ಅಶ್ವತ್ಥಾಮ ಶಿವಣ್ಣ

shivaraj kumar
Published on

ಸೆಂಚುರಿ ಸ್ಟಾರ್ ಶಿವರಾಜಕುಮಾರ್ ಇದೀಗ ಅಶ್ವತ್ಥಾಮನ ಅವತಾರ ಎತ್ತಲಿದ್ದಾರೆ. ಹಾಗಂತ ಮಹಾಭಾರತದ ಪೌರಾಣಿಕ ಪಾತ್ರದಲ್ಲಿ ಅವರು ಮಿಂಚುತ್ತಿಲ್ಲ. ಚಿತ್ರದ ಶೀರ್ಷಿಕೆಯೂ ಅಶ್ವತ್ಥಾಮ ಅಲ್ಲ. ಬದಲಿಗೆ, ಆಧುನಿಕ ಅಶ್ವತ್ಥಾಮನಾಗಿ ಅವರು ಕಾಣಿಸಿಕೊಳ್ಳಲಿದ್ದಾರೆ.

ನ.1 ರ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶೀರ್ಷಿಕೆ ಅಂತಿಮವಾಗದ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರ ಖ್ಯಾತಿಯ ಸಚಿನ್ ರವಿ ಈ ಸಿನಿಮಾ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ.

‘ನಾವಿಲ್ಲಿ ಮಹಾಭಾರತದ ಅಶ್ವತ್ಥಾಮನ ಬಗ್ಗೆ ಸಿನಿಮಾ ಮಾಡುತ್ತಿಲ್ಲ. ಆ ಅಶ್ವತ್ಥಾಮ ಪ್ರಸ್ತುತ ಕಾಲಘಟ್ಟದಲ್ಲಿದ್ದರೆ ಏನು ಮಾಡ್ತಿದ್ದ ಎಂಬುದನ್ನು ಕಾಲ್ಪನಿಕವಾಗಿ ತೆರೆಮೇಲೆ ತೋರಿಸಲಿದ್ದೇವೆ. ಮುಂದಿನ ದಿನಗಳಲ್ಲಿ ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಲಿದ್ದೇವೆ. ಸ್ಪೈ ಥ್ರಿಲ್ಲರ್ ಶೈಲಿಯ ಸಿನಿಮಾ ಇದಾಗಿರುವುದರಿಂದ ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಶಿವಣ್ಣ ಇಲ್ಲಿರಲಿದ್ದಾರೆ’ ಎಂಬುದು ಸಚಿನ್ ಮಾತು. ಇನ್ನು ಈ ಚಿತ್ರಕ್ಕೆ ಪುಷ್ಕರ್ ಮಲ್ಲಿಕಾರ್ಜುನಯ್ಯ ಬಂಡವಾಳ ಹೂಡಲಿದ್ದು, ಮುಂದಿನ ವರ್ಷ ಚಿತ್ರ ಸೆಟ್ಟೇರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net