ವಿರಾಟ್-ಸಂಜನಾ ಅದ್ಧೂರಿ ಲವರ್ಸ್: ಎ.ಪಿ.ಅರ್ಜುನ್​ ನಿರ್ಮಾಣದ ಬಿಗ್​ ಬಜೆಟ್​ ಸಿನಿಮಾ

Sanjana
Published on

ಬೆಂಗಳೂರು: ಶ್ರೀಲೀಲಾ ಜತೆ ‘ಕಿಸ್’ ಮಾಡಿ, ಸಾಕಷ್ಟು ಹುಡುಗಿಯರ ಹೃದಯ ಗೆದ್ದ ವಿರಾಟ್ ಈಗ ಸಂಜನಾ ಆನಂದ್ ಜತೆ ಅದ್ಧೂರಿಯಾಗಿ ಲವ್ ಮಾಡಲು ಹೊರಟಿದ್ದಾರೆ.

ಕೆಲ ದಿನಗಳ ಹಿಂದೆ ನಿರ್ದೇಶಕ ಎ.ಪಿ.ಅರ್ಜುನ್ ಸೋಷಿಯಲ್ ಮೀಡಿಯಾದಲ್ಲಿ ಒಂದು ನೆರಳಿನ ಚಿತ್ರ ಪೋಸ್ಟ್ ಮಾಡಿ ಅದರಲ್ಲಿರುವ ನಾಯಕ ನಟ ಯಾರು ಗುರುತಿಸಿ ಎಂದಿದ್ದರು. ಈಗ ಅದಕ್ಕೆ ಉತ್ತರ ಸಿಕ್ಕಿದ್ದು, ಆ ಚಿತ್ರದಲ್ಲಿರುವುದು ವಿರಾಟ್ ಎಂದು ಸ್ವತಃ ಅರ್ಜುನ್ ತಿಳಿಸಿದ್ದಾರೆ. ‘ಅದ್ಧೂರಿ ಲವರ್ ನನ್ನ ಬ್ಯಾನರ್​ನಲ್ಲಿ ಮೂಡಿ ಬರುತ್ತಿರುವ ಎರಡನೇ ಚಿತ್ರ. ಶ್ಯಾಡೋ ಫೋಟೋ ಹಾಕಿದಾಗ ಸಾಕಷ್ಟು ಜನ ಬೇರೆ ನಾಯಕರ ಹೆಸರನ್ನು ಹೇಳಿದರು. ಆದರೆ ಅದು ವಿರಾಟ್ ಫೋಟೋ. ಈ ಚಿತ್ರಕ್ಕೆ ವಿರಾಟ್ ನಾಯಕ, ಸಂಜನಾ ಆನಂದ್ ನಾಯಕಿ. ನಾಯಕ ಇಲ್ಲಿ ಮಿಡಲ್ ಕ್ಲಾಸ್ ಹುಡುಗ, ಆದರೆ ಪ್ರೀತಿಯಲ್ಲಿ ಅವನು ದೊಡ್ಡ ಶ್ರೀಮಂತ. ಈ ರೀತಿಯೂ ಲವ್ ಮಾಡಬಹುದಾ ಎಂದು ಪ್ರೇಕ್ಷಕನಿಗೆ ಅನಿಸುವಷ್ಟು ಪೀಕ್​ನಲ್ಲಿ ತೋರಿಸುತ್ತೇವೆ. ಈ ಸಿನಿಮಾದ ನಿರ್ದೇಶಕರನ್ನು ಮುಹೂರ್ತದ ದಿನ ಅನೌನ್ಸ್ ಮಾಡುತ್ತೇವೆ’ ಎನ್ನುತ್ತಾರೆ ಅರ್ಜುನ್.

‘ಸದ್ಯಕ್ಕೆ ಒನ್​ಲೈನ್ ಕೇಳಿಕೊಂಡು ಬಂದಿದ್ದೇನೆ. ಲವ್ ಸ್ಟೋರಿ ಸಿನಿಮಾ ಎಂಬುದಷ್ಟೇ ನನಗೆ ಗೊತ್ತಾಗಿದೆ. ನನ್ನ ಪಾತ್ರದ ಹಿನ್ನೆಲೆ ಏನು ಅಂತ ಗೊತ್ತಾಗಿಲ್ಲ. ಮುಹೂರ್ತದ ಬಳಿಕ ಅರ್ಜುನ್ ಅವರು ಎಲ್ಲವನ್ನೂ ಹೇಳುತ್ತೇನೆ ಎಂದಿದ್ದಾರೆ. ನನಗೆ ಮೊದಲಿನಿಂದಲೂ ಲವ್ ಸ್ಟೋರಿ ಸಿನಿಮಾ ಮಾಡಬೇಕು ಎಂಬ ಆಸೆ ಇತ್ತು. ಅದು ಈ ಚಿತ್ರದ ಮೂಲಕ ಈಡೇರುತ್ತಿದೆ. ಪ್ರೇಮ ಕಥೆಯಾದ್ದರಿಂದ ಸ್ಕ್ರೀನ್ ಸ್ಪೇಸ್ ಜಾಸ್ತಿ ಇರುತ್ತದೆ ಎಂದುಕೊಂಡಿದ್ದೇನೆ’ ಎಂದು ಸಂತಸ ವ್ಯಕ್ತಪಡಿಸುತ್ತಾರೆ ಸಂಜನಾ. ‘ಕಿಸ್ ಸಿನಿಮಾ ಶೂಟಿಂಗ್ ವೇಳೆ ಅರ್ಜುನ್ ನನಗೆ ಈ ಕಥೆ ಹೇಳಿದ್ದರು. ಸಿಕ್ಕಾಪಟ್ಟೆ ಎನರ್ಜೆಟಿಕ್ ಕ್ಯಾರೆಕ್ಟರ್ ಇದು. ಪ್ರತಿ ಸೆಕೆಂಡ್ ಎಂಟರ್​ಟೇನ್​ವೆುಂಟ್, ಫನ್ ಇರುತ್ತದೆ. ಟ್ರೂ ಲವರ್ ಆಗಿ, ಪ್ರೀತಿಗಾಗಿ ಏನೇನೋ ಮಾಡುತ್ತಿರುತ್ತಾನೆ. ಈ ಪಾತ್ರಕ್ಕಾಗಿ ಕೊಂಚ ದಪ್ಪ ಆಗುತ್ತಿದ್ದು, ಫೈಟ್-ಡಾನ್ಸ್ ಕಲಿಯುತ್ತಿದ್ದೇನೆ. ನನ್ನ ಎರಡನೇ ಚಿತ್ರ ಕೂಡ ಬ್ರೇಕ್ ಕೊಡುತ್ತದೆ ಎಂಬ ನಂಬಿಕೆ ಇದೆ. ಅರ್ಜುನ್ ಅವರು ನನಗೆ ಗುರು-ಮೆಂಟರ್ ಎಲ್ಲವೂ ಆಗಿದ್ದಾರೆ. ನಾನು ಒಂದು ರೀತಿಯಲ್ಲಿ ಅವರ ಫ್ಯಾಮಿಲಿ ಹುಡುಗ’ ಎನ್ನುವುದು ವಿರಾಟ್ ಮಾತು.

ಈ ಸಿನಿಮಾ ‘ಕಿಸ್’ಗಿಂತಲೂ ಹೆಚ್ಚಿನ ಕ್ವಾಲಿಟಿಯಲ್ಲಿ ಮೂಡಿ ಬರುತ್ತದೆ, ಬಜೆಟ್ ಕೂಡ ದೊಡ್ಡದು. ಬೆಂಗಳೂರು, ಮೈಸೂರು, ಊಟಿ, ಆಸ್ಟ್ರೇಲಿಯಾದಲ್ಲಿ ಚಿತ್ರೀಕರಣ ಮಾಡಲು ಯೋಜನೆ ಹಾಕಿಕೊಂಡಿದ್ದೇನೆ. | ಅರ್ಜುನ್ ನಿರ್ಮಾಪಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net