ಮಾಲ್ಗುಡಿ ಪ್ರಯತ್ನಕ್ಕೆ ಮೆಚ್ಚುಗೆ

malgudi feb 10 2020
Published on

ಬೆಂಗಳೂರು: ‘ಚಿನ್ನಾರಿ ಮುತ್ತ’ ವಿಜಯ ರಾಘವೇಂದ್ರ ಸಿನಿಮಾ ಕರಿಯರ್​ನಲ್ಲಿ ‘ಮಾಲ್ಗುಡಿ ಡೇಸ್’ ವಿಭಿನ್ನವಾದ ಪ್ರಯತ್ನ. ಹಿಂದೆಂದೂ ಕಾಣಿಸಿಕೊಳ್ಳದ ರೀತಿಯಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರಿಂದಲೂ ಮೆಚ್ಚುಗೆ ಗಿಟ್ಟಿಸಿಕೊಳ್ಳುತ್ತಿದ್ದಾರೆ ವಿಜಯ್. 75ರ ಇಳಿವಯಸ್ಸಿನ ಸಾಹಿತಿ ಲಕ್ಷ್ಮೀನಾರಾಯಣ ಮಾಲ್ಗುಡಿ ಆಗಿ, 16ರ ಪ್ರಾಯದ ಹುಡುಗನಾಗಿ ಎರಡು ಶೇಡ್​ಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ ರಾಜ್ಯಾದ್ಯಂತ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದ್ದು, ಚಿತ್ರತಂಡದ ಖುಷಿಗೂ ಕಾರಣವಾಗಿದೆ.

ಕಿಶೋರ್ ಮೂಡುಬಿದ್ರಿ ನಿರ್ದೇಶನದಲ್ಲಿ ಮೂಡಿಬಂದಿರುವ ‘ಮಾಲ್ಗುಡಿ ಡೇಸ್’, ಶೀರ್ಷಿಕೆಗೆ ತಕ್ಕಂತೆ ಇಡೀ ಚಿತ್ರವನ್ನು ಮಲೆನಾಡ ಸೆರಗಿನಲ್ಲಿ ಸೆರೆಹಿಡಿಯಲಾಗಿದೆ. ಕಾಡು, ಹರಿವ ನೀರು, ಬೆಟ್ಟಗಳ ಸಾಲು, ಹಳ್ಳಿಮನೆ ಹೀಗೆ ಎಲ್ಲವನ್ನು ಕಣ್ಣಿಗೆ ಮುದ ನೀಡುವಂತೆ ಕಟ್ಟಿಕೊಟ್ಟಿದ್ದಾರೆ ಛಾಯಾಗ್ರಾಹಕ ಉದಯ್ ಲೀಲಾ.

ಇನ್ನು ಬಾಲ್ಯದ ದಿನಗಳ ಚಿತ್ರೀಕರಣ ಮಾಡುತ್ತಿದ್ದ ಸಂದರ್ಭದಲ್ಲಿ ಸ್ವತಃ ತಮ್ಮ ಜೀವನದಲ್ಲಿನ ಘಟನಾವಳಿಗಳನ್ನು ಮತ್ತು ಅಂದಿನ ತುಂಟತನವನ್ನೇ ಗಮನದಲ್ಲಿಟ್ಟುಕೊಂಡು ಆ ಪಾತ್ರ ನಿಭಾಯಿಸಿದ್ದರಂತೆ ವಿಜಯ್. ಸಾಹಿತಿ ಪಾತ್ರಕ್ಕೆ ಹಿರಿಯ ನಟರಾದ ಡಾ. ರಾಜ್​ಕುಮಾರ್, ಅಶ್ವಥ್, ಲೋಕನಾಥ್ ಅವರನ್ನು ಸ್ಪೂರ್ತಿಯಾಗಿಸಿಕೊಂಡು ಆ ಪಾತ್ರದಲ್ಲಿ ಕಾಣಿಸಿಕೊಂಡಿದ್ದರಂತೆ. ಗ್ರೀಷ್ಮಾ ಶ್ರೀಧರ್, ಅರ್ಜುನ್ ಕಾಪಿನಾಡ್, ಧನರಾಜ್, ಗೋಪಿನಾಥ್ ಭಟ್ ಸೇರಿ ಹಲವರು ಪಾತ್ರವರ್ಗದಲ್ಲಿದ್ದು, ಗಗನ್ ಖಡೇರಿಯಾ ಸಂಗೀತ ನೀಡಿದ್ದಾರೆ. ರತ್ನಾಕರ್ ಕಾಮತ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net