

Judge: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಎ2 ಆರೋಪಿ ನಟ ದರ್ಶನ್ಗೆ ಜೈಲಿನಲ್ಲಿ ಬೆಡ್ಶಿಟ್, ದಿಂಬು ಮೆನೆ ಊಟಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ(ಸೆ.3ರಂದು) ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯ ಸೆ.9ಕ್ಕೆ ಆದೇಶ ಕಾಯ್ದಿರಿಸಿದೆ. ಈ ವಿಚಾರಣೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ದಿಢೀರ್ ಎಂಟ್ರಿ ಕೊಟ್ಟಿದ್ದಾನೆ.
ಕೋರ್ಟ್ ಹಾಲ್ ಒಳಗೆ ಏಕಾಏಕಿ ಬಂದ ಅನಾಮಿಕ ಅರ್ಜಿವೊಂದನ್ನು ಹಿಡಿದು 17 ಆರೋಪಿಗಳಿಗೆ ಬೆಲ್ ನೀಡಬಾರದು. ದರ್ಶನ್, ಪವಿತ್ರಾಗೌಡ ಸೇರಿದಂತೆ 17 ಜನರಿಗೆ ಮರದಂಡನೆ ಶಿಕ್ಷೆ ನಿಡಬೇಕು ಎಂದು ಹೇಳಿದ್ದಾನೆ. ಅಲ್ಲದೆ, ಈ ಕುರಿತು ಕೋರ್ಟ್ಗೆ ಅರ್ಜಿ ಸಲ್ಲಿಸಲು ಬಂದಿದ್ದೇನೆ ಎಂದು ಹೇಳಿದ್ದಾನೆ. ಈತನ ಮಾತು ಕೇಳಿದ ಜಡ್ಜ್ ಶಾಕ್ ಆಗಿದ್ದಾರೆ.
ಯಾರು ನೀವು ಎಂದು ಜಡ್ಜ್ ಕೇಳಿದಾಗ, ನಾನು ರವಿ ಬೆಳಗೆರೆ ಕಡೆಯರು ಎಂದು ಉತ್ತರಿಸಿದ್ದಾನೆ. ಯಾರಾರೋ ನೀಡಿ ಅರ್ಜಿಯನ್ನು ತಗೆದುಕೊಳ್ಳಲಾಗುವುದಿಲ್ಲ ಎಂದು ಜಡ್ಜ್ ಹೊರ ಕಳುಹಿಸಿದ್ದಾರೆ. ಇನ್ನು ಇದರ ಜತೆ ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡುವಂತೆ ಸರ್ಕಾರದ ಪರ ಎಸ್ಪಿಪಿ ಪ್ರಸನ್ನ ಕುಮಾರ್ ಕೋರಿದ್ದಾರೆ. ಇದೀಗ ಸೆಷನ್ಸ್ ನ್ಯಾಯಾಲಯ ಸೆ.9ಕ್ಕೆ ಆದೇಶ ಕಾಯ್ದಿರಿಸಿದೆ.