

₹33 ಕೋಟಿ ಮಾತ್ರ ಕಲೆಕ್ಷನ್ ಮಾಡಿ ಫ್ಲಾಪ್ ಆಗಿದ್ದ ಬತ್ತಾ ಸಿನಿಮಾಕ್ಕೆ ಭಾರಿ ಮೆಚ್ಚುಗೆ.
ಬತ್ತಾ ಸಿನಿಮಾ ಥಿಯೇಟರ್ನಲ್ಲಿ ನೋಡದಿದ್ದಕ್ಕೆ ತಮ್ಮನ್ನು ತಾವೇ ನಿಂದಿಸಿಕೊಂಡ ವೀಕ್ಷಕರು.
ವಿಜಯ್ ಸೇತುಪತಿ ಮತ್ತು ಮಾಸ್ಟರ್ ಸಾಯಿ ಪೃಥ್ವಿರಾಜ್ಗೆ ರಾಷ್ಟ್ರಪ್ರಶಸ್ತಿ ಪ್ರದಾನಿಸಬೇಕೆಂದು ಪಟ್ಟು.
Baththa Receives Positive Audience Response: ಅಕ್ಟೋಬರ್ನಲ್ಲಿ ರಿಲೀಸ್ ಆಗಿದ್ದ ವಿಜಯ್ ಸೇತುಪತಿ ನಟನೆಯ ಬತ್ತಾ ಸಿನಿಮಾವು ಥಿಯೇಟರ್ನಲ್ಲಿ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಅ.29ರಂದು ಒಟಿಟಿ ಫ್ಲಾಟ್ಫಾರ್ಮ್ಗೆ ಲಗ್ಗೆ ಇಟ್ಟಿದ್ದು ಸಾಕಷ್ಟು ಮೆಚ್ಚುಗೆಗೆ ಪಾತ್ರವಾಗಿದೆ. ಈ ರೀತಿಯ ಸಿನಿಮಾಗಳು ನಮಗೆ ಜೀವಂತಿಕೆಯ ಅನುಭವ ನೀಡುತ್ತದೆ. ವಿಜಯ್ ಸೇತುಪತಿ, ಮಾಸ್ಟರ್ ಸಾಯಿ ಪೃಥ್ವಿರಾಜ್ ನಟನೆಗೆ ವೀಕ್ಷಕರು ಫಿದಾ ಆಗಿದ್ದು, ಥಿಯೇಟರ್ನಲ್ಲಿ ಸಿನಿಮಾ ನೋಡದಿದ್ದಕ್ಕೆ ತಮ್ಮನ್ನು ತಾವೇ ನಿಂದಿಸಿಕೊಳ್ಳುತ್ತಿದ್ದಾರೆ.
ಪ್ರಸಿದ್ಧ ನಟ ವಿಜಯ್ ಸೇತುಪತಿ ಅಭಿನಯದ, ಬಾಲಾಜಿ ತರನೀಧರನ್ ನಿರ್ದೇಶನದಲ್ಲಿ ಹಾಗೂ ಅಟ್ಲೀ ನಿರ್ಮಾಣದಲ್ಲಿ ಮೂಡಿಬಂದಿರುವ ಬತ್ತಾ ಸಿನಿಮಾ ಅಕ್ಟೋಬರ್ 1ರಂದು ವಿಶ್ವಾದ್ಯಂತ ಥಿಯೇಟರ್ನಲ್ಲಿ ರಿಲೀಸ್ ಆಗಿತ್ತು. ಕ್ರಿಟಿಕ್ಸ್ ಮತ್ತು ಪ್ರೇಕ್ಷಕರಿಂದ ಈ ವರ್ಷದ ಬೆಸ್ಟ್ ತಮಿಳು ಸಿನಿಮಾ" ಅಂತ ಭಾರಿ ಮೆಚ್ಚುಗೆ ಪಡೆದರೂ, ಬಾಕ್ಸ್ ಆಫೀಸ್ನಲ್ಲಿ ಕೇವಲ ₹33 ಕೋಟಿ ಮಾತ್ರ ಕಲೆಕ್ಷನ್ ಮಾಡಿ ಫ್ಲಾಪ್ ಆಗಿತ್ತು. ಆದರೆ, ಈ ಸಿನಿಮಾವನ್ನು ಒಟಿಟಿ ವೀಕ್ಷಕರು ನೆಚ್ಚಿಕೊಂಡು, ಕೊಂಡಾಡುತ್ತಿದ್ದಾರೆ.
ಹೌದು, ಅ.29ರಂದು ನೆಟ್ಫ್ಲಿಕ್ಸ್ನಲ್ಲಿ ತಮಿಳು, ತೆಲುಗು, ಮಲಯಾಳಂ, ಕನ್ನಡ ಮತ್ತು ಹಿಂದಿ ಸೇರಿದಂತೆ ಒಟ್ಟು ಐದು ಭಾಷೆಗಳಲ್ಲಿ ಬತ್ತಾ ಸಿನಿಮಾ ರಿಲೀಸ್ ಆಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ನೋಡದ ಪ್ರೇಕ್ಷಕರು ಒಟಿಟಿಯಲ್ಲಿ ನೋಡಿ ಭರ್ಜರಿ ರೆಸ್ಪಾನ್ಸ್ ಕೊಡುತ್ತಿದ್ದಾರೆ. ಅಲ್ಲದೇ 'ಸಿನಿಮಾವನ್ನು ಸೋಲಿಸಲು ಹೇಗಾದ್ರು ಮನಸ್ಸು ಬಂತೆಂದು' ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಬತ್ತಾ ಸಿನಿಮಾವು ಒಬ್ಬ ರೌಡಿ ಮತ್ತು ಎಂಟು ವರ್ಷದ ಬಾಲಕನ ಸುತ್ತ ಹೆಣೆಯಲಾದ ಕತೆಯಾಗಿದೆ. 1986ರ ಮದ್ರಾಸ್ ಇಂದಿನ ಚೆನ್ನೈನಲ್ಲಿ ನಡೆಯುವ ಕಥೆ ಇದಾಗಿದೆ. 'ಬತ್ತವಾಚಲಂ' (ಬತ್ತಾ) ವಿಜಯ್ ಸೇತುಪತಿ ಒಬ್ಬ ರೌಡಿ. ಸ್ಥಳೀಯ ಜನರನ್ನು ಹೆದರಿಸಿ, ಕ್ರೂರಿಯಾಗಿ ವರ್ತಿಸುತ್ತಿರುತ್ತಾನೆ. ಮತ್ತೊಂದು ಕಡೆ ಶಾಲೆಯಲ್ಲಿ ಓದುತ್ತಿರುವ ಬಾಲಕ ಶಬರಿ(ಮಾಸ್ಟರ್ ಸಾಯಿ ಪೃಥ್ವಿರಾಜ್)ಎಂಬ ಯುವಕನು ಬತ್ತಾ ನನ್ನು ಅನಿರೀಕ್ಷಿತವಾಗಿ ಶೌಚಾಲಯದಲ್ಲಿ ಲಾಕ್ ಮಾಡಿ ಬಿಡುತ್ತಾನೆ. ಎಲ್ಲರನ್ನು ಹೆದರಿಸಿ ಓಡಾಡುವ ರೌಡಿ, ಒಳಗೆ ಸಿಕ್ಕುಬಿದ್ದು ಒದ್ದಾಡುತ್ತಾನೆ. ಈ ಘಟನೆಯು ಆತನ ಜೀವನದಲ್ಲಿ ಬದಲಾವಣೆ ತರುತ್ತದೆ. ಮಗುವಿನೊಂದಿಗೆ ಬೆಳೆಯುವ ಸ್ನೇಹ, ಸಹೃದಯದ ಸಹಜ ಭಾವನಾತ್ಮಕ ಕ್ಷಣಗಳು ಒಟಿಟಿ ವೀಕ್ಷಕರ ಗಮನವನ್ನು ಸೆಳೆಯುವಂತೆ ಮಾಡುತ್ತದೆ. ವಿಜಯ್ ಸೇತುಪತಿ ಮತ್ತು ಸಿನಿಮಾದಲ್ಲಿನ ಇತರ ನಟರ ನೈಜ ಅಭಿನಯ ಸಿನಿಮಾ ಮೆರಗನ್ನು ಹೆಚ್ಚಿಸಿದೆ.
'ಎಂಥಾ ಸೊಗಸಾದ ಸಿನಿಮಾವನ್ನು ಕೊಟ್ಟಿದ್ದೀರಿ ತಮಿಳು ಸಿನಿಮಾರಂಗ' ಎಂದು ಕಾಮೆಂಟ್ ಮಾಡುತ್ತಿದ್ದರೆ, ಇನ್ನೂ ಕೆಲವರು 'ಈ ವರ್ಷದ ಬೆಸ್ಟ್ ಸಿನಿಮಾ..ಮಿಸ್ ಮಾಡಲೇಬೇಡಿ' ಎಂದಿದ್ದಾರೆ. 'ಶಬರಿ ಎನ್ನುವ ಹುಡುಗನ ನಟನೆ ಯಬ್ಬಾ ಇಂತಹ ಸಿನಿಮಾ ಫ್ಲಾಪ್ ಆಗಲು ಕಾರಣ ಏನು?, ನಿಮಗೆ ಹೀಗೆ ಮನಸ್ಸಾದರೂ ಹೇಗೆ ಬಂತು' ಎಂದಿದ್ದಾರೆ.
'ಬತ್ತಾ ಸಿನಿಮಾವನ್ನು ಎರಡನೇ ಬಾರಿಗೆ ನೋಡ್ತಿದ್ದೇನೆ. ಒಂದಿಚು ಬೋರ್ ಹೊಡಿಸಿಲ್ಲ. ಕ್ಲೈಮ್ಯಾಕ್ಸ್ಈ ಗಲೂ ಮೊದಲಿನಷ್ಟೇ ತೀವ್ರವಾದ ಪರಿಣಾಮ ಬೀರುತ್ತಿದೆ. ಆ ಮಗುವಿನ ನಟನೆ ಮತ್ತು ಅಬ್ಬಾ ವಿಜಯ್ ಸೇತುಪತಿ ಜೀನಿಯಸ್' ಎಂದಿದ್ದಾರೆ. 'ನಿರ್ದೇಶಕ ಬಾಲಾಜಿ ತರನೀಧರನ್ ಅವರು ಒಂದು ಅದ್ಭುತ ಸಿನಿಮಾವನ್ನು ನೀಡಿದ್ದಾರೆ. ಸಾಯಿ ಅಭ್ಯಾಂಕರ್ ಅವರ ವೃತ್ತಿಜೀವನದಲ್ಲೇ ಇದು ಅತ್ಯುತ್ತಮ ಸಂಗೀತ ಆಲ್ಬಮ್ ಆಗಿದೆ. ಈ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡದೆ ತಪ್ಪು ಮಾಡಿಬಿಟ್ಟೆ' ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.
'ಬತ್ತಾ ಸಿನಿಮಾವೊಂದು ಅದ್ಭುತ. ಆ ಹುಡುಗ ಹೇಳುತ್ತಾ ಹೋದಂತೆ..ನನಗೆ ಕಣ್ಣೀರು ಹರಿಯುತ್ತಲೇ ಇತ್ತು. ನಾನು ಬೆಳಿಗ್ಗೆ 5 ಗಂಟೆ ಸುಮಾರಿಗೆ ನೋಡಲು ಆರಂಭಿಸಿದೆ, ಈ ಸಿನಿಮಾ ನೋಡಿ ಬೆಳಿಗ್ಗೆಯಲ್ಲೇ ಕಣ್ಣೀರು ಬಂತು. ತುಂಬಾ ಒಳ್ಳೆಯ ಅನುಭವ ನೀಡುವ ಸಿನಿಮಾ ತುಂಬಾ ಇಷ್ಟವಾಯಿತು' ಎಂದು ಎಕ್ಸ್ ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ
'ವಿಜಯ್ ಸೇತುಪತಿ ನಟನೆ ನಿಜಕ್ಕೂ ಒಂದು ಸೆಲಬ್ರೇಷನ್ಗೆ ಅರ್ಹವಾದದ್ದು. 'ಶಬರಿ' ಪಾತ್ರದಲ್ಲಿ ಅದ್ಭುತ ಅಭಿನಯ ನೀಡಿರುವ ಬಾಲನಟ ಮಾಸ್ಟರ್ ಸಾಯಿ ಪೃಥ್ವಿರಾಜ್ ರಾಷ್ಟ್ರ ಪ್ರಶಸ್ತಿಗೆ ಅರ್ಹರು' ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ, (ಏಜೆನ್ಸೀಸ್).