

ಕರೊನಾ ವೈರಸ್‌ನಿಂದ ಇಡೀ ದೇಶವೇ ಲಾಕೌಟ್ ಆಗಿದೆ. ಇದರಿಂದ ಸಾಕಷ್ಟು ಜನರು ಸಂಕಷ್ಟಕ್ಕೊಳಗಾಗಿದ್ದು, ಜನರ ಸಂಕಷ್ಟಗಳಿಗೆ ನೆರವಾಗಲು ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ನಿಧಿ ಸ್ಥಾಪಿಸಲಾಗಿದೆ. ಈಗಾಗಲೇ ಹಲವರು ಪರಿಹಾರ ನಿಧಿಗೆ ದೇಣಿಗೆ ಕೊಟ್ಟಿದ್ದು, ಆ ಸಾಲಿಗೆ ಹಿರಿಯ ನಟಿ ಬಿ. ಸರೋಜಾ ದೇವಿ ಸಹ ಸೇರಿದ್ದಾರೆ.
ಗುರುವಾರ ಬಿ. ಸರೋಜಾದೇವಿ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಐದು ಲಕ್ಷ ಕೊಟ್ಟಿದ್ದಾರೆ. ಈ ಹಣವನ್ನು ಕಷ್ಟದಲ್ಲಿರುವವರ ನೆರವಿಗೆ ಬಳಸಿಕೊಳ್ಳಬೇಕೆಂದು ಬಯಸಿದ್ದಾರೆ. ಇದಕ್ಕೂ ಮುನ್ನ ಪುನೀತ್ ರಾಜಕುಮಾರ್ ಅವರು, ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಭೇಟಿ ಮಾಡಿ, 50 ಲಕ್ಷದ ಚೆಕ್ ಕೊಟ್ಟಿದ್ದರು. ಇನ್ನು ನಟಿ ದೀಪಿಕಾ ದಾಸ್ ಸಹ ಐದು ಲಕ್ಷ ರೂ ದೇಣಿಗೆ ನೀಡಿದ್ದರು.