'AK Vs AK' ಸಿನಿಮಾದ ಟ್ರೇಲರ್ ವಿವಾದ; ಏರ್ ಫೋರ್ಸ್ ಬಳಿ ಕ್ಷಮೆ ಕೇಳಿದ ಅನಿಲ್ ಕಪೂರ್!

AKvsAk
Published on

ಮುಂಬೈ: ಕಳೆದ ಎರಡು ದಿನಗಳ ಹಿಂದೆ ಬಿಡುಗಡೆಯಾಗಿದ್ದ 'AK vs AK' ಚಿತ್ರದ ಟ್ರೇಲರ್​ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಟ್ರೇಲರ್​ನಲ್ಲಿ ಇಂಡಿಯನ್ ಏರ್​ಫೋರ್ಸ್​ಗೆ ಅವಮಾನ ಮಾಡಲಾಗಿದೆ ಎಂದು ಏರ್​ಫೋರ್ಸ್ ಆರೋಪಿಸಿತ್ತು. ಅಷ್ಟೇ ಅಲ್ಲ ಟ್ರೇಲರ್​ನಲ್ಲಿ ಅನಿಲ್ ಕಪೂರ್ ಧರಿಸಿದ ಏರ್​ಫೋರ್ಸ್ ಸಮವಸ್ತ್ರದ ಬಗ್ಗೆಯೂ ಆಕ್ಷೇಪ ವ್ಯಕ್ತವಾಗಿತ್ತು. ಇದೀಗ ಈ ಎಲ್ಲ ಬೆಳವಣಿಗೆಗೆ ಸಂಬಂಧಪಟ್ಟಂತೆ ನಟ ಅನಿಲ್ ಕಪೂರ್ ಕ್ಷಮೆಯಾಚಿಸಿದ್ದಾರೆ.

‘Ak Vs Ak' ಟ್ರೈಲರ್‌ನಿಂದ ಕೆಲವರಿಗೆ ನೋವು ಆಗಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಅದರಲ್ಲಿ ನಾನು ಅಸಂಬದ್ಧ ಭಾಷೆಯನ್ನು ಬಳಸುವಾಗ ವಾಯುಪಡೆಯ ಸಮವಸ್ತ್ರ ಧರಿಸಿರುತ್ತೇನೆ. ಹಾಗಾಗಿ ಸೇನೆಯ ಭಾವನೆಗಳನ್ನು ನೋಯಿಸಿದ್ದಕ್ಕಾಗಿ ಕ್ಷಮೆ ಕೇಳುತ್ತೇನೆ. ಚಿತ್ರದ ಹೀರೋ ನಟಿಸುವಾಗ ಆ ವಸ್ತ್ರವನ್ನು ಧರಿಸಿರುತ್ತಾನೆ. ಇದು ಉದ್ದೇಶಪೂರ್ವಕವಾಗಿ ನಡೆದ ಪ್ರಮಾದವಲ್ಲ. ಮಗಳು ಕಿಡ್ನಾಪ್ ಆಗುತ್ತಾಳೆ. ಆಗ ಆತನ ವರ್ತನೆ ಹೇಗಿರುತ್ತದೆ ಎಂಬುದನ್ನು ತೋರಿಸಿದ್ದೇವೆ. ನನಗೆ ಇಂಡಿಯನ್ ಏರ್​ಫೋರ್ಸ್ ಮೇಲೆ ತುಂಬ ಗೌರವವಿದೆ. ದಯಮಾಡಿ ನನ್ನಿಂದ ಕ್ಷಮೆ ಇರಲಿ. ಎಂದಿದ್ದಾರೆ.

ಅಂದಹಾಗೆ, ಅನುರಾಗ್ ಕಶ್ಯಪ್​ ನಿರ್ದೇಶನದಲ್ಲಿ ತಯಾರಾದ ಈ ಸಿನಿಮಾ ನೆಟ್​ಫ್ಲಿಕ್ಸ್​​ನಲ್ಲಿ ಡಿ. 24ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್​ಗೆ ಮೆಚ್ಚುಗೆಯೂ ವ್ಯಕ್ತವಾಗಿದೆ. ಅನಿಲ್ ಕಪೂರ್​ ಜತೆಗೆ ಸಹೋದರ ಬೋನಿ ಕಪೂರ್. ಸೋನಮ್ ಕಪೂರ್, ಜಾಹ್ನವಿ​ ಸಹ ಈ ಸಿನಿಮಾದಲ್ಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net