'ಬನ್ನಿ ಪಾರ್ಟಿ ಮಾಡೋಣ'; ಸ್ಯಾಂಡಲ್​ವುಡ್ ಗುರು ಕಡೆಯಿಂದ ಹಾಡಿನ ಆಹ್ವಾನ!

WhatsApp Image 2020-12-28 at 12.11.57 PM
Published on

ಬೆಂಗಳೂರು: 2021‌ ಆರಂಭವಾಗಲೂ‌ ಕೆಲವೇ ದಿನಗಳು ಬಾಕಿಯಿದೆ.‌ ಹೊಸವರ್ಷ ಸ್ವಾಗತಿಸಲು‌ ಸುಂದರವಾದ 'ಬನ್ನಿ ಪಾರ್ಟಿ ಮಾಡೋಣ' ಎಂಬ ವಿಡಿಯೋ ಸಾಂಗ್ ಬಿಡುಗಡೆಯಾಗಲಿದೆ.‌ ಈ ಹಿಂದೆ ' ಸ್ಯಾಂಡಲ್ ವುಡ್ ಗುರು' ಎಂಬ ಚಲನಚಿತ್ರದಲ್ಲಿ ನಟಿಸಿದ್ದ ಮಾನಸ್ (ಮ್ಯಾನ್) ಈ ವಿಡಿಯೋ ಸಾಂಗ್ ಬಿಗ್ ಮ್ಯಾನ್ ಸ್ಟುಡಿಯೋ ಲಾಂಛನದಲ್ಲಿ ನಿರ್ಮಿಸುವುದರೊಂದಿಗೆ, ನಿರ್ದೇಶನವನ್ನು ಮಾಡಿದ್ದಾರೆ.

ಮಾನಸ್ ಅವರೆ ಈ ವಿಡಿಯೋ ಸಾಂಗ್ ಗೆ ಸಾಹಿತ್ಯ ಬರೆದಿದ್ದು, ಜೇಮ್ಸ್ ಅವರ ಜೊತೆಗೂಡಿ ಸಂಗೀತವನ್ನು ನೀಡಿದ್ದಾರೆ. ಮಾನಸ್ ಹಾಗೂ ಸಿರಿಶ ಅಭಿನಯಿಸಿರುವ ಈ ಹಾಡು ಮಾನಸ್ ತಮ್ಮ ಯೂಟ್ಯೂಬ್ ಚಾನಲ್ ನಲ್ಲೇ ಬಿಡುಗಡೆ ಮಾಡಲಿದ್ದಾರೆ. ಪಾರ್ಟಿ ಪ್ರಿಯರಿಗೆ ಹೇಳಿಮಾಡಿಸಿದಂತಿರುವ ಈ ಹಾಡು ಬರೀ ನ್ಯೂಯರ್ ಗೆ ಅಷ್ಟೇ ಸೀಮಿತವಲ್ಲ. ಇದು ಎಲ್ಲಾ ಪಾರ್ಟಿಗಳಿಗೂ ಅನ್ವಯವಾಗುವ ಹಾಗಿದೆ ಎಂಬ ಅನಿಸಿಕೆ ಮಾನಸ್ ಅವರದು.

ಹೊಸವರ್ಷ ಹತ್ತಿರದಲ್ಲಿರುವುದರಿಂದ ಈ ಸಂದರ್ಭದಲ್ಲಿ ಬೊಂಬಾಟ್ ಪಾರ್ಟಿ ಸಾಂಗ್ ಬಿಡುಗಡೆ ಮಾಡುತ್ತಿರುವುದಾಗಿ ಮಾನಸ್ ತಿಳಿಸಿದ್ದಾರೆ. ಐದು ನಿಮಿಷಗಳ ಈ ವಿಡಿಯೋ ಸಾಂಗ್ ನ‌ ತುಣುಕು ಯೂಟ್ಯೂಬ್ ನಲ್ಲಿ ಸದ್ದು ಮಾಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net