

ಬೆಂಗಳೂರು : ಭಜರಂಗಿ-2 ಸಿನಿಮಾದ ಪೋಸ್ಟರ್ನಲ್ಲಿರುವ ಹಸಿರು ಕಣ್ಣು ಧನಾತ್ಮಕ ಸಂದೇಶ ನೀಡುತ್ತದೆ ಎಂದು ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ಹೇಳಿದರು.
ಭಜರಂಗಿ ಸಿನಿಮಾದ ಪೋಸ್ಟರ್ ಬಿಡುಗಡೆ ಬಗ್ಗೆ ಅವರು ಜಾಲಹಳ್ಳಿಯ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ದೇವರ ದರ್ಶನ ಪಡೆದು ಮಾತನಾಡಿದರು.
ಅಭಿಮಾನಿಗಳು ಎದುರಾಳಿಗಳನ್ನು ಕಣ್ಣಲ್ಲೇ ಕೊಲೆ ಮಾಡುವ ರೀತಿ ಪೋಸ್ಟರ್ ಇದೆ ಎನ್ನುತ್ತಿದ್ದಾರೆ. ಆದರೆ ಆ ರೀತಿ ಅಲ್ಲ. ಅಲ್ಲಿ ನನ್ನ ಕಣ್ಣುಗಳು ಹಸಿರು ಬಣ್ಣದಿಂದ ಕೂಡಿದೆ. ಹೀಗಾಗಿ ಹಸಿರು ಧನಾತ್ಮಕವಾದುದು. ಹೀಗಾಗಿ ಯಾರನ್ನೂ ದ್ವೇಷ ಮಾಡುವುದಲ್ಲ ಎಂದು ಅವರು ಪೋಸ್ಟರ್ ಬಗ್ಗೆ ಪ್ರತಿಕ್ರಿಯೆ ನೀಡಿದರು.
ನಾನು ಅಪ್ಪಾಜಿ ಜತೆ ಮಾಲೆ ಧರಿಸಿ ಶಬರಿಮಲೆಗೆ ಪಾದಯಾತ್ರೆ ಮೂಲಕ ತೆರಳುತ್ತಿದ್ದೆ. ಕೆಲವು ವೇಳೆ ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಅಪ್ಪಾಜಿ ಜತೆ ಪಾದಯಾತ್ರೆ ಮಾಡುತ್ತಿದ್ದರು. ಈ ವರ್ಷ ಮಾರ್ಚ್ನಲ್ಲಿ ಶಬರಿಮಲೆಗೆ ತೆರಳುತ್ತಿದ್ದೇನೆ. ಅಯ್ಯಪ್ಪ ನನ್ನ ಆರಾಧ್ಯ ದೇವರು. ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ಜಾಲಹಳ್ಳಿಯ ಅಯ್ಯಪ್ಪ ದೇವಾಲಯಕ್ಕೆ ಆಗಮಿಸಿದ್ದೇನೆ. ಇಲ್ಲಿ ಸೇರಿರುವ ಅಭಿಮಾನಿಗಳನ್ನು ನೋಡಿ ದೇವರನ್ನೇ ನೋಡಿದಷ್ಟು ಭಾಗ್ಯ ಬಂದಿದೆ ಎಂದರು. (ದಿಗ್ವಿಜಯ ನ್ಯೂಸ್)