'ನಾನು ಕುಟುಂಬಸ್ಥ, ಅಕ್ರಮ ಸಂಬಂಧ ಉತ್ತೇಜಿಸುವ ಸಿನಿಮಾ ಮಾಡಲ್ಲ'; ಪತಿ ಪತ್ನಿ ಔರ್ ವೋ ದೋ ಬಗ್ಗೆ Ayushmann Khurrana ಹೇಳಿದ್ದಿಷ್ಟು

 Ayushmann Khurrana
Ayushmann Khurrana
Published on

ಪ್ರಮುಖ ಮುಖ್ಯಾಂಶಗಳು

  • ಅಕ್ರಮ ಸಂಬಂಧವನ್ನು ನಾವು ಗ್ಲೋರಿಫೈ ಮಾಡಿಲ್ಲ, ಫ್ಯಾಮಿಲಿ ನೋಡಬಹುದಾದ ಸಿನಿಮಾ
  • ಪತಿ ಪತ್ನಿ ಔರ್​ ವೋ ದೋ ಸಿನಿಮಾ ಬಗ್ಗೆ ಆಯುಷ್ಮಾನ್​ ಖುರಾನ ಹೇಳಿದ್ದು ಹೀಗೆ
  • ಮೇ 15 ರಂದು ಚಿತ್ರಮಂದಿರಗಳಲ್ಲಿ ಪತಿ ಪತ್ನಿ ಔರ್​ ವೋ ದೋ ಬಿಡುಗಡೆ
Pati Patni Aur Woh Do ಸಿನಿಮಾದ ಟ್ರೇಲರ್​ ಇತ್ತೀಚೆಗಷ್ಟೇ ರಿಲೀಸ್ ಆಗಿತ್ತು. ಸಿನಿಮಾದಲ್ಲಿ ಅಕ್ರಮ ಸಂಬಂಧವನ್ನು ವಿಜೃಂಭಿಸಿ ತೋರಿಸಲಾಗಿದೆ ಎಂದು ಆರೋಪಿಸಿ ಹಲವು ಆಯುಷ್ಮಾನ ಖುರಾನ ವಿರುದ್ಧ ಕಿಡಿಕಾರಿದ್ದಾರೆ.

ನಟ ಹೇಳಿದ್ದೇನು?

ಟ್ರೇಲರ್​ ಬಗ್ಗೆ ಎದ್ದಿದ್ದ ವಿವಾದದ ಬಗ್ಗೆ ಆಯುಷ್ಮಾನ್​ ಖುರಾನ ಮಾತನಾಡಿ, 'ನಾವು ಯಾವುದೇ ಅಕ್ರಮ ಸಂಬಂಧವನ್ನು ಉತ್ತೇಜಿಸಿಲ್ಲ. ಇದು ಸಂಬಂಧದಲ್ಲಿ ಕಾಣಿಸಿಕೊಳ್ಳುವ ದೋಷವನ್ನು ಹಾಸ್ಯವನ್ನಾಗಿ ತೋರ್ಪಡಿಸಲಾಗಿದೆ. ಕುಟುಂಬದ ಜೊತೆ ಸೇರಿ ನೋಡಬಹುದಾದ ಸಿನಿಮಾ ಇದಾಗಿದೆ. ನಿಜಕ್ಕೂ ಎಲ್ಲರೂ ಇಷ್ಟಪಡುವ ಸಿನಿಮಾ ಇದಾಗಿದೆ' ಎಂದು ಹೇಳಿದ್ದಾರೆ.
'ನಾನು ಕುಟುಂಬಸ್ಥ ನನ್ನ ಮಕ್ಕಳು ನೋಡಬಹುದಾದ ಸಿನಿಮಾವನ್ನು ನಾನು ಮಾಡುತ್ತೇನೆ. ಪೋಸ್ಟ್-ಪ್ರೊಡಕ್ಷನ್ ಸಮಯದಲ್ಲಿ ಮಕ್ಕಳನ್ನು ಸ್ಥಳಕ್ಕೆ ಕರೆದೊಯ್ದಿದ್ದೆ ಮಕ್ಕಳು ಇದನ್ನು ಇಷ್ಟಪಟ್ಟರು. ನಂತರ ಇದು ಆರೋಗ್ಯಕರ ಚಿತ್ರ ಎಂದು ತಿಳಿದುಕೊಂಡೆ' ಎಂದಿದ್ದಾರೆ.

ಸಿನಿಮಾದಲ್ಲಿ ಯಾರೆಲ್ಲ ಇದ್ದಾರೆ?

ಆಯುಷ್ಮಾನ ಖುರಾನ ಅವರು ಪತಿ ಪತ್ನಿ ಔರ್​ ವೋ ದೋ ಸಿನಿಮಾದಲ್ಲಿ ಪ್ರಜಾಪತಿಯ ಪಾತ್ರದಲ್ಲಿ ನಟಿಸುತ್ತದ್ದಾರೆ. ಸಿನಿಮಾದಲ್ಲಿ ರಕುಲ್​ ಪ್ರೀತ್​ ಸಿಂಗ್​ ವಾಮಿಕಾ ಗಬ್ಬಿ, ಸಾರಾ ಅಲಿ ಖಾನ್​​ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನವನದಲ್ಲಿ ಪತಿ ಪತ್ನಿ ಔರ್​ ವೋ ದೋ ಸಿನಿಮಾದ ಟ್ರೇಲರ್​ ಬಿಡುಗಡೆಯಾಗಿತ್ತು. ಈ ಚಿತ್ರವನ್ನು ಭೂಷಣ್ ಕುಮಾರ್, ರೇಣು ರವಿ ಚೋಪ್ರಾ ಮತ್ತು ಕ್ರಿಶನ್ ಕುಮಾರ್ ನಿರ್ಮಿಸಿದ್ದಾರೆ, ಜೂನೋ ಚೋಪ್ರಾ ನಿರ್ಮಾಣದಲ್ಲಿ ಮೂಡಿಬಂದ ಸಿನಿಮಾ ಇದಾಗಿದೆ.
ಪತಿ ಪತ್ನಿ ಔರ್ ವೋ ದೋ ಚಿತ್ರವು ಮೇ 15 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾರ್ತಿಕ್ ಆರ್ಯನ್, ಭೂಮಿ ಪೆಡ್ನೇಕರ್ ಮತ್ತು ಅನನ್ಯಾ ಪಾಂಡೆ ನಟಿಸಿದ 2019 ರ ಪತಿ ಪತ್ನಿ ಔರ್ ವೋ ಚಿತ್ರದ ಮುಂದುವರಿದ ಭಾಗವಾಗಿರುವ ಈ ಮುಂಬರುವ ಚಿತ್ರವು ಮೂಲತಃ 1978 ರ ಹಿಂದಿನ ಕಥೆಯ ಪರಂಪರೆಯನ್ನು ಮುಂದುವರೆಸಿದೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net