ಬ್ಯಾಂಕಾಕ್​ನಲ್ಲಿ ಆಶಿಕಾ ಕಾಣೆ!; ಬಟ್ಟೆ ನೋಡಿ ಸ್ವಭಾವ ಅಳೆಯಬೇಡಿ...

Ashika
Published on

ಬೆಂಗಳೂರು: ಸ್ಯಾಂಡಲ್​ವುಡ್ ನಟಿ ಆಶಿಕಾ ರಂಗನಾಥ್ ಸದ್ಯ ಹಲವು ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಅವರ ಹಲವು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿದ್ದರೆ, ಮತ್ತೆ ಕೆಲವು ಶೂಟಿಂಗ್ ಹಂತದಲ್ಲಿವೆ. ಇದೆಲ್ಲದರ ನಡುವೆ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ಯ ಭಾಗವಾಗಿದ್ದಾರೆ!

‘ರ್ಯಾಂಬೊ 2’ ಸಿನಿಮಾ ಖ್ಯಾತಿಯ ನಿರ್ದೇಶಕ ಅನಿಲ್ ಕುಮಾರ್ ‘ಕಾಣೆಯಾದವರ ಬಗ್ಗೆ ಪ್ರಕಟಣೆ’ ಶೀರ್ಷಿಕೆಯ ಸಿನಿಮಾ ಮಾಡಿದ್ದಾರೆ. ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ಆಶಿಕಾ ರಂಗನಾಥ್, ಹಿಂದೆಂದೂ ಕಾಣಿಸದ ಗ್ಲಾಮರ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ‘ತುಂಬ ಬೋಲ್ಡ್ ಆದ ಪಾತ್ರವನ್ನು ಆಶಿಕಾ ನಿಭಾಯಿಸಿದ್ದಾರೆ. ತುಂಡುಡುಗೆಯಲ್ಲಿಯೇ ಅವರನ್ನು ತೋರಿಸಿದ್ದೇವೆ ಎಂಬುದಕ್ಕಿಂತ, ಅವರ ಪಾತ್ರವೇ ಹಾಗಿದೆ. ಯಾರದೇ ಸ್ವಭಾವವನ್ನು ಅವರ ವೇಷಭೂಷಣಗಳಿಂದ ನಿರ್ಧರಿಸಲು ಸಾಧ್ಯವಿಲ್ಲ ಎಂಬುದನ್ನು ಹೇಳುವ ಪ್ರಯತ್ನ ಇಲ್ಲಾಗಿದೆ. ಅಷ್ಟೇ ಬೋಲ್ಡ್ ಆಗಿಯೇ ಕೊಟ್ಟ ಪಾತ್ರವನ್ನು ನಿಭಾಯಿಸಿದ್ದಾರೆ’ ಎಂಬುದು ನಿರ್ದೇಶಕರ ಮಾತು.

ಮತ್ತೊಂದು ವಿಶೇಷ ಏನೆಂದರೆ, ಚಿತ್ರದ ಶೇ. 70ರಷ್ಟು ಭಾಗ ಬ್ಯಾಂಕಾಕ್​ನಲ್ಲಿ ಚಿತ್ರೀಕರಣ ಮಾಡಲಾಗಿದೆ. 60 ದಿನಗಳ ಕಾಲ ಅಲ್ಲಿನ ಹಲವು ಪ್ರದೇಶಗಳಲ್ಲಿ ಚಿತ್ರೀಕರಿಸಲಾಗಿದೆ. ಆ ಪೈಕಿ ಆಶಿಕಾ 8 ದಿನ ಶೂಟಿಂಗ್​ನಲ್ಲಿ ಭಾಗಿಯಾಗಿದ್ದಾರೆ. ‘ಹಾಸ್ಯ ಶೈಲಿಯ ಸಿನಿಮಾ ಎಂಬುದಕ್ಕಿಂತ ಎಲ್ಲ ವರ್ಗದವರನ್ನೂ ಈ ಸಿನಿಮಾ ಆಕರ್ಷಿಸಲಿದೆ. ಚಿತ್ರದಲ್ಲಿ ಭಾವನೆಗಳಿಗೆ, ಮೌಲ್ಯಗಳಿಗೆ ಹೆಚ್ಚಿನ ಜಾಗ ಕಲ್ಪಿಸಿದ್ದೇವೆ’ ಎನ್ನುವ ನಿರ್ದೇಶಕ ಅನಿಲ್, ಈ ಸಿನಿಮಾದಲ್ಲಿ ಬಹುತೇಕ ಕಾಮಿಡಿ ಕಲಾವಿದರನ್ನೇ ಆಯ್ದುಕೊಂಡಿದ್ದಾರೆ. ರಂಗಾಯಣ ರಘು, ರವಿಶಂಕರ್, ತಬಲಾ ನಾಣಿ, ಚಿಕ್ಕಣ್ಣ, ತಿಲಕ್ ಸೇರಿ ಹಲವು ನಟರು ಚಿತ್ರದಲ್ಲಿದ್ದಾರೆ. ಇನ್ನು ಸದ್ಯ ರೀ ರೆಕಾರ್ಡಿಂಗ್ ಕೆಲಸಗಳು ನಡೆಯುತ್ತಿದ್ದು, ಅರ್ಜುನ್ ಜನ್ಯ ಸಂಗೀತ, ಶಿವಕುಮಾರ್ ಛಾಯಾಗ್ರಹಣ, ಕೆ.ಎಂ. ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಎ.ಜೆ ಟಾಕೀಸ್ ಹಾಗೂ ಬಿಲ್ವ ಎಂಟರ್​ಟೈನ್​ವೆುಂಟ್ ಲಾಂಛನದಲ್ಲಿ ಈ ಚಿತ್ರ ನಿರ್ವಣವಾಗಿದೆ. ಮೇ ತಿಂಗಳಲ್ಲಿ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net