

ತಾಂಡವ್ ರಾಮ್ಗೆ ಈ ವಾರದ ಕಿಚ್ಚನ ಚಪ್ಪಾಳೆ.
ಅವಕಾಶ ಬಳಕೆ ಮಾಡಿಕೊಳ್ಳದೆ ಜೀರೋ ಆದ ರಕ್ಷಕರಿಗೆ ಫುಲ್ ಕ್ಲಾಸ್
ಲೂಟಿಕೋರರ ಆಟಕ್ಕೆ ಕಿಚ್ಚ ಸುದೀಪ್ರಿಂದ ಮೆಚ್ಚುಗೆ
Bigg Boss Kannada-13: ಬಿಗ್ಬಾಸ್ ಮನೆಯ ಈ ವಾರದ ಆಟ ಕೌತುಕವಾಗಿತ್ತು. ನಾಮಿನೇಟ್ ಆದವರು ಲೂಟಿಕೋರರಾಗಿ ವಜ್ರ, ಕಿರೀಟ, ಮೆಡಲ್ ಗೆದ್ದ ಪರಿಗೆ ವೀಕ್ಷಕರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಅದರಲ್ಲೂ ಸೌಂದರ್ಯಾ ಮತ್ತು ತಾಂಡವ್ ತಮ್ಮ ಮನಸ್ತಾಪ ಬಿಟ್ಟು ಆಡಿದ ಪರಿಗೆ ಮನಸೋತಿದ್ದರು. ಸದ್ಯ ಹೊಸದಾಗಿ ರಿಲೀಸ್ ಆದ ಪ್ರೋಮೋದಲ್ಲಿ ಕಿಚ್ಚ ಸುದೀಪ್ ನಿದ್ದೆಗಣ್ಣಿನಲ್ಲಿ ಕಾಲ ಕಳೆದ ರಕ್ಷಕರಿಗೆ ಕ್ಲಾಸ್ ತೆಗೆದುಕೊಂಡಿರುವುದು ಗೊತ್ತಾಗಿದೆ.
ಹೌದು, ರಕ್ಷಕರು ಮತ್ತು ಲೂಟಿಕೋರರು ಎಂದು ಟೀಮ್ ಮಾಡಲಾಗಿತ್ತು. ನಾಮಿನೇಟ್ ಆದ ತಾಂಡವ್, ಸೌಂದರ್ಯ ಮತ್ತು ಸೋನಿಕಾ, ಆಸಿಯಾ, ಕುಮಾರಿ, ಲಕ್ಷ್ಮಿ ಲೂಟಿಕೋರರಾಗಿದ್ದರು. ಇನ್ನೂ ಯಶಸ್, ಕಿರಣ್, ಗಾನವಿ ಹಾಗೂ ಜಗ್ಗಿ, ಪ್ರಶಾಂತ್ ರಕ್ಷಕರಾಗಿ ಮ್ಯೂಸಿಯಂನಲ್ಲಿಟ್ಟಿದ್ದ ವಸ್ತು ಕಾಪಾಡಬೇಕಿತ್ತು,
ಲೂಟಿ ಮಾಡಲು ತಾಂಡವ್ ಮತ್ತು ಸೌಂದರ್ಯ ತಮ್ಮ ಇಗೋ ಬದಿಗಿಟ್ಟು ಹಾಕಿದ ಶ್ರಮಕ್ಕೆ ಬಿಗ್ಬಾಸ್ ಪ್ರೇಮಿಗಳು ಫಿದಾ ಆಗಿದ್ದಾರೆ. ಜೊತೆಗೆ ರಕ್ಷಕರು ಮ್ಯೂಸಿಯಂ ಕಾಯದೇ ಬೇಕಾಬಿಟ್ಟಿ ಕೆಲಸ ಮಾಡಿದ ಬಗ್ಗೆ ಕಿಡಿಕಾರಿದ್ದರು. ಸದ್ಯ ಇದೇ ವಿಚಾರ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್ನಲ್ಲಿ ಚರ್ಚೆಯಾಗಲಿದೆ.
ಸಿಕ್ಕ ಒಂದು ಅವಕಾಶವನ್ನು ಸರಿಯಾಗಿ ಹ್ಯಾಂಡಲ್ ಮಾಡುವವರು ಹೀರೋ ಆಗ್ತಾರೆ. ಅದೇ ಅವಕಾಶವನ್ನು ಮಿಸ್ ಮಾಡಿಕೊಂಡವರು ಜೀರೋ ಆಗ್ತಾರೆ. ಯಾರು ಹೀರೋ ಮತ್ತು ಯಾರು ಜೀರೋ ಎನ್ನುವ ಪ್ರಶ್ನೆಯನ್ನು ಪ್ರೇಕ್ಷಕರ ಮುಂದಿಡಲಾಗಿದೆ. ರಕ್ಷಕರಿಗೆ ಯಾವ ರೀತಿ ಕ್ಲಾಸ್ ತೆಗೆದುಕೊಳ್ಳಲಾಗುತ್ತದೆ ಎನ್ನುವುದನ್ನು ಪೂರ್ತಿ ಎಪಿಸೋಡ್ನಲ್ಲಿ ನೋಡಬೇಕಾಗಿದೆ.
ಎಕ್ಸ್ನಲ್ಲಿ ಹಂಚಿಕೊಳ್ಳುತ್ತಿರುವ ಮಾಹಿತಿ ಪ್ರಕಾರ ಈ ವಾರದ ಕಿಚ್ಚನ ಚಪ್ಪಾಳೆಯನ್ನು ತಾಂಡವ್ಗೆ ನೀಡಲಾಗುತ್ತದೆ ಎನ್ನಲಾಗಿದೆ. ಇಷ್ಟೇ ಅಲ್ಲದೇ ಕಿಚ್ಚನ ಚಪ್ಪಾಳೆ ಪಡೆಯಲು ನಿಜಕ್ಕೂ ತಾಂಡವ್ ಡಿಸರ್ವಿಂಗ್ ಇದ್ದಾರೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಗುತ್ತಿದೆ. ಇನ್ನೂ ಕೆಲವರು ಸೌಂದರ್ಯ ಮತ್ತು ತಾಂಡವ್ ಇಬ್ಬರಿಗೂ ಕಿಚ್ಚನ ಚಪ್ಪಾಳೆ ಸಿಗಬೇಕು ಎಂದು ಬೇಡಿಕೆಯಿಟ್ಟಿದ್ದಾರೆ.
ಪಜಲ್ ಜೋಡಿಸು ಟಾಸ್ಕ್ನಲ್ಲಿ ಮೂವರು ಜೋಡಿಗಳ ಪೈಕಿ ಭರ್ಜರಿಯಾಗಿ ಗೆದ್ದು, ಸೌಂದರ್ಯ ಮತ್ತು ಆಸಿಯಾ ಕ್ಯಾಪ್ಟನ್ ರೇಸ್ಗೆ ಸೆಲೆಕ್ಟ್ ಆದರು. ಬಿಲ್ಲೆ ಜೋಡಿಸುವ ಟಾಸ್ಕ್ನಲ್ಲಿ ಇಬ್ಬರ ಮಧ್ಯೆ ಭಾರಿ ಪೈಪೋಟಿ ಏರಿತ್ತು. ಆ ಮಧ್ಯೆಯೂ ತಾಳ್ಮೆಯಿಂದ ಆಡಿ ಸೌಂದರ್ಯ ಮನೆಯ ಕ್ಯಾಪ್ಟನ್ ಆದರು. ಅಷ್ಟೇ ಅಲ್ಲದೇ ಈ ವಾರದ ಉತ್ತಮವನ್ನು ಸಹ ಪಡೆದುಕೊಂಡರು, (ಏಜೆನ್ಸೀಸ್).