

ಕಳೆದೊಂದು ವರ್ಷದಿಂದ ಕಣ್ಣಾಮುಚ್ಚಾಲೆ ಆಡುತ್ತಿರುವ ಬಾಲಿವುಡ್ನ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೊರಾ, ಇತ್ತೀಚೆಗಷ್ಟೇ ತಮ್ಮಿಬ್ಬರ ನಡುವಿನ ಸಂಬಂಧದ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದರು. ಮಲೈಕಾ ಕುಟುಂಬ ಕಾರ್ಯಕ್ರಮಗಳಿಗೆ ಅರ್ಜುನ್ಗೆ ಆಹ್ವಾನ ನೀಡಿ, ಎಲ್ಲರಿಗೂ ಪರಿಚಯ ಮಾಡಿಕೊಟ್ಟಿದ್ದರು. ಇಷ್ಟೆಲ್ಲ ನಡೆಯುತ್ತಿದ್ದಂತೆ, ಈ ಸಂಬಂಧದ ಬಗ್ಗೆ ಮಲೈಕಾ ಫ್ಯಾಮಿಲಿಯಿಂದ ಯಾವುದೇ ತಕರಾರಿಲ್ಲ ಎಂಬುದು ಅಧಿಕೃತವಾಯ್ತು. ಇತ್ತ ಕಪೂರ್ ಖಾಂದಾನ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಇದೀಗ ಅರ್ಜುನ್ ಕಪೂರ್ ಚಿಕ್ಕಪ್ಪ ಅನಿಲ್ ಕಪೂರ್ ಇವರಿಬ್ಬರ ರಿಲೇಷನ್ಶಿಪ್ ಬಗ್ಗೆ ಮಾತನಾಡಿದ್ದಾರೆ.
ಇತ್ತೀಚೆಗಷ್ಟೇ ಈ ಜೋಡಿ ಹಕ್ಕಿಯ ಬಗ್ಗೆ ಚಾಟ್ ಶೋವೊಂದರಲ್ಲಿ ಕೇಳಿದ ಪ್ರಶ್ನೆಗೆ ಅನಿಲ್ ಕಪೂರ್ ಉತ್ತರಿಸಿದ್ದಾರೆ. ‘ನನಗೆ ಅರ್ಜುನ್ ಗೊತ್ತು. ಅವನಿಗೆ ಯಾವುದು ಸಂತೋಷ ಅನಿಸುತ್ತದೋ ಅದನ್ನೇ ಮಾಡಲಿ. ಅದರಲ್ಲೇ ಆತ ಹ್ಯಾಪಿಯಾಗಿರುತ್ತಾನೆಂದರೆ ನಮ್ಮದೇನೂ ತಕರಾರಿಲ್ಲ. ನಮ್ಮ ಕುಟುಂಬ ಬಯಸುವುದೂ ಅದನ್ನೇ ಅವರವರ ಸಂತೋಷವೇ ನಮಗೆ ಮುಖ್ಯ’ ಎಂದಿದ್ದಾರೆ.
ಲಾಕ್ಡೌನ್ ಶುರುವಾಗುವುದಕ್ಕೂ ಮುನ್ನ ಎಲ್ಲೆಂದರಲ್ಲಿ ಕಾಣಿಸಿಕೊಂಡು, ಎಲ್ಲರ ಅಟೆಂನ್ಷನ್ ಗಿಟ್ಟಿಸಿಕೊಳ್ಳುತ್ತಿದ್ದ ಈ ಜೋಡಿ, ವಿದೇಶಿ ಪ್ರವಾಸ, ಸುತ್ತಾಟ, ಕಾರ್ಯಕ್ರಮಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡು ಸದಾ ಸುದ್ದಿಯಲ್ಲಿರುತ್ತಿತ್ತು. ಇದೀಗ ಕರೊನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಇಬ್ಬರೂ ಅವರವರ ಮನೆಯಲ್ಲಿ ಕಾಲಕಳೆಯುತ್ತಿದ್ದಾರೆ. ಕರೊನಾ ಮುಗಿಯುತ್ತಿದ್ದಂತೆ, ಮದುವೆ ಬಗ್ಗೆ ಈ ಜೋಡಿ ನಿರ್ಧರಿಸಬಹುದು. (ಏಜೆನ್ಸೀಸ್)