರುವುದು ಖಚಿತವಾಗಿ ಕಾವ್ಯ ಅವರೇನಾ ಎಂಬುದನ್ನು ಇಂದಿನ ಸಂಚಿಕೆಯ ಕೊನೆಯಲ್ಲಿ ಕಾದು ನೋಡಬೇಕಿದೆ.