ಯಾರಿದು ಅನುಷ್ಕಾ ಶರ್ಮಾನಾ? ಲೇಟೆಸ್ಟ್ ಆಡ್ ವಿಡಿಯೋ ನೋಡಿ ಅಭಿಮಾನಿಗಳು ಫುಲ್​ ಕನ್ಫ್ಯೂಸ್! Anushka Sharma

Anushka Sharma ಚಿತ್ರ Instagram
Anushka Sharma ಚಿತ್ರ Instagram
Published on
Anushka Sharma: ಬಾಲಿವುಡ್‌ನ ಜನಪ್ರಿಯ ನಟಿ ಅನುಷ್ಕಾ ಶರ್ಮಾ ಸುದೀರ್ಘ ವಿರಾಮದ ನಂತರ ಮತ್ತೆ ಕ್ಯಾಮೆರಾ ಮುಂದೆ ಕಾಣಿಸಿಕೊಂಡಿದ್ದು, ಅವರ ಹೊಸ ಜಾಹೀರಾತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ನಾಂದಿ ಹಾಡಿದೆ. ಹಲವಾರು ವರ್ಷಗಳಿಂದ ಬೆಳ್ಳಿತೆರೆಯಿಂದ ದೂರವಿದ್ದ ನಟಿ, ಇತ್ತೀಚೆಗೆ ಬಿಡುಗಡೆಯಾದ ಆಭರಣ ಬ್ರ್ಯಾಂಡ್‌ನ ಜಾಹೀರಾತಿನಲ್ಲಿ ಮಿಂಚಿದ್ದಾರೆ. ಈ ಜಾಹೀರಾತು ವೈರಲ್ ಆಗುತ್ತಿದ್ದಂತೆಯೇ ಅಭಿಮಾನಿಗಳಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
ಅನುಷ್ಕಾ ಶರ್ಮಾ ಹೊಸ GIVA ಆಭರಣ ಸಂಸ್ಥೆಯ ಹೀರಾ ಎಂಬ ಜಾಹೀರಾತಿನ ಮೂಲಕ ಕಾಣಿಸಿಕೊಂಡಿದ್ದು, ಬ್ರಾಂಡ್​ ಮಂಗಳವಾರ ಅಧಿಕೃತವಾಗಿ ಜಾಹೀರಾತನ್ನು ಬಿಡುಗಡೆ ಮಾಡಿತು. ಯೂಟ್ಯೂಬ್​ ವಿಡಿಯೋ ಆರಂಭದಲ್ಲಿ ಕಡಿಮೆ ವೀಕ್ಷಕರನ್ನು ಪಡೆಯಿತು. ಆದರೆ, ಇದರ ತುಣುಕುಗಳು ಸಾಮಾಜಿಕ ವೇದಿಕೆಗಳಲ್ಲಿ ಬೇಗನೇ ವೈರಲ್​ ಆದವು.
ಆದಾಗ್ಯೂ, ಅನುಷ್ಕಾ ಶರ್ಮಾ ದೀರ್ಘಕಾಲದವರೆಗೆ ಚಲನಚಿತ್ರದಿಂದ ದೂರವಿದ್ದರೂ ಹೊಸ ಜಾಹಿರಾತಿನ ಮೂಲಕ ಮರಳಿದ್ದಕ್ಕಾಗಿ ಅಭಿಮಾನಿಗಳು ಅಪಾರ ಸಂತೋಷ ವ್ಯಕ್ತಪಡಿಸಿದರು. ಅವರ ಅಭಿನಯವನ್ನು ವೀಕ್ಷಿಸಿದ ಪ್ರೇಕ್ಷಕರು ಆಕರ್ಷಕ ನೋಟ ಮತ್ತು ಆಕರ್ಷಕ ಉಪಸ್ಥಿತಿಯನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಮಾಜಿಕ ಮಾಧ್ಯಮ ಪ್ರತಿಕ್ರಿಯೆಗಳು

ಈ ಜಾಹೀರಾತು ಪ್ರಸಾರವಾದ ಬೆನ್ನಲ್ಲೇ ಅವರ ದೈಹಿಕ ರೂಪದ ಬಗ್ಗೆ ಹಲವಾರು ಚರ್ಚೆಗಳನ್ನು ಹುಟ್ಟುಹಾಕಿತು. ಸಾಮಾಜಿಕ ಮಾದ್ಯಮ ಬಳಕೆದಾರರು ಅವರ ರೂಪಾಂತರಗೊಂಡ ನೋಟವನ್ನು ನೋಡಿದ ನಂತರ ಸೌಂದರ್ಯವರ್ಧಕ ವಿಧಾನಗಳು ಮತ್ತು ಡಿಜಿಟಲ್ ಬದಲಾವಣೆಗಳ ಬಗ್ಗೆ ಊಹಿಸಲು ಪ್ರಾರಂಭಿಸಿದ್ದಾರೆ.
ಆದಾಗ್ಯೂ, ಜಾಹಿರಾತಿನಲ್ಲಿ ಅವರು ವಿಭಿನ್ನವಾಗಿ ಕಾಣಲು ಫಿಲ್ಟರ್​ಗಳನ್ನು ಬಳಸಿದ್ದಾರೆಯೇ ಅಥವಾ ಪೋಸ್ಟ್ ಪ್ರೊಡಕ್ಷನ್​ ಪರಿಣಾಮಗಳನ್ನು ಬಳಸಿದ್ದಾರೆಯೇ ಎಂದು ಅನೇಕರು ಪ್ರಶ್ನಿಸಿದ್ದಾರೆ. ಇನ್ನೂ ಕೆಲವರು ವಯಸ್ಸಾಗುವಿಕೆ, ಕ್ಯಾಮೆರಾ ಬೆಳಕು, ಮೇಕಪ್ ಮತ್ತು ಎಡಿಟಿಂಗ್ ಪ್ರಕ್ರಿಯೆಗಳು ಸೇರಿ ಒಬ್ಬ ನಟನ ತೆರೆಯ ಮೇಲಿನ ನೋಟದಲ್ಲಿ ಬದಲಾವಣೆಯನ್ನು ತರುವುದು ಸಹಜ ಎಂದು ವಿವರಿಸಿದ್ದಾರೆ.

ಅನುಷ್ಕಾ ಶರ್ಮಾ ಅವರ ಚಲನಚಿತ್ರ ವೃತ್ತಿಜೀವನ

ಅನುಷ್ಕಾ ಶರ್ಮಾ ಬಾಲಿವುಡ್‌ನ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು. ತಮ್ಮ ಮೊದಲ ಚಿತ್ರದಲ್ಲೇ ಶಾರುಖ್ ಖಾನ್ ಅವರಂತಹ ದಿಗ್ಗಜ ನಟನ ಜೊತೆ ನಟಿಸುವ ಅವಕಾಶ ಪಡೆದ ಅವರು, ಆನಂತರ ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡರು. 2008 ರಲ್ಲಿ ರಬ್ ನೆ ಬನಾ ದಿ ಜೋಡಿ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಅವರು, ಬ್ಯಾಂಡ್ ಬಾಜಾ ಬಾರಾತ್, ಪಿಕೆ, ದಿಲ್ ಧಡಕ್ನೆ ದೋ ಮತ್ತು ಸಂಜು ಮುಂತಾದ ಸಿನಿಮಾಗಳಲ್ಲಿ ನಟಿಸಿ ಹಿಟ್ ಪಡೆದರು. 2018 ರಲ್ಲಿ ತೆರೆಕಂಡ ಝೀರೋ ನಂತರ ನಟನೆಯಿಂದ ವಿರಾಮ ತೆಗೆದುಕೊಂಡರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net