ಅನಿರುದ್ಧ್ ಮೆಚ್ಚಿದ ಲಾಕ್​ಡೌನ್ ಸಿನಿಮಾ ಕ್ರೌನ್

page 10 4
Published on

ಬೆಂಗಳೂರು: ‘ದಿ ಕ್ರೌನ್’ ಎಂಬುದು ಇಂಗ್ಲಿಷ್ ವೆಬ್​ಸಿರೀಸ್. 2016ರಲ್ಲಿ ಶುರುವಾಗಿದ್ದ ಈ ವೆಬ್​ಸರಣಿ ಒಟ್ಟು ಮೂರು ಸೀಸನ್​ನಲ್ಲಿ ಬಿಡುಗಡೆ ಆಗಿದೆ. ಒಂದೊಂದು ಸೀಸನ್​ನಲ್ಲಿ 10 ಕಂತುಗಳಿವೆ. ಒಟ್ಟು 30 ಕಂತುಗಳು 3 ವರ್ಷಗಳ ಕಾಲ ಬಿಡುಗಡೆ ಆಗಿದೆ. ಶೀರ್ಷಿಕೆ ಹೇಳುವಂತೆ, ಇದೊಂದು ಐತಿಹಾಸಿಕ ಹಿನ್ನೆಲೆಯುಳ್ಳ ಕತಾನಕ. ಬ್ರಿಟನ್ ರಾಜಮನೆತನ ಮತ್ತು ಆಡಳಿತದ ಸುತ್ತ ಸುತ್ತುವ ಕಥೆ. ಕ್ವೀನ್ ಎಲಿಜೆಬೆತ್ ಬಾಲ್ಯ, ಯೌವನದ ಕಾಲಘಟ್ಟ ಮತ್ತು ರಾಣಿಯಾಗಿ ಆಡಳಿತ ನಡೆಸಿದ ದಿನಗಳನ್ನು ಕಂತುಗಳ ರೂಪದಲ್ಲಿ ತೋರಿಸಿದ್ದಾರೆ. ಈಗಿನ್ನು ನಾನು ಮೊದಲ ಸೀಸನ್ ನೋಡುತ್ತಿದ್ದೇನೆ. ಲಾಕ್​ಡೌನ್ ಮುಗಿಯುತ್ತಿದ್ದಂತೆ ಪೂರ್ತಿ ನೋಡಿ ಮುಗಿಸುತ್ತೇನೆ. ಆಗಿನ ಇಂಗ್ಲೆಂಡ್ ಪ್ರಧಾನಿ

ವಿನ್​ಸ್ಟನ್ ರ್ಚಚಿಲ್ ಸಹ ಭಾಗವೂ ಈ ಸರಣಿಯ ಹೈಲೈಟ್​ಗಳಲ್ಲೊಂದು. ಪೀಟರ್ ಮಾರ್ಗನ್ ಈ ವೆಬ್​ಸರಣಿಯ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಹಲವು ಕಂತುಗಳನ್ನು ಬೇರೆಯವರೂ ನಿರ್ದೇಶಿಸಿದ್ದಾರೆ. ಬ್ರಿಟಿಷರ ಆಡಳಿತ, ಎಲಿಜೆಬೆತ್ ಅನ್ನೋ ಹೆಣ್ಣುಮಗಳ ಕಥೆ ನಿಜಕ್ಕೂ ರೋಚಕತೆ ಹುಟ್ಟಿಸುವಂತಿದೆ.

| ಅನಿರುದ್ಧ ನಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net