ವಿಜಯ್​ ಮಲ್ಯ ಪಾತ್ರದಲ್ಲಿ ಅನುರಾಗ್​ ಕಶ್ಯಪ್​? 'ಫೈಲ್​ ನಂ 323' ಚಿತ್ರದಲ್ಲಿ ನಟಿಸುವ ಸಾಧ್ಯತೆ ...

Anurag Kashyap - Vijay Mallya
Published on

ಮುಂಬೈ: ಆರ್ಥಿಕ ಅಕ್ರಮ ಎಸಗಿ ಪಲಾಯನ ಮಾಡಿರುವವರ ಕುರಿತು ಒಂದು ಚಿತ್ರ ನಿರ್ಮಾಣವಾಗುತ್ತಿದೆ ಎಂಬ ಸುದ್ದಿಯೊಂದು ಇತ್ತೀಚಿನ ದಿನಗಳಲ್ಲಿ ಕೇಳಿಬರುತ್ತಿದೆ. ಈಗ ಆ ಚಿತ್ರದಲ್ಲಿ ವಿಜಯ್​ ಮಲ್ಯ ಪಾತ್ರಕ್ಕೆ ನಟ-ನಿರ್ದೇಶಕ ಅನುರಾಗ್​ ಕಶ್ಯಪ್​ ಅವರನ್ನು ಸಂಪರ್ಕಿಸಲಾಗಿದೆಯಂತೆ.

ತಮಿಳಿನ ಖ್ಯಾತ ನಿರ್ದೇಶಕ ಶಂಕರ್​ ಅವರ ಗರಡಿಯಲ್ಲಿ ಪಳಗಿರುವ ಕಾರ್ತಿಕ್​, ಆರ್ಥಿಕ ಅಕ್ರಮ ಮಾಡಿ ದೇಶ ಬಿಟ್ಟು ಓದಿ ಹೋದ ವಿಜಯ್​ ಮಲ್ಯ, ನೀರವ್ ಮೋದಿ ಮತ್ತು ಮೆಹುಲ್​ ಚೋಕ್ಸಿ ಕುರಿತು ಒಂದು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಈ ಚಿತ್ರದಲ್ಲಿನ ವಿಜಯ್​ ಮಲ್ಯ ಅವರ ಪಾತ್ರ ಮಾಡುವುದಕ್ಕೆ ಅನುರಾಗ್ ಕಶ್ಯಪ್​ ಅವರನ್ನು ಸಂಪರ್ಕಿಸಲಾಗಿದೆ. ಆದರೆ, ಅನುರಾಗ್​ ಅವರಿಂದ ಇನ್ನೂ ಗ್ರೀನ್​ ಸಿಗ್ನಲ್​ ಬಂದಿಲ್ಲವಂತೆ. ಆದರೆ, ಸದ್ಯಕ್ಕೆ ಅನುರಾಗ್​ ಅವರಿಂದ ಗ್ರೀನ್​ ಸಿಗ್ನಲ್​ ಬಂದಿಲ್ಲ.

ಈ ಚಿತ್ರಕ್ಕೆ 'ಫೈಲ್​​ ನಂ 323' ಎಂಬ ಹೆಸರಿಡಲಾಗಿದ್ದು, ನ.20ರಂದು ಪ್ರಾರಂಭವಾಗಲಿದೆಯಂತೆ. ಬರೀ ಭಾರತವಲ್ಲ, ಲಂಡನ್​ ಸೇರಿದಂತೆ ಯೂರೋಪ್​ನ ಹಲವು ಕಡೆ ಚಿತ್ರೀಕರಣ ಮಾಡಲಾಗುತ್ತದಂತೆ. ವಿಜಯ್​ ಮಲ್ಯ ದೇಶ ಬಿಟ್ಟು ಹೋದ ನಂತರ, ಎಲ್ಲೆಲ್ಲಿ ಹೋದರು? ಅವರ ಜೀವನಶೈಲಿ ಹೇಗಿತ್ತು? ಎಂಬುದನ್ನು ತೋರಿಸಲಾಗುತ್ತದಂತೆ.

'ಫೈಲ್​ ನಂ 323' ಚಿತ್ರವು ಮುಂದಿನ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನೀರವ್​ ಮೋದಿ ಮತ್ತು ಮೇಹುಲ್​ ಚೋಕ್ಸಿ ಅವರ ಪಾತ್ರಗಳಿಗೂ ಸೂಕ್ತ ಪಾತ್ರಧಾರಿಗಳ ಹುಡುಕಾಟ ನಡೆದಿದೆ ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net