ಆರ್​ಸಿಬಿಗೆ ಶರಣ್ ಶರಣು

Sharan
Published on

ಬೆಂಗಳೂರು: ‘ಟೂಥ್ ಪೇಸ್ಟ್​ಲ್ಲಿ ಉಪ್ಪು, ಆರ್​ಸಿಬಿ ಕಪ್ಪು, ಆವಾಗ ಮೋಗ್ಲಿ, ಈವಾಗ ಕೊಹ್ಲಿ, ಮಣ್ಣು ತೆಗಿಯೋದು ಜೆಸಿಬಿ, ಕಪ್ ಹೊಡೆಯೋದು ಆರ್​ಸಿಬಿ ...’ ಹೀಗೆ ಆರ್​ಸಿಬಿ ತಂಡದ ಸಲುವಾಗಿಯೇ ಕಲರ್​ಫುಲ್ ಹಾಡೊಂದನ್ನು ಚಿತ್ರದಲ್ಲಿ ಅಳವಡಿಸಿದ್ದಾರೆ ನಿರ್ದೇಶಕ ಸಿಂಪಲ್ ಸುನಿ.

ಅಂದಹಾಗೆ, ಶುಕ್ರವಾರ ‘ಅವತಾರ್ ಪುರುಷ’ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಆಗಿದೆ. ಪಕ್ಕಾ ಶರಣ್ ಶೈಲಿಯಲ್ಲಿಯೇ ಹಾಡು ಮೂಡಿಬಂದಿದ್ದು, ಶರಣ್ ಅವರಿಂದ ಅದ್ಬುತವಾದ ನೃತ್ಯವನ್ನು ಹೊರತೆಗಿಸಿದ್ದಾರೆ ಕೋರಿಯೋಗ್ರಾಫರ್ ಭೂಷಣ್.

ಟಪ್ಪಾಂಗುಚ್ಚಿ ಹಾಡಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದು, ವ್ಯಾಸ್ ರಾಜ್ ಹಾಡಿಗೆ ಧ್ವನಿಯಾಗಿದ್ದಾರೆ. ಬಿಡುಗಡೆಗೆ ಸಿದ್ಧವಾಗಿರುವ ‘ಅವತಾರ್ ಪುರುಷ’ ಚಿತ್ರದಲ್ಲಿ ಶರಣ್​ಗೆ ಆಶಿಕಾ ರಂಗನಾಥ್ ಜೋಡಿಯಾಗಿದ್ದಾರೆ. ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಿರುವ ಈ ಚಿತ್ರ ಎರಡು ಭಾಗಗಳಲ್ಲಿ ಬಿಡುಗಡೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net