ಘಾಟಿ ಅನುಷ್ಕಾ ಶೆಟ್ಟಿ ; ಎರಡು ಚಿತ್ರಗಳ ಶೂಟಿಂಗ್​ ಮುಗಿಸಿದ ನಟಿ

scascascasc
Published on

ಎರಡು ದಶಕಗಳ ಸಿನಿಮಾ ಜರ್ನಿಯಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಖ್ಯಾತಿ ದಣದ ಸ್ಟಾರ್​ ನಟಿ ಅನುಷ್ಕಾ ಶೆಟ್ಟಿಗೆ ಸಲ್ಲುತ್ತದೆ. ಆದರೆ, ಆದರೆ, 2020ರ "ನಿಶ್ಶಬ್ದಂ' ಬಳಿಕ ಅವರು ಚಿತ್ರರಂಗದಿಂದ ದೂರವಾಗಿದ್ದರು. ಮೂರು ವರ್ಷಗಳ ಗ್ಯಾಪ್​ ನಂತರ "ಮಿಸ್​ ಶೆಟ್ಟಿ, ಮಿಸ್ಟರ್​ ಪೊಲಿಶೆಟ್ಟಿ' ಚಿತ್ರದ ಮೂಲಕ ಕಮ್​ಬ್ಯಾಕ್​ ಮಾಡಿದ ಅನುಷ್ಕಾ, ಮತ್ತೆ ಚಿತ್ರರಂಗದಲ್ಲಿ ಮೊದಲಿನಂತೆಯೇ ಬಿಜಿಯಾಗಿದ್ದಾರೆ.

"ಕಥನರ್​ : ದ ವೈಲ್ಡ್​ ಸಾರ್ಸರರ್​' ಚಿತ್ರದ ಮೂಲಕ ಮಲಯಾಳಂ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಅವರು, ಜತೆಗೆ "ಘಾಟಿ' ಎಂಬ ಮತ್ತೊಂದು ತೆಲುಗು ಚಿತ್ರದಲ್ಲೂ ಮುಖ್ಯ ಭೂಮಿಕಯೆಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೊಜಿನ್​ ಥಾಮಸ್​ ನಿರ್ದೇಶಿಸುತ್ತಿರುವ ್ಯಾಂಟಸಿ ಹಾರರ್​ ಥ್ರಿಲ್ಲರ್​ "ಕಥನರ್​'ನಲ್ಲಿ ಕಲ್ಲಿಯಂಕಟ್ಟು ನೀಲಿ ಎಂಬ ಮಾಟಗಾತಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಎರಡು ಭಾಗಗಳಲ್ಲಿ ಈ ಸಿನಿಮಾ ಮೂಡಿಬರಲಿದ್ದು, ಈಗಾಗಲೇ ಅನುಷ್ಕಾ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ.

ಮತ್ತೊಂದೆಡೆ "ಕಾಂಚೆ', "ಗೌತಮಿಪುತ್ರ ಶತಕರ್ಣಿ', "ಎನ್​ಟಿಆರ್​' ಸರಣಿ ಖ್ಯಾತಿಯ ನಿರ್ದೇಶಕ ಕ್ರಿಷ್​ ಜಗರ್ಲಮುಡಿ ನಿರ್ದೇಶನದ ಮಹಿಳಾ ಪ್ರಧಾನ ಸಸ್ಪೆನ್ಸ್​ ಥ್ರಿಲ್ಲರ್​ ಡ್ರಾಮಾ "ಘಾಟಿ' ಚಿತ್ರದಲ್ಲೂ ಅನುಷ್ಕಾ ನಾಯಕಿಯಾಗಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಈ ಚಿತ್ರದ ಶೂಟಿಂಗ್​ ಕೂಡ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್​&ಪ್ರೊಡಕ್ಷನ್​ ಕೆಲಸಗಳು ಭರದಿಂದ ಸಾಗಿವೆ. &ಏಜೆನ್ಸೀಸ್​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net