ಅಮ್ಮನ ಕೈಯಲ್ಲಿ ಮ್ಯಾಜಿಕ್ ಇದೆ

Manvitha Kamath 1
Published on

ಇಂದು ಅಮ್ಮಂದಿರ ದಿನ. ತಾಯ್ತನವನ್ನು ಸಂಭ್ರಮಿಸುವ ದಿನ. ಇದಕ್ಕೆ ಚಂದನವನದ ತಾರೆಯರು ಹೊರತಲ್ಲ. ಹಾಗೆ ನೋಡಿದರೆ, ಹಲವು ನಟಿಯರಿಗೆ ಅವರ ಅಮ್ಮಂದಿರೇ ಬೆಸ್ಟ್ ಫ್ರೆಂಡ್ಸ್. ಏಕೆಂದರೆ, ಮಕ್ಕಳ ಜತೆಗೆ ಚಿತ್ರೀಕರಣಕ್ಕೆ ಬರುವುದರ ಜತೆಗೆ, ಅವರ ಬೇಕು-ಬೇಡಗಳನ್ನು ನೋಡಿಕೊಳ್ಳುವುದೇ ತಾಯಂದಿರು. ಹೀಗೆ ಸಲಹುವ ತಾಯಂದಿರ ಬಗ್ಗೆ ನಮ್ಮ ಸ್ಯಾಂಡಲ್​ವುಡ್​ನ ನಟಿಯರು ಏನಂತಾರೆ.

ಅಮ್ಮಂದಿರ ದಿನವನ್ನು ಒಂದು ದಿನಕ್ಕೆ ಸೀಮಿತ ಮಾಡುವುದಕ್ಕೆ ನನಗೆ ಇಷ್ಟ ಇಲ್ಲ. ಅಮ್ಮ-ಮಗಳ ಸಂಬಂಧ ಪ್ರತಿ ದಿನ ಸಂಭ್ರಮಿಸುವ ಒಂದು ವಿಷಯ. ನಮ್ಮ ತಾಯಿಗೆ ನಾನೊಬ್ಬಳೇ ಮಗಳು. ನನ್ನ ಅಕ್ಕನ ಸ್ಥಾನವನ್ನು ಅಮ್ಮನೇ ತುಂಬಿದ್ದಾರೆ. ನಾನು ಮತ್ತು ಅಮ್ಮ, ಅಕ್ಕ-ತಂಗಿ ತರಹ ಇರುತ್ತೀವಿ. ನಗುತ್ತಾ, ಜಗಳವಾಡುತ್ತಾ, ಹುಸಿಮುನಿಸು ತೋರಿಸುತ್ತಾ ಇರುತ್ತೀವಿ. ಇನ್ನು ನಾನು ಗಮನಿಸಿರುವ ಒಂದು ವಿಷಯವೇನೆಂದರೆ, ಅವರು ನನಗೆ ಊಟ ಮಾಡಿಸಿದಾಗ ಬಹಳ ಟೇಸ್ಟಿಯಾಗಿರೋಷ್ಟೇ ಅಲ್ಲ, ಬಹಳ ಬೇಗ ಇಳಿಯತ್ತೆ. ನಾನೇ ಊಟ ಮಾಡಿದರೆ ಅಂತ ವಿಶೇಷವೇನೂ ಇರೋದಿಲ್ಲ. ಆದರೆ, ಅಮ್ಮನ ಊಟ ಮಾಡಿಸಿದರೆ ಬಹಳ ವಿಶೇಷವಾಗಿರುತ್ತೆ. ಅವರ ಕೈಯಲ್ಲಿ ಮ್ಯಾಜಿಕ್ ಇದೆ.

| ಮಾನ್ವಿತಾ ಕಾಮತ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net