

ಬೆಂಗಳೂರು: ‘ರೈಡರ್’, ‘ಖಡಕ್’ ಖ್ಯಾತಿಯ ಅನುಷಾ ರೈ ‘ಬಿಗ್‌ಬಾಸ್ ಕನ್ನಡ ಸೀಸನ್-11’ ಮತ್ತಷ್ಟು ಜನಪ್ರಿಯತೆ ತಂದುಕೊಟ್ಟಿತ್ತು. ಇದೀಗ ಅವರು ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದು, ಪ್ರಮುಖ ಎರಡು ಸಿನಿಮಾಗಳಲ್ಲಿ ಅವರು ನಟಿಸುತ್ತಿದ್ದಾರೆ. ಕೋಮಲ್ ಅಭಿನಯದ ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’ ಹಾಗೂ ಮನೋರಂಜನ್ ರವಿಚಂದ್ರನ್ ನಟನೆಯ ಇನ್ನು ಹೆಸರಿಡದ ಚಿತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಎರಡು ಸಿನಿಮಾಗಳ ಕುರಿತು ‘ವಿಜಯವಾಣಿ’ ಜತೆ ಮಾಹಿತಿ ಹಂಚಿಕೊಂಡರು.
‘‘ಬಿಗ್‌ಬಾಸ್’ನಿಂದ ಬಂದ ಬಳಿಕ ಹಲವು ಪ್ರಾಜೆಕ್ಟ್‌ಗಳು ಬಂದವು. ಆದರೆ, ನಾನೇ ಸ್ವಲ್ಪ ಚ್ಯೂಸಿಯಾದೆ. ತುಂಬಾ ಯೋಜಿಸಿ ಪಾತ್ರ ಆಯ್ಕೆ ಮಾಡಿಕೊಳ್ಳುತ್ತಿದ್ದೇನೆ. ಅದರ ಲವೇ ‘ಸಂಗೀತಾ ಬಾರ್ ಆ್ಯಂಡ್ ರೆಸ್ಟೋರೆಂಟ್’. ಇದೊಂದು ಹಿಸ್ಟರಿಕಲ್ ಜತೆಗೆ ಕಾಮಿಡಿ ಸಿನಿಮಾ. ಎರಡು ಕಾಲಘಟ್ಟದಲ್ಲಿ ನಡೆಯುವಂತಹ ಕಥೆ. ಸಂಗೀತಾ ಹಾಗೂ ಸಾಹಿತ್ಯ ಎಂಬ ದ್ವಿಪಾತ್ರದಲ್ಲಿದ್ದೇನೆ. ಇದೇ ಮೊದಲ ಬಾರಿಗೆ ನಾನು ದ್ವಿಪಾತ್ರದಲ್ಲಿರುವುದು. ಒಂದು ಪಾತ್ರಕ್ಕಾಗಿ ಕ್ಲಾಸಿಕಲ್ ಭರತನಾಟ್ಯ ಕಲಿಯಬೇಕಿದೆ. ಸೆಮಿ ಕ್ಲಾಸಿಕಲ್ ಮಾತ್ರ ಗೊತ್ತು ಈ ಪಾತ್ರಕ್ಕಾಗಿ ನಾನು ಭರತನಾಟ್ಯ ಪ್ರಾಕ್ಟೀಸ್ ಮಾಡಬೇಕಿದೆ. ಅಷ್ಟೇ ಅಲ್ಲದೇ ಕರಾವಳಿ ಭಾಗದಲ್ಲಿ ನಡೆಯುವ ಕಥೆಯಾಗಿರುವುದರಿಂದ ಭಾಷಾ ಶೈಲಿ ಕೂಡ ಸ್ವಲ್ಪ ಬದಲಾವಣೆ ಬೇಕಾಗುತ್ತದೆ. ಕೋಮಲ್ ಸರ್ ಜತೆ ಈಗಾಗಲೇ ಕೆಲವು ದೃಶ್ಯಗಳ ಶೂಟ್ ಮಾಡಿದ್ದೇವೆ. ಈ ಚಿತ್ರದ ಮೇಲೆ ನನಗೆ ತುಂಬಾ ಭರವಸೆಯಿದೆ’ ಎನ್ನುತ್ತಾರೆ ಅನುಷಾ ರೈ.
ಮನೋರಂಜನ್ ಚಿತ್ರದಲ್ಲಿ ‘ಖಡಕ್’ ಹುಡುಗಿ
ಮನೋರಂಜನ್ ರವಿಚಂದ್ರನ್ ಅಭಿನಯದ ಹೊಸ ಸಿನಿಮಾ ಇತ್ತೀಚೆಗೆ ಸೆಟ್ಟೇರಿದೆ. ಈ ಚಿತ್ರದಲ್ಲಿ ಅನುಷಾ ರೈ ನಟಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಶೂಟಿಂಗ್ ಆರಂಭವಾಗಿದೆ. ‘ಇದು ಮದುವೆಯ ಸುತ್ತ ಮುತ್ತ ನಡೆಯುವಂತಹ ಕಥೆ. ಒಂದು ಹುಡುಗನ ಜೀವನದಲ್ಲಿ ಮದುವೆ ಎನ್ನುವುದು ಎಷ್ಟು ಪರಿಣಾಮ ಹಾಗೂ ಪ್ರಾಮುಖ್ಯತೆ ವಹಿಸುತ್ತದೆ ಎಂಬುದನ್ನು ಹೇಳಲು ಹೊರಟಿದ್ದಾರೆ. ಇನ್ನು ‘ಬಿಗ್‌ಬಾಸ್’ನಲ್ಲಿ ನಾನು ಪಾಸಿಟಿವ್ ಆಗಿರುವುದನ್ನು ಗಮನಿಸಿದ್ದ ತಂಡ ರಿಯಲ್ ಜೀವನದಲ್ಲಿ ಹಾಗೇ ಇದ್ದೀರಿ ಎಂದು ಈ ಪಾತ್ರಕ್ಕೆ ಆಯ್ಕೆಕೊಂಡರು. ಮನೋರಂಜನ್ ಜತೆ ತೆರೆ ಮೇಲೆ ಕಾಣಲು ಉತ್ಸುಕಳಾಗಿದ್ದೇನೆ’ ಎಂದು ಖುಷಿಹಂಚಿಕೊಂಡರು.