ಅರ್ಮಾನ್ - ಆಶ್ನಾ ಮದುವೆ:ಬಹುಕಾಲದ ಗೆಳತಿಯನ್ನು ವರಿಸಿದ ಹಿನ್ನೆಲೆ ಗಾಯಕ

armnna
Published on

ಕನ್ನಡದ ‘ಚಕ್ರವರ್ತಿ’ ಸಿನಿಮಾದ ‘ಒಂದು ಮಳೆ ಬಿಲ್ಲು’ ಸೇರಿ 50ಕ್ಕೂ ಹೆಚ್ಚು ಸ್ಯಾಂಡಲ್‌ವುಡ್ ಸಿನಿಮಾಗಳ ಹಾಡಿಗೆ ಧ್ವನಿಯಾಗಿರುವ ಹಿನ್ನೆಲೆ ಗಾಯಕ ಅರ್ಮಾನ್ ಮಲಿಕ್, ಬಹುಕಾಲದ ಗೆಳತಿ ಆಶ್ನಾ ಶ್ರಾಫ್ ಜತೆ ಗುರುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಪರಸ್ಪರ ಇಬ್ಬರು ಹಾರ ಬದಲಾಯಿಸಿಕೊಳ್ಳುತ್ತಿರುವ ಫೋಟೋಗಳನ್ನು ಅರ್ಮಾನ್ ಜಾಲತಾಣದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಅರ್ಮಾನ್ ಶೇರ್ವಾನಿ, ಪೇಟ ಧರಿಸಿದ್ದರೆ, ಆಶ್ನಾ, ಕೇಸರಿ ಲೆಹೆಂಗಾ ಧರಿಸಿ ಮಿಂಚಿದ್ದಾರೆ.

ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಆಗಿರುವ ಆಶ್ನಾ ಜತೆ ಅರ್ಮಾನ್ 2023ರ ಆಗಸ್ಟ್‌ನಲ್ಲಿ ನಿಶ್ವಿತಾರ್ಥ ಮಾಡಿಕೊಂಡಿಕೊಂಡಿದ್ದರು. ಆದರೆ, ಮದುವೆ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ. ಗುರುವಾರ ಮದುವೆಯಾಗಿರುವ ವಿಚಾರವೂ ಗಾಯಕನ ಅಭಿಮಾನಿಗಳಿಗೆ ಆಶ್ವರ್ಯ ತಂದಿದೆ.

ಮದುವೆಯಲ್ಲಿ ಕೇವಲ ಆಪ್ತರು ಹಾಗೂ ಕುಟುಂಬದವರು ಮಾತ್ರ ಭಾಗವಹಿಸಿದ್ದಾರೆ. ಅರ್ಮಾನ್ ಮಲಿಕ್ ಕನ್ನಡ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಸೇರಿ ವಿವಿಧ ಭಾಷೆಯ ಚಿತ್ರಗಳ 282 ಹಾಡುಗಳಿಗೆ ಧ್ವನಿಯಾಗಿದ್ದಾರೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net