ಅನಸೂಯ ಈಗ ಸಿಲ್ಕ್; ಸ್ಮಿತಾ ಕುರಿತು ಇನ್ನೊಂದು ಬಯೋಪಿಕ್?

Silk Smitha
Published on

ಬೆಂಗಳೂರು: ಸಿಲ್ಕ್ ಸ್ಮಿತಾ ಜೀವನವನ್ನಾಧರಿಸಿ ಬಾಲಿವುಡ್​ನಲ್ಲಿ ಈಗಾಗಲೇ ‘ಡರ್ಟಿ ಪಿಕ್ಚರ್’ ನಿರ್ವಣವಾಗಿದೆ. ಈಗ ಕಾಲಿವುಡ್​ನಲ್ಲೂ ಅಂಥದ್ದೊಂದು ಪ್ರಯತ್ನ ನಡೆಯುತ್ತಿದ್ದು, ಮುಂದಿನ ವರ್ಷ ತಮಿಳಿನ ‘ಡರ್ಟಿ ಪಿಕ್ಚರ್’ ಬಂದರೆ ಆಶ್ಚರ್ಯವಿಲ್ಲ.

ಸಿಲ್ಕ್ ಸ್ಮಿತಾ ಹೇಳಿಕೇಳಿ ಕಾಲಿವುಡ್​ನವರು. ತಮಿಳಿನ ಹಲವು ಚಿತ್ರಗಳಲ್ಲಿ ನಟಿಸುವುದರ ಜತೆಗೆ ಅಲ್ಲೇ ಜನಪ್ರಿಯತೆಯನ್ನೂ ಪಡೆದವರು. ಅವರ ಬಗ್ಗೆ ಅಲ್ಲೇ ಸಿನಿಮಾ ಬಂದಿರಲಿಲ್ಲ. ಈಗ ತಮಿಳಿನಲ್ಲೂ ಸಿಲ್ಕ್ ಅವರ ಬಯೋಪಿಕ್ ತಯಾರಾಗುತ್ತಿದ್ದು, ಕಿರುತೆರೆಯ ಜನಪ್ರಿಯ ನಟಿ ಮತ್ತು ನಿರೂಪಕಿ ಅನುಸೂಯ ಭಾರದ್ವಾಜ್ ಅವರು ಸಿಲ್ಕ್ ಸ್ಮಿತಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದ್ದಿ ಇದೆ. ಇನ್ನು ಈ ಚಿತ್ರದಲ್ಲಿ ವಿಜಯ್ ಸೇತುಪತಿ ಸಹ ನಟಿಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಚಿತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳು ಹೊರಬೀಳಬೇಕಿದ್ದು, ಸದ್ಯಕ್ಕೆ ಅನುಸೂಯ ಸಿಲ್ಕ್ ತರಹ ಕಾಣುವ ಒಂದು ಕಪು್ಪ-ಬಿಳುಪು ಫೋಟೋವೊಂದನ್ನು ಇನ್​ಸ್ಟಾಗ್ರಾಂ ಮೂಲಕ ಹಂಚಿಕೊಂಡಿದ್ದಾರೆ. ಈ ಮೂಲಕ ಸಿಲ್ಕ್ ಕುರಿತ ಬಯೋಪಿಕ್​ನಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಈ ಚಿತ್ರಕ್ಕೆ ಯಾರ್ಯಾರು ಸೇರುತ್ತಾರೋ ನೋಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net