ನಾನಿನ್ನು ಚಿಕ್ಕ ಹುಡುಗಿ ಸದ್ಯಕ್ಕೆ ಆ ಮಾತು ಕೇಳಲೇಬೇಡಿ ಎಂದ ಅನುಪಮಾ ಪರಮೇಶ್ವರನ್​..!

Anupama
Published on

ಹೈದರಾಬಾದ್​: ನಟ ಸಾರ್ವಭೌಮ ಚಿತ್ರದ ಮೂಲಕ ಕನ್ನಡಿಗರ ಹೃದಯಕ್ಕೆ ಲಗ್ಗೆಯಿಟ್ಟಿರುವ ಸೌಂದರ್ಯ ಕನ್ನಿಕೆ ಅನುಪಮಾ ಪರಮೇಶ್ವರನ್​ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯರಾಗಿರುತ್ತಾರೆ. ಅಭಿಮಾನಿಗಳ ನಿರಂತರ ಸಂಪರ್ಕದಲ್ಲಿರುವ ಅನುಪಮಾ ಕೇಳುವ ಪ್ರಶ್ನೆಗಳಿಗೆ ಉತ್ತರ ನೀಡುತ್ತಿರುತ್ತಾರೆ.

ಇತ್ತೀಚೆಗೆ ಅಭಿಮಾನಿಯೊಬ್ಬರು ಜಾಲತಾಣದಲ್ಲಿ ಅನುಪಮಾರನ್ನು ಮದುವೆ ಯಾವಾಗ? ಮತ್ತು ಮದುವೆ ಏನು ಪ್ಲಾನ್​ ಮಾಡಿಕೊಂಡಿದ್ದೀರಿ ಎಂದು ಕೇಳಿದ್ದರು. ಇದಕ್ಕೆ ಉತ್ತರಿಸಿರುವ ಅನುಪಮಾ, ನನಗಿನ್ನೂ 25 ವರ್ಷ. ಮದುವೆಗೆ ಇನ್ನು ಬಹಳ ಸಮಯವಿದೆ. ಈಗಲೇ ಮದುವೆ ಕುರಿತು ಕೇಳಬೇಡಿ. ನಾನಿನ್ನು ಚಿಕ್ಕ ಹುಡುಗಿ. ಸದ್ಯಕ್ಕೆ ಮದುವೆ ಆಗುವುದಿಲ್ಲ ಎಂದಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಅನುಪಮಾ ಕೆಲ ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ. ದಿಲ್​ ರಾಜು ನಿರ್ಮಾಣದ ನಿಖಿಲ್​ ಸಿದ್ಧಾರ್ಥ್​ ಅಭಿನಯದ '18 ಪೇಜ್​' ಮತ್ತು 'ರೌಡಿ ಬಾಯ್ಸ್​' ತೆಲುಗು ಚಿತ್ರದಲ್ಲಿ ತೊಡಗಿಕೊಂಡಿದ್ದಾರೆ. ಬೇರೆ ಭಾಷೆಗಳಲ್ಲೂ ಅನುಪಮಾ ನಟಿಸುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net